March 16, 2026
IMG-20250127-WA0233.jpg

ಚಳ್ಳಕೆರೆ

ವಿದ್ಯುತ್ ಕಣ್ಣ ಮುಚ್ಚಾಲೆಯಿಂದ ತಳಕು ಬೆಸ್ಕಾಂ ಕಚೇರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮುತ್ತಿಗೆ ಹಾಕಲಾಯಿತು
ಪ್ರತಿಭಟನೆ ಉದ್ದೇಶ ಮಾತನಾಡಿದ ಆರ್ ಬಿ ನಿಜಲಿಂಗಪ್ಪ ಹಿರೇಹಳ್ಳಿ ಬೆಸ್ಕಾಂ ಕಛೇರಿ ವ್ಯಾಪ್ತಿಯಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ಹಗಲಿನಲ್ಲಿ ಒಂದು ಗಂಟೆಯೂ ವಿದ್ಯುತ್ ಸರಬರಾಜು ಆಗುತ್ತಿಲ್ಲ ಬೆಳೆಗಳು ಒಣಗುತ್ತಿದ್ದು ಹಗಲು ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು ಇದಕ್ಕೆ ಉತ್ತರಿಸಿದ ತಳಕು AEE ಮಮತಾ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಅಡೆಚಣೆಯಾಗಿದ್ದು ಇನ್ನು ಎರಡು ದಿನಗಳಲ್ಲಿ ಹಗಲು ವಿದ್ಯುತ್ ಪೂರೈಸುತ್ತೇವೆ ಎಂದು ಭರವಸೆ ನೀಡಿದರು ಪ್ರತಿಭಟನೆಯಲ್ಲಿ ಮಾತನಾಡಿದ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಸುಮಾರು ವರ್ಷಗಳಿಂದ ಲೈನ್ ಮ್ಯಾನ್ ಗಳು ಒಂದೇ ಭಾಗದಲ್ಲಿ ಕೆಲಸ ಮಾಡುತ್ತಿದ್ದು ಅಂಥವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕೆಂದು ತಿಳಿಸಿದರು ಜಿಲ್ಲಾಧ್ಯಕ್ಷರಾದ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ತ್ವರಿತಗತಿಯಲ್ಲಿ ಸುಟ್ಟವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಿ ಕೊಡಬೇಕೆಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತ ಮುಖಂಡರಾದ ಎನ್ ಬಸವರಾಜಪ್ಪ ಮುದ್ದಾಪುರ ನಾಗಣ್ಣ ಮುದ್ದಾಪುರ ಮಂಜಣ್ಣ ಎಸ್ ರವಿಕುಮಾರ್ ಚಿಕ್ಕಹಳ್ಳಿ ರಂಗಾರೆಡ್ಡಿ ಬಸವರಾಜ್ ಹರ್ಷ ಬಸವರೆಡ್ಡಿ ನೂರಾರು ರೈತರು ಭಾಗವಹಿಸಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading