ಚಳ್ಳಕೆರೆ ನಗರ ಆಶ್ರಯ ಸಮಿತಿಗೆ ನೂತನವಾಗಿ ಆಯ್ಕೆಯಾದ ಬಿ.ಹೆಚ್. ಹನುಮಂತಪ್ಪ, ಮುಜಿಬುಲ್ಲಾ ಎಸ್ ಬಿನ್, ಎಂ.ಬಿ. ಭಾಗ್ಯಮ್ಮ ಹಾಗೂ ಜಿ.ಟಿ. ಗೋವಿಂದರಾಜು ಅವರನ್ನು ನಾಮ ನಿರ್ದೇಶನ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಚಳ್ಳಕೆರೆ ನಗರ ಆಶ್ರಯ ಸಮಿತಿಯ ನೂತನ ಸದಸ್ಯರನ್ನು ಶಾಸಕ ಟಿ. ರಘುಮೂರ್ತಿ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಆಶ್ರಯ ಸಮಿತಿಯ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ವಸತಿ ಸೌಲಭ್ಯ ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಶಾಸಕ ಟಿ. ರಘುಮೂರ್ತಿ ಅವರು ಶುಭ ಹಾರೈಸಿದರು.
About The Author
Discover more from JANADHWANI NEWS
Subscribe to get the latest posts sent to your email.