
ಚಳ್ಳಕೆರೆ ಫೆ.27.ಸಾರ್ವಜನಿಕರ ವಿರೋಧದ ನಡುವೆ ವಿದ್ಯುತ್ ಇಲಾಖೆ ರಸ್ತೆಯಲ್ಲಿ ವಿದ್ಯುತ್ ಕಂಬನೆಟ್ಟು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ ಎಂದು ಗ್ರಾಮಸ್ಥರ ಅಕ್ರೋಶಹೊರ ಹಾಕಿದ್ದಾರೆ.







ಹೌದು
ಇದು ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಪಂ ವ್ಯಾಪ್ತಿಯ ಕಲಮರಹಳ್ಳಿ ಗ್ರಾಮದ ಪ್ರಮುಖ ರಸ್ತೆಯಾಗಿದ್ದು ರಸ್ತೆ ಪಕ್ಕದಲ್ಲಿಯೇ ಪ್ರಾಥಮಿಕ ಶಾಲೆ ಸರ್ಕಾರಿ ಆಸ್ಪತ್ರೆ ವಿದ್ಯುತ್ ಇಲಾಖೆ ಇದ್ದು ರಸ್ತೆ ಬದಿಯಲ್ಲಿ ಸಿಬ್ಬಂದಿಗಳು ರಸ್ತೆ ಮಧ್ಯದಲ್ಲಿ ಕಂಬನೆಟ್ಟು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ
ಈ ಹಿನ್ನೆಲೆಯಲ್ಲಿ ಭೂ ಹಿಡುವಳಿದಾರರು ಮತ್ತು ಪ್ರಭಾವಿಗಳ ಬೆಂಬಲದಿಂದ ವಿದ್ಯುತ್ ಇಲಾಖೆಯವರು ರಸ್ತೆಗಳಿಗೆ ಮಧ್ಯೆ ಆರು ಲೈಟ್ ಕಂಬಗಳಿದ್ದು ಸಾರ್ವಜನಿಕರಿಗೆ ಹಾಗೂ ವಾಹನ ಸವರರಿಗೆ ಕಿರಿಕಿರಿತಾಗುತ್ತಿದ್ದು ಇದರಿಂದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಹಲವು ಬಾರಿ ಗ್ರಾಮಸ್ಥರು ರಸ್ತೆ ಮಧ್ಯೆ ಇರುವ ಕಂಬಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಈಗಲಾದರೂ ಸಂಬಂಧಟ್ಟ ಅಧಿಕಾರಿಗಳು ರಸ್ತೆಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವರೇ ಕಾದು ನೋಡ ಬೇಕಿದೆ.
About The Author
Discover more from JANADHWANI NEWS
Subscribe to get the latest posts sent to your email.