
ನಾಯಕನಹಟ್ಟಿ ಬಿಜೆಪಿ ಮಂಡಲ ವತಿಯಿಂದ ರೋಗಿಗಳಿಗೆ ಹಾಲು ಬ್ರೆಡ್ಡು ಹಣ್ಣು ವಿತರಣೆ.
ನಾಯಕನಹಟ್ಟಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರವರ 82ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಬಡ ರೋಗಿಗಳಿಗೆ ಹಾಲು ಬ್ರೆಡ್ಡು ಹಣ್ಣುಗಳನ್ನು ಬಿಜೆಪಿ ಮಂಡಲದ ವತಿಯಿಂದ ವಿತರಣೆ ಮಾಡಿದರು.
ನಂತರ ಮಾಜಿ ಮಂಡಲ ಅಧ್ಯಕ್ಷ ಎಂ ವೈ ಟಿ ಸ್ವಾಮಿ ಮಾತನಾಡಿ ದೇಶ ಕಂಡ ಅಪ್ರತಿಮ ರಾಜಕಾರಣಿ ಬಡವರ ಬಂಧು ರೈತ ನಾಯಕ ಸನ್ಮಾನ್ಯ ಬಿಎಸ್ ಯಡಿಯೂರಪ್ಪನವರ 82ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಬಿಜೆಪಿ ಮಂಡಲದ ವತಿಯಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ಹೆಸರಿನಲ್ಲಿ ಅರ್ಚನೆ ಮಾಡಿಸಿಲಾಯಿತು.ನಂತರ ಸಮುದಾಯ ಕೇಂದ್ರದ ಒಳರೋಗಿಗಳಿಗೆ ಹಾಲು ಹಣ್ಣು ಬ್ಲಡ್ ಗಳನ್ನು ವಿತರಣೆ ಮಾಡುವುದರ ಮೂಲಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಭಗವಂತ ಉತ್ತಮ ಆರೋಗ್ಯ ನೀಡಿ, ಐಶ್ವರ್ಯ ನೀಡಿ ಅವರ ಕುಟುಂಬದ ಕುಡಿ ಬಿ ವೈ ವಿಜಯೇಂದ್ರ ರವರ ರಾಜಕೀಯ ಜೀವನ ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು.
ನಂತರ ಮಂಡಲ ಅಧ್ಯಕ್ಷ ಎಂ.ಮಲ್ಲೇಶ್ ಚನ್ನಗಾನಹಳ್ಳಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಪ್ಪಾಜಿಯವರ 82ನೇ ಹುಟ್ಟುಹಬ್ಬದ ಶುಭಾಶಯಗಳುನ್ನು ಕೋರುತ್ತಾ ದೇವರು ಉತ್ತಮ ಆರೋಗ್ಯ ಐಶ್ವರ್ಯ ಕರುಣಿಸಲಿ ಎಂದರು. ಅವರ ಮಗನಾದ ವಿಜಯೇಂದ್ರಣ್ಣನವರ ರಾಜಕೀಯ ಭವಿಷ್ಯ ಉಜ್ವಲಗೊಳ್ಳಲಿ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ರಾಜ್ಯದ ರೈತರಿಗೆ ಮತ್ತು ಬಡವರ ಏಳಿಗೆಗೆ ಶ್ರಮಿಸುತ್ತಾರೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ. ಶಿವಣ್ಣ , ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ , ಗುಂತಕೋಲಮ್ಮನಹಳ್ಳಿ ಎನ್ ತಿಪ್ಪೇಸ್ವಾಮಿ, ಜಾಗನೂರಹಟ್ಟಿ ನಾಗರಾಜ್, ಮಲ್ಲೂರಹಳ್ಳಿ ಮಲ್ಲಯ್ಯ, ಚಿಕ್ಕಮನಹಳ್ಳಿ ರಾಜಣ್ಣ, ಬೋಸೆದೇವರಹಟ್ಟಿ ಬಿ. ಓ. ಬೋಸೆರಂಗಪ್ಪ, ಕೆ. ಆರ್, ಬೋರಯ್ಯ, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ತಿಪ್ಪೇಸ್ವಾಮಿ ಹಟ್ಟೆರ ಇನ್ನು ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.