ಚಳ್ಳಕೆರೆ:
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮ ಪಂಚಾಯಿತಿಯ 2026–27ನೇ ಸಾಲಿನ ಆಯ–ವ್ಯಯವನ್ನು ಪಂಚಾಯಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ನೀಡಲಾಗಿದೆ. ಈ ಸಾಲಿನ ಬಜೆಟ್‌ನಲ್ಲಿ ಪಂಚಾಯಿತಿಗೆ ನಿರೀಕ್ಷಿತ ಆದಾಯಕ್ಕಿಂತ ವೆಚ್ಚ ಹೆಚ್ಚಿರುವುದು ಗಮನಾರ್ಹವಾಗಿದೆ.
ಪಂಚಾಯಿತಿ ಮಂಡಿಸಿದ

ಆಯವ್ಯಯದಂತೆ, ಒಟ್ಟು ಆದಾಯ ರೂ. 2,99,22,000/- ಆಗಿದ್ದು, ಒಟ್ಟು ವೆಚ್ಚ ರೂ. 3,13 ಲಕ್ಷ ರುಇ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಪಂಚಾಯಿತಿಗೆ ರೂ. 14,ಲಕ್ಷ ರೂ ಉಳಿತಾ
ಬಜೆಟ್‌ನಲ್ಲಿ ಗ್ರಾಮದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕುಡಿಯುವ ನೀರು, ಸ್ವಚ್ಛತೆ, ರಸ್ತೆ, ಚರಂಡಿ ವ್ಯವಸ್ಥೆ, ವಿದ್ಯುತ್ ದೀಪಗಳು, ಸಾರ್ವಜನಿಕ ಸ್ವಚ್ಛತೆ ಹಾಗೂ ಆಡಳಿತ ವೆಚ್ಚಗಳಿಗೆ ಅನುದಾನ ಮೀಸಲಿಡಲಾಗಿದೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳ ಮೇಲೆ ಪಂಚಾಯಿತಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.
ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರು, ಕೊರತೆ ಬಜೆಟ್ ಇದ್ದರೂ ಸರ್ಕಾರದ ಅನುದಾನ ಹಾಗೂ ಆದಾಯ ಹೆಚ್ಚಿಸುವ ಕ್ರಮಗಳಿಂದ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮಸ್ಥರ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಾಗಿ ಪಂಚಾಯಿತಿ ಭರವಸೆ ನೀಡಿದೆ.
ವರದಿ: ಜನಧ್ವನಿ ನ್ಯೂಸ್
About The Author
Discover more from JANADHWANI NEWS
Subscribe to get the latest posts sent to your email.