ನಾಯಕನಹಟ್ಟಿ:: ನ.26. ಪ್ರತಿಯೊಬ್ಬರೂ ಸಂವಿಧಾನ ಗೌರವಿಸಿ ಎಂದು ಪೂರ್ಣ ಮುತ್ತು ವಿದ್ಯಾ ಸಂಸ್ಥೆ ಕಾರ್ಯದರ್ಶಿ ಪಿ.ಎಂ. ಪೂರ್ಣ ಓಬಯ್ಯ ಹೇಳಿದರು.
ಬುಧವಾರ ಪಟ್ಟಣದ ಪೂರ್ಣ ಮುತ್ತು ವಿದ್ಯಾ ಸಂಸ್ಥೆ ವತಿಯಿಂದ ಶ್ರೀ ರಾಜಹಟ್ಟಿ ಮಲ್ಲಪ್ಪ ನಾಯಕ ಪ್ರೌಢಶಾಲೆಯಲ್ಲಿ ಸಂವಿಧಾನ ದಿನಾಚರಣೆಯಲ್ಲಿ ಸಂವಿಧಾನ ಶಿಲ್ಪ ಡಾ. ಬಿ. ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ವಿಶೇಷ ಪೂಜೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದ ಇಡೀ ವಿಶ್ವವೇ ಮೆಚ್ಚುವಂತ ಸಂವಿಧಾನವನ್ನು ನೀಡಿ ಸಾಮಾಜಿಕವಾಗಿ ಹಾರ್ದಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಪ್ರತಿಯೊಬ್ಬ ಪ್ರಜೆಗೆ ಹಕ್ಕನ್ನು ನೀಡಿರುವ ಏಕೈಕ ವ್ಯಕ್ತಿ ಡಾ. ಬಿಆರ್ ಅಂಬೇಡ್ಕರ್ ರವರು ಸಂವಿಧಾನವನ್ನು ಪ್ರತಿಯೊಬ್ಬರು ಗೌರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಶು ಸಂಗೋಪನೆ ನಿವೃತ್ತ ಜಂಟಿ ನಿರ್ದೇಶಕ ಡಾ. ಜಿ. ತಿಪ್ಪೇಸ್ವಾಮಿ ಮಾತನಾಡಿದರು. ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ್ದು ಸಮಾಜವನ್ನು ಸರಿದಾರಿಗೆ ತಂದವರು ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನಾಚರಣೆಯನ್ನು ಆಚರಣೆ ಮಾಡುತ್ತೇವೆ ಸಂವಿಧಾನದ ತತ್ವ ಆದರ್ಶಗಳನ್ನ ಪ್ರತಿಯೊಬ್ಬ ವಿದ್ಯಾರ್ಥಿಯು ಮೈಗೂಡಿಸಿಕೊಳ್ಳಬೇಕು ಸಂವಿಧಾನವನ್ನು ಗೌರವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ರಾಜ ಹಟ್ಟಿ ಮಲ್ಲಪ್ಪ ನಾಯಕ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ ಹನುಮಂತಯ್ಯ, ಸಹ ಶಿಕ್ಷಕರಾದ ಪಿ.ಜೆ. ರವಿಕುಮಾರ್,ಕೆ.ಎಂ. ಮಲ್ಲಿಕಾರ್ಜುನ್, ಶಿಕ್ಷಕಿಯರಾದ ನಲಗೇತನಹಟ್ಟಿ ಪಿ.ಒ.ಲತಾ.ಜಿ.ಬಿ. ರೂಪ,ಪಿ.ಕೆ. ಕವಿತ, ಎನ್ ಪಿ ಅರುಣಾಕ್ಷಿ, ಸೇರಿದಂತೆ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.