ಹಿರಿಯೂರು :
ಕುಂಚಿಟಿಗರ ಮೂಲ ಪುರುಷರ ಭಾವಚಿತ್ರ ಹೊಂದಿರುವ ಕುಂಚಿಟಿಗ ಕುಲ ಬೆಡಗಿನ ಉಪಯುಕ್ತ ಮಾಹಿತಿ ಹೊಂದಿರುವ ಕುಂಚಿಟಿಗರ ಪಂಚಾಂಗ ಪ್ರತಿಯೊಬ್ಬ ಸ್ವಾಭಿಮಾನಿ ಕುಂಚಿಟಿಗರ ಮನೆಯಲ್ಲಿ ಇರಬೇಕು ಎಂಬುದಾಗಿ ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷರಾದ ಕಸವನಹಳ್ಳಿರಮೇಶ್ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟ ಮತ್ತು ಹಿರಿಯೂರು ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2025 ನೇ ವರ್ಷದ ಕುಂಚಿಟಿಗರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರರಾದ ಎಸ್.ವಿ. ರಂಗನಾಥ್ ಮಾತನಾಡಿ, ಇಂದಿನ ಪೀಳಿಗೆಯವರಿಗೆ ವೈವಾಹಿಕ ಸಂಬಂಧಗಳನ್ನು ಮಾಡುವಾಗ ನೆಂಟರು ಮತ್ತು ಅಣ್ಣ ತಮ್ಮಂದಿರು ಹಾಗೂ ದಾಯಾದಿಗಳ ಬಗ್ಗೆ ಗುರು-ಹಿರಿಯರು ಪಾರಂಪರಿಕ ರೂಢಿಗತ ಮಾಹಿತಿ ಖಚಿತಪಡಿಸಿಕೊಂಡು ವೈವಾಹಿಕ ಬದುಕು ಕಟ್ಟಿಕೊಳ್ಳಲು ಕುಂಚಿಟಿಗರ ದಿನ ದರ್ಶಿಕೆ ದಾರಿದೀಪವಾಗಲಿದೆ ಎಂಬುದಾಗಿ ಅವರು ಹೇಳಿದರು.
ಪ್ರಧಾನ ಕಾರ್ಯದರ್ಶಿ ವಿ. ಕುಬೇರಪ್ಪ ಮಾತನಾಡಿ, ಮಾರುಕಟ್ಟೆಯಲ್ಲಿ ದೊರೆಯುವ ತರಾವರಿ ಕ್ಯಾಲೆಂಡರ್ ಗಳನ್ನು ತರುವ ಬದಲು ಕುಂಚಿಟಿಗರ ಕ್ಯಾಲೆಂಡರ್ ಗಳನ್ನು ಸಂಘದ ಪದಾಧಿಕಾರಿಗಳಿಗೆ ಸಂಪರ್ಕಿಸಿ ಸಮಸ್ಥ ಕುಂಚಿಟಿಗರು ಪಡೆಯಬೇಕು ಎಂಬುದಾಗಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮೈಸೂರು ಶಿವಣ್ಣ ಹಾಗೂ ಗೌರವಾಧ್ಯಕ್ಷರಾದ ಗಡಾರಿ ಕೃಷ್ಣಪ್ಪ ಇವರುಗಳು ಕುಂಚಿಟಿಗರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಮಾಸ್ತಿಕಟ್ಟೆ ಚಂದ್ರಶೇಖರ್ ರವರ ರಜತಗಿರಿ ನಿಲಯದಲ್ಲಿ ಸತ್ಯನಾರಾಯಣ ಪೂಜಾ ಕೈಂಕರ್ಯದಲ್ಲಿ ಸಂಘದ ಪದಾಧಿಕಾರಿಗಳು ಭಾಗವಹಿಸಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕುಂಚಿಟಿಗರ ಕೇಂದ್ರ ಓ.ಬಿ.ಸಿ. ಮೀಸಲಾತಿಗಾಗಿ ಪ್ರಾರ್ಥಿಸಿದರು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಮಲ್ಲಪ್ಪನಹಳ್ಳಿ ಜೋಗೇಶ್, ಖಜಾಂಚಿ ಪೆಪ್ಸಿ ಹನುಮಂತರಾಯ, ಕೆ.ಜಿ.ಹೆಚ್.ಗೌಡ್ರು, ವಕೀಲರಾದ ಲಕ್ಷ್ಮಣ್ ಗೌಡ್ರು, ಬಾಬು ಕಾಮ್ಟೆ, ದೇವರಾಜ್ ಮೇಷ್ಟ್ರು, ಚಿಲ್ಲಹಳ್ಳಿ ನಿಜಲಿಂಗಪ್ಪ, ಹೆಚ್.ಶಿವರಾಮ್, ಜಗನ್ನಾಥ್,ಸಣ್ಣತಿಮ್ಮಣ್ಣ ಶಶಿಕಲಾ, ವಾಣಿ ಮಹಾಲಿಂಗಪ್ಪ , ಕೆ.ಕೆ.ಹಟ್ಟಿ ಜಯಪ್ರಕಾಶ್, ಮಾಸ್ತಿಕಟ್ಟೆ ಚಂದ್ರಶೇಖರ್, ರಾಮಸ್ವಾಮಿ, ಶ್ರೀನಾಥ್, ರಂಗಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.