September 15, 2025
IMG-20250227-WA0233.jpg

ಚಳ್ಳಕೆರೆ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಫೆ.21ರಂದು ತಳಕು ಹೋಬಳಿಯ ಗರಣಿ ಕ್ರಾಸ್ ರಸ್ತೆ ತಡೆ ನಡೆಸಿ ರೈತರು ಪ್ರತಿಭಟನೆ ನಡೆಸಿರು ಆದರೂ ನಮ್ಮ ಸಮಸ್ಯೆಗಳು ಇನ್ನು ಪರಿಹಾರ ಕಂಡಿಲ್ಲ ಎಂದು ಆರೋಪಿಸಿ ಗುರುವಾರ ತಾಲೂಕು ಪಂಚಾಯಿತಿ ಇಓ  ಶಶಿಧರ್ ರವರನ್ನು ಭೇಟಿ ಮಾಡಿ ರೈತರು ಮನವಿ ಮಾಡಿದರು. 

ಈ ವೇಳೆ ಮಾತನಾಡಿದ ರೈತ ಮುಖಂಡ ಬೇಡರೆಡ್ಡಿ ಹಳ್ಳಿ ಬಸವ ರೆಡ್ಡಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಉದ್ಯೋಗ ಖಾತ್ರಿ ಯೋಜನೆಯ ನಿಯಮಗಳನ್ನು ರೈತರ ಪರವಾಗಿ ರೂಪಿಸಬೇಕು ಹಾಗೂ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಹಗಲಿನಲ್ಲಿಯೂ ಬೀದಿ ದೀಪಗಳು ಉರಿಯುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗಿತ್ತು ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಲಾಗಿತ್ತು ಈಗ ಕೇಳಿದರೆ ತಾಲೂಕು ಪಂಚಾಯಿತಿ ಅಧಿಕಾರಿಗಳುಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ತಿಳಿಸಲಾಗಿದೆ ಹಾಗೂ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೂಡಲೇ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಇದೆ ವೇಳೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ನನಗೆ ಎರಡು ದಿನ ಸಮಯ ಕೊಡಿ ನಾನೇ ಖುದ್ದು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ರೈತರಿಗೆ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್ ಸಂಪತ್ ಕುಮಾರ್ ರೈತ ಮುಖಂಡರಾದ

ಚಂದ್ರಶೇಖರ್ ನಾಯಕ್ ಮೇಟಿ ನಾಯಕ್ ಒಬಿಯ ನಾಯಕ್ ಮರಹಳ್ಳಿ ರವಿಕುಮಾರ್ ಕೋನ ಸಾಗರ ಮಂಜುನಾಥ್ ನರಸಿಂಹ ರೆಡ್ಡಿ ಬೊಮ್ಮಲಿಂಗನಹಳ್ಳಿ ಮಂಜುನಾಥ್ ಅಶೋಕ್ ವೆಂಕಟೇಶ್ ರಂಗಾರೆಡ್ಡಿ ಸಣ್ಣ ತಿಪ್ಪೇಸ್ವಾಮಿ ಮಲ್ಲಸಮುದ್ರ ಗಂಗಾಧರ್ ಅಂಜಿನಪ್ಪ ಸತೀಶ್

ಮುಂತಾದ ಮುಖಂಡರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading