ಹಿರಿಯೂರು:
ಬಿ.ಜೆ.ಪಿ ಮುಖಂಡರಾದ ಗಾಲಿಜನಾರ್ಧನರೆಡ್ಡಿಯವರು ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವ ವಾಲ್ಮೀಕಿ ಸಮುದಾಯದ ಪ್ರಶ್ನಾತೀತ ನಾಯಕರಾದ ಬಿ.ರಾಮುಲುರವರನ್ನು ಕ್ರಿಮಿನಲ್ ಎಂದು ಬಿಂಬಿಸುವುದಲ್ಲದೆ, ವಾಲ್ಮೀಕಿ ಸಮಾಜದ ಬಗ್ಗೆ ಕೀಳುಮಾತು ಆಡಿರುವುದರಿಂದ ಸಮಸ್ತ ವಾಲ್ಮೀಕಿ ನಾಯಕ ಸಮುದಾಯವು ಗಾಲಿಜನಾರ್ಧನರೆಡ್ಡಿಯವರಿಗೆ ಎಚ್ಚರಿಕೆ ನೀಡುತ್ತದೆ ಎಂಬುದಾಗಿ ವಾಲ್ಮೀಕಿ ಸಮಾಜದ ಮುಖಂಡರಾದ ಆನೆಸಿದ್ರಿ ಎ.ಕೃಷ್ಣಪ್ಪ ಹೇಳಿದರು.
ನಗರದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ವತಿಯಿಂದ ಗಾಲಿಜನಾರ್ಧನರೆಡ್ಡಿಯವರು ಮಾಧ್ಯಮಗಳಲ್ಲಿ ನೀಡಿರುವ ಹೇಳಿಕೆಯನ್ನು ವಿರೋಧಿಸಿ, ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಬಿ.ಜೆ.ಪಿ ಮುಖಂಡರಾದ ಗಾಲಿಜನಾರ್ಧನರೆಡ್ಡಿಯವರ ಹೇಳಿಕೆಯನ್ನು ಖಂಡಿಸಿ ಅವರು ಮಾತನಾಡಿದರು.
ಶ್ರೀರಾಮುಲುರವರಿಂದ ಜನಾರ್ಧನರೆಡ್ಡಿಯೇ ಹೊರತು ಜನಾರ್ಧನರೆಡ್ಡಿಯಿಂದ ಶ್ರೀರಾಮುಲು ಅಲ್ಲ ಎಂಬುದಾಗಿ ತಾಲ್ಲೂಕು ವಾಲ್ಮೀಕಿನಾಯಕ ಸಮಾಜವು ಗಾಲಿಜನಾರ್ಧನರೆಡ್ಡಿಯವರಿಗೆ ಎಚ್ಚರಿಕೆ ನೀಡುತ್ತದೆ.ಮುಂದಿನ ದಿನಗಳಲ್ಲಿ ಇದೇ ರೀತಿಯಾದರೆ ಉಗ್ರಪ್ರತಿಭಟನೆ ನಡೆಸಲಾಗುತ್ತದೆ ಎಂಬುದಾಗಿ ಅವರು ಎಚ್ಚರಿಸಿದರು.
ಈ ಸಭೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರುಗಳಾದ ಆನೆಸಿದ್ರಿ ಎ.ಕೃಷ್ಣಪ್ಪ, ಮಾಯಸಂದ್ರ ಮಂಜುನಾಥ್, ಮೇಟಿಕುರ್ಕೆ ಗ್ರಾಮಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೇಶ್, ಮರಡಿವಿಶ್ವನಾಥ್, ಭೀಮಣ್ಣಕಾಟನಾಯಕನಹಳ್ಳಿ, ನರಸಿಂಹಮೂರ್ತಿ ಅಂಬಲಗೆರೆ, ಚಿಕ್ಕರಂಗಪ್ಪ, ಕೊಟ್ಟಿಗೆ ಮಧುಕರ್, ಹೇಮದಳ ದೇವರಾಜ್, ಕೆ.ಎಂ.ಕೊಟ್ಟಿಗೆ ಪ್ರಜ್ವಲ್, ಸುರೇಶ್ ಹುಲಿತೊಟ್ಲು ಹಾಗೂ ಸಮಸ್ತ ನಾಯಕ ಜನಾಂಗದವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.