ಚಳ್ಳಕೆರೆ ಜ.27
ಸ್ಥಳೀಯ ರೈತರ ಸಾವಿರಾರು ಎಕರೆ ಭೂಮಿಯಿದ್ದು ರೈತರ ವಾಹನಗಳಿಗೆ ಉಚಿತ ಟೋಲ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಹಿರೆಹಳ್ಳಿ ಟೋಲ್ ಬಳಿ ರಸ್ತೆ ತಡೆ ನಡೆಸಿ ಪ್ರತಿ ಭಟನೆ ನಡೆಸಿದರು.
ನಾಲ್ಕು ವರ್ಷಗಳಿಂದ ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ನೆನೆಗುದಿಗೆ ಬಿದ್ದ ಕಾಮಗಳ ದುರಸ್ಥಿ ರೈತರ ಜಮೀನುಗಳಿಗೆ ಸರ್ವೀಸ್ ರಸ್ತೆ ತಿಳಿಸಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮಾಡಿಲ್ಲ.
ಹಿರೇಹಳ್ಳಿ ಬಸ್‌ಸ್ಟ್ಯಾಂಡ್‌ನಲ್ಲಿ ಚರಂಡಿ ಹಾಗೂ ತಂಗುದಾಣ ಮತ್ತು ಬುಕ್ಲೋರಹಳ್ಳಿ (ಗೊಲ್ಲರಹಟ್ಟಿ)ಯಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡುವುದು
ಈ ಹಿರೇಹಳ್ಳಿ ಹಾಗೂ ಹಿರೇಹಳ್ಳಿ ಸುತ್ತಮುತ್ತಲಿನ 1ಸಾವಿರ ಎಕರೆ ಜಮೀನುಗಳಿಂದ ಹರಿದು ಬರುವ ನೀರು ಬಂಜಿಗೆರೆ ಕರೆಗೆ ಹರಿದು ಹೋಗುತ್ತಿತ್ತು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಕಾಲುವೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುತ್ತೀರಿ, ಹಾಗಾಗಿ ನೀರೆಲ್ಲಾ ರೈತರ
ಜಮೀನುಗಳಲ್ಲಿ ನಿಲ್ಲುತ್ತಿದೆ. ಹೀಗೆ ರೈತರ ಜಮೀನುಗಳಲ್ಲಿ ನೀರು ನಿಲ್ಲದ ಹಾಗೇ ಪುನಃ ಕಾಲುವೆ ನಿರ್ಮಾಣ ಮಾಡಬೇಕು.
ಈ ಹಿರೇಹಳ್ಳಿ ಬಸ್‌ಸ್ಟಾಂಡ್‌ನಿಂದ ಗ್ರಾಮದ ಕಡೆಗೆ ಹೋಗುವ ರಸ್ತೆ ಅಗಲೀಕರಣ ಮಾಡಲು 4 ವರ್ಷಗಳ ಹಿಂದೆಯೇ ಅಕ್ಕ ಪಕ್ಕದ ಮನೆಗಳ ತೆರವು
ಮಾಡಲು ಸುಮಾರು 3 ಕೋಟಿ ಹಣ ಬಿಡುಗಡೆ ಮಾಡಿದ್ದು ಇಲ್ಲಿಯವರೆಗೆ ರಸ್ತೆ ಅಗಲೀಕರಣ ಕಾರ್ಯಮಾಡಿಲ್ಲ ನಮ್ಮ ಬೇಡಿಕೆಗಳು ಈಡೇರುವ ತನಕ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡ ನಿಜಲಿಂಗಪ್ಪ ಹಾಗೂ ರೈತ ಮುಖಂಡರು ಅಕ್ರೋಶ ಹೊರ ಹಾಕಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ರೇಹಾನ್ ಪಾಷ.ಸಾರಿಗೆ ಬಸ್ ಅಧಿಕಾರಿಗಳು.ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಅಧಿಕಾರಿಗಳು.ಪೋಲಿಸ್ ಇಲಾಖೆ ಅಧಿಕಾರಿಗಳು ಭೇಟಿ ಮೂರು ತಿಂಗಳ ಗಡುವಿನೊಳಗೆ ನಿಮ್ಮ ಬೇಡಿಕೆಗಳು ಈಡೇರಿಸುವ ಭರವಸೆ ಪ್ರತಿಭಟನೆ ಹಿಂಪಡೆದ ರೈತ ಸಂಘಟನೆಗಳು.








About The Author
Discover more from JANADHWANI NEWS
Subscribe to get the latest posts sent to your email.