ಚಳ್ಳಕೆರೆ ಮಾ.27
ಅಂಗಡಿ ಬೀಗ ಮುರಿದು ಕಳವು ಮಾಡಿದ್ದ ಆರೋಪಿಯನ್ನು ಚಳ್ಳಕೆರೆ ಪೋಲಿಸರು ಬಂಧಿದುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ಕುರುಬರ ಕಾಂಪ್ಲೆಕ್ಸ್ ಪಕ್ಕ ನಮ್ಮ ಪರಿವಾರ ಅಂಗಡಿಯಲ್ಲಿ ಗುರುವಾರ ಬೆಳಗಿನ ಜಾವ ಆರೆಯಿಂದ ಬಾಗಿಲು ಹೊಡೆದು ಅಂಗಡಿಯಲ್ಲಿನಸಾಮಾಗ್ರಿಗಳನ್ನು ಚಲ್ಲಾಪಿಲ್ಲಿ ಮಾಡಿ ಡ್ರಾನಲ್ಲಿದ್ದ ಚಿಲ್ಲರೆ ಹಣ ಪಡೆದು ಹೋಗಿರುವ ದೃಶ್ಯ ಸಿ.ಸಿ.ಕ್ಯಾಮರದಲ್ಲಿಸೆರೆಯಾಗಿತ್ತು.


ಅಂಗಡಿ ಮಾಲಿಕಸಚಿನ್ ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಪಿಎಸ್ ಐ ಶಿವರಸಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿ.ಸಿ ಕ್ಯಾಮರ ಪರಿಶೀಲನೆವನಡೆಸಿ ಆರೋಪಿ ಬಸಾಪುರ ಗ್ರಾಮದ ಎಸ್.ಕೆ.ಆದರ್ಶ(22) ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಂಗಡಿಯಲ್ಲಿದ್ದ3500 ರೂ ಗಳನ್ನು ತೆಗೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಂಗಬಂಧನಕ್ಕೆ ನೀಡಲಾಗಿದೆ ಎನ್ನಲಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.