ಹಿರಿಯೂರು:
ಎಸ್.ಪಿ.ಎಸ್. ಕ್ರಿಯೇಷನ್ಸ್ ಪತಾಕದಡಿ ನಿರ್ಮಾಣವಾಗುತ್ತಿರುವ “ಬ್ಲಾಕ್ ಕ್ಯಾಟ್” ಚಲನಚಿತ್ರದ ಚಿತ್ರೀಕರಣವು ಹಿರಿಯೂರು ನಗರ ಹಾಗೂ ಹೊರವಲಯದಲ್ಲಿ ಭರದಿಂದ ಸಾಗುತ್ತಿದೆ.
ಒಂದು ಕೊಲೆಯ ತನಿಖೆಗೆ ಸಂಬಂಧಿಸಿದ ಪರಿಕಲ್ಪನೆಯಲ್ಲಿ ಸ್ಥಳೀಯ ನೃತ್ಯ ನಿರ್ದೇಶಕರಾದ ಆರ್.ಮಹೇಶ್, ಚಿಕ್ಕಮಗಳೂರಿನ ಶ್ರೀಮತಿ ಚೈತ್ರ ಹಾಗೂ ಬೇಬಿ ಯಾದ್ವಿಕಾ ಇಂದಿನ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದಾರೆ.
ಹುಬ್ಬಳ್ಳಿ, ಪುಣೆ, ಅನಂತಪುರ ಮುಂತಾದ ಕಡೆ ಚಿತ್ರೀಕರಣ ಇರುವುದರಿಂದ ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ, ಅಲ್ಲದೆ ನಗರದ ಗಜಾನನ ಸ್ಟುಡಿಯೋ ಮಾಲೀಕರಾದ ಎ.ರಾಮಕೃಷ್ಣಪ್ಪ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂಬುದಾಗಿ ನಿರ್ಮಾಪಕ ಹಾಗು ನಿರ್ದೇಶಕ ಡಿ.ಸಿ.ಪಾಣಿರವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
.
About The Author
Discover more from JANADHWANI NEWS
Subscribe to get the latest posts sent to your email.