ಹಿರಿಯೂರು :
ನಗರದ ಟಿಬಿ ವೃತ್ತದಿಂದ ತಾಲೂಕು ಕಚೇರಿಯವರೆಗೂ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ರಸ್ತೆಗೆ ಹೆಚ್ಚುವರಿಯಾಗಿ ನಿರ್ಮಿಸಿರುವ ಕಟ್ಟಡವನ್ನು ಮಾಲೀಕರಾದ ಎಸ್.ಮಣಿರವರು ಉದಯ ಹೋಟೆಲ್ ಚೆನ್ನೈ ಮೂಲದ ಪಾರ ಮೌಂಟ್ ಬಿಲ್ಡಿಂಗ್ ಲಿಫ್ಟಿಂಗ್ ಸರ್ವಿಸಸ್ ಸಿ.ಮೋಹನ್ ರಾಜು ರವರಿಂದ ಒತ್ತುವರಿ ಕಟ್ಟಡವನ್ನು ರಸ್ತೆಯ ಮಾರ್ಜಿನನ್ನು ಬಿಟ್ಟು ಹಿಂಭಾಗಕ್ಕೆ ಜಾಕ್ ಮುಖಾಂತರ ಸರಗಿಸಿರಿಸಿಕೊಳ್ಳುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಹೇಳುವ ಮೂಲಕ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಈ ಕಟ್ಟಡದ ಸ್ಥಳಾಂತರ ಕಾಮಗಾರಿಗೆ ನಗರಸಭಾ ವತಿಯಿಂದ ಕಟ್ಟಡ ಪರವಾನಿಗೆಯನ್ನು ಸ್ಥಳದಲ್ಲಿಯೇ ವಿತರಿಸುವ ಜೊತೆಗೆ ರಸ್ತೆ ಕಾಮಗಾರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬಿಲ್ಡಿಂಗ್ ಮಾಲೀಕರು ಸ್ವಯಂಪ್ರೇರಿತರಾಗಿ ಸ್ಥಳಾಂತರಗೊಳಿಸಿಕೊಳ್ಳುತ್ತಿರುವ ಕಟ್ಟಡದ ಮಾಲೀಕರಾದ ಎಸ್.ಮಣಿ ರವರಿಗೆ ನಗರಸಭಾ ವತಿಯಿಂದ ಧನ್ಯವಾದಗಳನ್ನು ತಿಳಿಸಿ, ನಂತರ ಅವರು ಮಾತನಾಡಿದರು.
ನಗರಸಭೆಯ ಅಧ್ಯಕ್ಷರಾದ ಜೆ.ಆರ್.ಅಜಯ್ ಕುಮಾರ್ ಮಾತನಾಡಿ, ನಗರದ ಇತರೆ ಕಟ್ಟಡದ ಮಾಲೀಕರುಗಳು ಸಹ ಇದೇ ರೀತಿಯಲ್ಲಿ ಸ್ವಯಂ ಪ್ರೇರಿತರಾಗಿ ಕಟ್ಟಡದ ಒತ್ತುವರಿಗಳನ್ನು ತೆರವುಗೊಳಿಸಿಕೊಂಡು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ. ನಗರಸಭೆಯ ಅಧ್ಯಕ್ಷರಾದ ಜೆ.ಆರ್.ಅಜಯ್ ಕುಮಾರ್, ನಗರಸಭೆ ಪೌರಾಯುಕ್ತರಾದ ಎ.ವಾಸೀಂ ನಗರಸಭೆ ಸದಸ್ಯರಾದ ಎಂ.ಡಿ.ಸಣ್ಣಪ್ಪ, ಹಾಗೂ ಪಿ.ಎಲ್.ಡಿ ಬ್ಯಾಂಕಿನ ಸದಸ್ಯರಾದ ಸಾದತ್ ಉಲ್ಲಾ ಸೇರಿದಂತೆ ಕಟ್ಟಡ ಮಾಲೀಕರಾದ ಮಣಿ, ನಗರಸಭೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.