January 30, 2026
Screenshot_20241226_151412.png

ಚಳ್ಳಕೆರೆ ಡಿ.26

ಗಣಕಯಂತ್ರ ನಿರ್ವಾಹಕರು ಗ್ರಾಮಪಂಚಾಯಿತಿ ಕಚೇರಿಯ ಆಧಾರ ಸ್ತಂಬಗಳಿದ್ದಂತೆ ಸರಕಾರ ಕಂಪ್ಯೂಟರ್ ಆಪರೇಟರ್ ದಿನಾಚರಣೆ ತಂದಿರುವುದು ಸಂತೋಷದಾಯಕ ಎಂದು ತಾಪಂ ಶಶಿಧರ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪಂಚಾಯತ್ .ಕ್ಲರ್ಕ್ ಕಂ ಗಣಕಯಂತ್ರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಆಯೋಜಿಸಿದ್ದ ಕಂಪ್ಯೂಟರ್ ಆಪರೇಟರ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಂಪ್ಯೂಟರ್ ಆವಿಷ್ಕಾರ ಮಾಡಿದ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್ ಅವರ ಹುಟ್ಟಿದ ದಿನವಾದ ಡಿ.26ರಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರು ಕಂಪ್ಯೂಟರ್ ದಿನಾಚರಣೆಯನ್ನು ಪ್ರತಿ ವರ್ಷ ಆಚರಣೆ ಮಾಡಲು ಜಾರಿಗೆ ತಂದಿದ್ದು ಈ ದಿನ ಅವರ ಜನ್ಮದಿನವಾಗಿ ಕೇಕ್ ಕತ್ತರಿಸುವ ಮೂಲಕ ಕಂಪ್ಯೂಟರ್ ದಿನಾಚರಣೆ ಮಾಡಲಾಗುತ್ತಿದೆ.
ಮುಂದಿನ ವರ್ಷ ಕಂಪ್ಯೂಟರ್ ಆಪರೇಟರ್ ಗಳು ನರೇಗಾ ಸೇರಿಂದ ಶೇ.90 ಭಾಗ ಸರಕಾರಿ ಯೋಜನೆಗಳನ್ನು ಕಂಪ್ರೂಟರ್ ನಲ್ಲಿ‌ಅಳವಡಿಸುತ್ತಿರುವ ನೀವುಗಳ ಕೆಲಸದ ಒತ್ತಡ ನಿವಾರಣೆಗಾಗಿ ಮುಂದಿನ ವರ್ಷ ವಿವಿಧ ಕ್ರೀಡಾಕೂಟ .ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ‌ತಾಲೂಕಿನಲ್ಲಿ‌ಅತ್ಯುತ್ತಮ‌ ಸೇವೆ ಮಾಡಿದ ಕಂಪ್ಯೂಟರ್ ಆಪರೇಟರ್ ಗಳನ್ನು ಗುರುತಿಸಿ ಸನ್ಮಾನ ‌ಮಾಡಲಾಗುವುದು ಎಂದು ತಿಳಿಸಿದರು.
ನರೇಗಾ ಸಹಾಯಕ ನಿರ್ದೇಶಕ ಸಂತೋಷ್ ಮಾತನಾಡಿ ಎಲ್ಲಾ ಕೆಲಸಗಳೂ ಆನ್‌ಲೈನ್ ಆಧಾರಿತ. ಪ್ರತಿದಿನ ಗ್ರಾಮ ಪಂಚಾಯಿತಿಗೆ ಯಾವುದೇ ಸಂದೇಶ­ಗಳಾಗಲಿ, ಪತ್ರಗಳಾಗಲಿ, ಸೂಚನೆಗಳಾಗಲಿ ದೊರಕುವುದು ಆನ್‌ಲೈನ್‌ ಮುಖಾಂತರ. ಹೀಗಾಗಿ ಒಂದು ದಿನ ಪಂಚಾಯಿತಿಯ ಉಳಿದ ಯಾವುದೇ ನೌಕರರು ಇರದಿದ್ದರೆ ಕೆಲಸವನ್ನು ಹೇಗಾದರೂ ಸರಿದೂಗಿಸಿಕೊಂಡು ಹೋಗಬ­ಹುದು. ಆದರೆ, ಕಂಪ್ಯೂಟರ್ ಆಪರೇಟರ್ ಇರದಿದ್ದರೆ ಕೆಲಸ ಮುಂದೆ ಸಾಗುವುದೇ ಇಲ್ಲ ಈ ದಿನ ಸರಕಾರ ನಿಮ್ಮ ಸೇವೆಯನ್ನು ಗುರುತಿಸಿ ದಿನಾಚರಣೆ ಮಾಡುತ್ತಿರುವುದು ಸಂತಸವಾಗಿದೆ ಎಂದು ತಿಳಿಸಿದರು.
ಸಹಾಯಕ ನಿರ್ದೇಶಕ ಸಂಪತ್. ಪಿಡಿಒ ಹೊನ್ನೂರಪ್ಪ. ಕಂಪ್ಯೂಟರ್ ಆಪರೇಟರ್ ವೆಂಕಟೇಶ್.ರಾಧಮ್ಮ.ಮಂಜುನಾಥ್ . ಪ್ರಹ್ಲಾದ್. ನರೇಗಾ ಸಂಯೋಜಕ ಮಹೇಂದ್ರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿಡಿಒ ಕೊರ್ಲಯ್ಯ.ಸರಕಾರಿ ನೌಕರ ಸಂಘದ ನಿರ್ಧೇಶಕ ಮಂಜುನಾಥ್ ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading