ಚಳ್ಳಕೆರೆ : ಅವಲಂಬಿತ ತೀರಾ ಹಿಂದುಳಿದ ಸಮುದಾಯಗಳಿಗೆ ಹಲವು ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಸರ್ಕಾರಕ್ಕೆ ಮನವಿ ಮಾಡಿದರು.
ರಾಷ್ಟ್ರೀಯ ಕುಶಲಕರ್ಮಿಗಳ ದಿನಾಚರಣೆ ಹಾಗೂ ಪ್ರಯುಕ್ತ ನಗರದ ಛೇಂಬರ್‌ಆಫ್ ಕಾಮರ್ಸ್ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಕಮ್ಮಾರರ ಸಂಘ ಆಯೋಜಿಸಿದ್ದ ಕಮ್ಮಾರ ಕಶಲಕರ್ಮಿಗಳ ಜಾಗೃತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮತನಾಡಿ.
ಸಾಮಾಜಿಕವಾಗಿ ಗುರುತಿಸುವುದಲ್ಲದೆ ಕಮ್ಮಾರರ ಸಮಾಜಕ್ಕೆ ಸ್ಥಳೀಯ ಚುನಾವಣೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಅತ್ಯಾವಶ್ಯಕವಾಗಿದೆ. ಮತ್ತು ಬಡತನದ ನೆಪದಲ್ಲಿ ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದೆ. ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು. ಸಂದರ್ಭದಲ್ಲಿ ಕಮ್ಮಾರ ಕುಶಲಕರ್ಮಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಭರವಸೆ ನೀಡಿದರು..





ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, ಬಿತ್ತನೆ ಮತ್ತು ಬೆಳೆ ಎಲ್ಲೆಲ್ಲಿ ಬೆಳೆಯುತ್ತಾರೊ ಅಲ್ಲಿಗೆ ಹೋಗಿ ಕೃಷಿ ಸಲಕರಣೆ ತಯಾರಿಸಿ ರೈತವರ್ಗಕ್ಕೆ ಸಹಕಾರ ನೀಡುತ್ತಾ ಬಂದಿರುವ ಕಮ್ಮಾರರ ಸಮಾಜ ಶ್ರಮವನ್ನೇ ಹೊದ್ದುಕೊಂಡು ಕಷ್ಟಕರ ಜೀವನ ನಡೆಸುತ್ತಿದೆ.
ಯಾವುದೇ ಉತ್ಪಾದನೆಯನ್ನು ಬಯಸದೆ ಊರೂರು ಅಲೆದು ಅಲೆಮಾರಿ ಬದುಕು ಕಮ್ಮಾರರದಾಗಿದೆ. ಹೀಗಾಗಿ ಇಂಥ ಹಲವು ಸಮುದಾಯಗಳನ್ನು ಸರ್ಕಾರ ಮುಖ್ಯವಾಹಿನಿಗೆ ತರಬೇಕು ನಾವು ತಯಾರು ಮಾಡುವಂತಹ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ, ನಾವು ಆಧುನಿಕತೆಯನ್ನು ಬದಿ ಗೊತ್ತಿದ್ದರೆ ಉದ್ದಾರ ಆಗುವುದಿಲ್ಲ ಸಾಧ್ಯವಿಲ್ಲ. ಇಂತಹ ಹಿಂದುಳಿದ ಸಮಾಜಕ್ಕೆ ಆರ್ಥಿಕತೆ ಶಿಕ್ಷಣ ಅಗತ್ಯವಾಗಿ ಬೇಕೇ ಬೇಕು ಎಂದು ಹೇಳಿದರು….
ದಾವಣಗೆರೆ ಪ್ರಾಧ್ಯಾಪಕಿ ಪ್ರೊ.ಬಿ.ಜಿ.ಸಿದ್ದಲಿಂಗಮ್ಮರವರು, ಭಾರತೀಯ ಸಮಾಜದ ಔಧ್ಯೋಗಿಕ ಕ್ಷೇತ್ರ ಮತ್ತು ಲೋಹತಯಾರಿಕೆ ಕಮ್ಮಾರರ ಕೊಡುಗೆ ಕೈಗಾರಿಕೀಕರಣ ಮತ್ತು ಕಮ್ಮಾರ ಕುಶಲಕರ್ಮಿಗಳ ಪ್ರಸ್ತುತ ಸ್ಥಿತಿಗತಿ ಕುರಿತು ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ಖಾದಿ ಮತ್ತು ಗ್ರಾಮೋಧ್ಯೋಗ ಇಲಾಖೆ ನಿರ್ದೇಶಕ ವಸಂತಕುಮಾರ್. ಮಾತನಾಡಿದರು.
ಕಮ್ಮಾರರ ಸಮಾಜದ ಮುಖಂಡ ರವಿಕುಮಾರ್, ಶಾಸಕರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ಪಂಚಗ್ಯಾರಂಟಿ ಯೋಜನೆ ನಿರ್ವಹಣಾ ಸಮಿತಿ ತಾಲ್ಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ, ನಗರಂಗೆರೆ ರವಿಕುಮಾರ್ ಸಮಾಜದ ಮುಖಂಡರಾದ ರಾಧಸ್ವಾಮಿ, ವಿಶ್ವನಾಥ ಹನುಮಂತಪ್ಪ ಜನಾರ್ಧನ ಬಾಬು ,ಆನಂದ ಮಾರುತಿ ಗೋಪಿನಾಥ ಮೊಹನ್ ಬಾಬು ಶಿವಣ್ಣ ಕಾಪರಹಳ್ಳಿ ರ
ಭಾಗ್ಯಮ್ಮ ರಾಧಮ್ಮ ರಘು ಇದ್ದರು,
About The Author
Discover more from JANADHWANI NEWS
Subscribe to get the latest posts sent to your email.