ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಆಚರಣೆಗಳ ಅನಾವರಣ.ನಾಯಕನಹಟ್ಟಿ : ಹೋಬಳಿಯ ಹಿರೇಕೆರೆ ಕಾವಲಿನಲ್ಲಿ ಬುಡಕಟ್ಟು ಜನರ ಆರಾಧ್ಯ ದೇವತೆ ಹಿರೇಕೆರೆ ಕಾವಲುಚೌಡೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಂಗಳವಾರ ಸಾವಿರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿAದ ನಡೆಯಿತು.
ಹಿರೇಕೆರೆ ಕಾವಲು ಚೌಡೇಶ್ವರಿ ದೇವಿಯು ಸುತ್ತಮುತ್ತಲ ಗ್ರಾಮಗಳ ಆರಾದ್ಯ ದೇವತೆಯಾಗಿದ್ದಾಳೆ. ಜಾತ್ರೆಯ ಸಂದರ್ಭದಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಅನಾವರಣವಾದವು. ಎತ್ತಿನಹಟ್ಟಿ ಗೌಡರ ಮನೆಯಿಂದ ಬಲಿ ಅನ್ನ ತರಲಾಯಿತು. ಹಾಗೂ ಕಡಬನಕಟ್ಟೆ ಗೊಲ್ಲರಹಟ್ಟಿ, ಜೋಗಿಹಟ್ಟಿಯಿಂದ ಕಾಸು ಮೀಸಲು, ಮೊಸರು ಕುಂಭ, ಜಿನಿಗೆಹಾಲು ತಂದು ದೇವರಿಗೆ ಮತ್ತು ರಥದ ನಾಲ್ಕು ಚಕ್ರಗಳಿಗೆ ಎಡೆಹಾಕಿದರು. ಹಾಗೂ ಕಹಳೆ, ಉರುಮೆಗಳು ಸೇರಿದಂತೆ ಹಲವು ಜಾನಪದ ಆಚರಣೆಗಳು ಕಂಡು ಬಂದವು.
ರಥೋತ್ಸವಕ್ಕೂ ಮೊದಲು ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆಯಲ್ಲಿ ಎತ್ತಿನಹಟ್ಟಿ ಗ್ರಾಮದ ಎಸ್.ಟಿ.ತಿಪ್ಪೇಸ್ವಾಮಿ ರೂ.90ಸಾವಿರಕ್ಕೆ ಹರಾಜಿನಲ್ಲಿ ತೆಗೆದುಕೊಂಡರು. ನಂತರ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಹಲವು ಬಣ್ಣಗಳ ಬಾವುಟಗಳಿಂದ ಸುಂದರವಾಗಿ ಅಲಂಕೃತಗೊAಡ ರಥವನ್ನು ದೇವಾಲಯದ ಎದುರು ಇರುವ ಪಾದಗಟ್ಟೆಯ ಬಳಿಗೆ ನೆರೆದ ಸಾವಿರಾರು ಭಕ್ತರು ಎಳೆದು ತಂದು ಪೂಜೆಯನ್ನು ಮಾಡಿ, ಪುನಃ ದೇವಾಲಯದ ಸ್ವಸ್ಥಾನಕ್ಕೆ ರಥವನ್ನು ಎಳೆದು ತಂದು ದೇವರನ್ನು ಗುಡಿದುಂಬಿಸಲಾಯಿತು.
ನೆರೆದ ಸಾವಿರಾರು ಭಕ್ತರು ರಥಕ್ಕೆ ಕಾಳುಮೆಣಸು, ಚೂರುಬೆಲ್ಲ, ಮಂಡಕ್ಕಿ ಸೇರಿದಂತೆ ದವಸ ದಾನ್ಯಗಳನ್ನು ಎರಚಿ ಭಕ್ತಿಯನ್ನು ಅರ್ಪಿಸಿದರು. ಮೂರು ದಿನಗಳ ಜಾತ್ರೆ ಇದಾಗಿದ್ದು, ಸಾವಿರಾರು ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ ಸಾಕಷ್ಟು ಅಂಗಡಿ ಮುಂಗಟ್ಟುಗಳಲ್ಲಿ ತಿಂಡಿ ತಿನಿಸುಗಳು ಮತ್ತು ಅಲಂಕಾರಿಕ ವಸ್ತುಗಳ ಕೊಳ್ಳುವಲ್ಲಿ ಜನರು ನಿರತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥೋತ್ಸವಕ್ಕೆ ಜಾನಪದ ಕಲಾವಾದ್ಯಗಳು ಮೆರಗು ನೀಡಿದ್ದವು.ಇದೇ ವೇಳೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ದೇವಾಲಯ ಸಮಿತಿ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ(ಎತ್ತಿನಹಟ್ಟಿ ಗೌಡ್ರು), ಕಾರ್ಯದರ್ಶಿ ಎಂ.ವೈ.ಟಿ.ಸ್ವಾಮಿ, ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ, ಜೆ.ಪಿ.ರವಿಶಂಕರ್, ಜಿ.ಟಿ.ದೇವರಾಜ್, ನಲಗೇತನಹಟ್ಟಿ ನಲ್ಲನ ದೊಡ್ಡ ಬೋರಯ್ಯ, ಜಿ.ವೈ. ತಿಪ್ಪೇಸ್ವಾಮಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ ಎನ್ .ಮುತ್ತಯ್ಯ, ಸದಸ್ಯ ಜೆ.ಮಲ್ಲಿಕಾರ್ಜುನ, ಪ.ಪಂ.ಸದಸ್ಯರಾದ ಟಿ.ಮಹೇಶ್ವರಿ, ಸುನೀತಾ, ಎಂ.ಟಿ.ಮAಜುನಾಥ್, ಪಿ.ಓಬಯ್ಯ ಮುಖಂಡರಾದ ಪಿ.ಯು.ಸುನೀಲ್‌ಕುಮಾರ್, ಚಿನ್ನಯ್ಯ, ಕಾಕಸೂರಯ್ಯ ಮತ್ತು ಸ್ಥಳೀಯ ಗ್ರಾ.ಪಂ.ಪ್ರತಿನಿಧಿಗಳು, ಸಾವಿರಾರು ಭಕ್ತರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.