ನಾಯಕನಹಟ್ಟಿ : ಪಟ್ಟಣದ ಇರ್ಷಾದ್ ಎಂಬುವವರ ತೋಟದಲ್ಲಿ ಪ್ರಿಯಾಂಕ ಎನ್ನುವ 15 ವರ್ಷದ ಬಾಲಕಿಗೆ ನಾಯಿಗಳ ಭೀಕರ ದಾಳಿಯಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
ಜೀವನೋಪಕ್ಕಾಗಿ ನಾಯಕನಹಟ್ಟಿ ಪಟ್ಟಣದ ಇರ್ಷಾದ್ ಎಂಬುವರ ತೋಟದಲ್ಲಿ ಕೂಲಿ ಕೆಲಸಕ್ಕೆ ಎಂದು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದ ಕಾರ್ಮಿಕರು ದಿನಗೂಲಿ ಕೆಲಸಕ್ಕೆ ತೆರಳಿದ್ದರು , ಈ ಸಂದರ್ಭದಲ್ಲಿ ಪ್ರಿಯಾಂಕ ಎಂಬ ಬಾಲಕಿಗೆ ನಾಯಿಗಳು ವಿಪರೀತವಾಗಿ ಕಚ್ಚಿವೆ ಬಾಲಕಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಈ ಹಿಂದೆ ಇದೇ ತೋಟದಲ್ಲಿ ವಿವಿಧ ಹಳ್ಳಿಗಳ ಬಾಲಕರ ಮೇಲೆ ಕುರಿ ಮತ್ತು ಮೇಕೆಗಳ ಮೇಲೆ ಹಾಗೂ ಕೂಡ್ಲಿಗಿ ತಾಲ್ಲೂಕು ಹಾರಕಬಾವಿ ಗ್ರಾಮದ ಬಾಲಕನಿಗೆ ನಾಯಿಗಳು ದಾಳಿ ನಡೆಸಿದ್ದೆವು. ತೋಟಕ್ಕೆ ಹತ್ತಿರವಿರುವ ಮಾಳಪ್ಪನಹಟ್ಟಿ ಗ್ರಾಮದ ರೈತರು ವಿದ್ಯಾರ್ಥಿಗಳು ಜೀವವನ್ನು ಕೈಯಲ್ಲಿ ಹಿಡಿದು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರೂ ಕೂಡ ತೋಟದ ಮಾಲಿಕ ಎಚ್ಚೆತ್ತುಕೊಳ್ಳದೇ ಇರುವುದರಿಂದ ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.
ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತಕ್ಕೆ ನೀಡುವ ಚುಚ್ಚುಮದ್ದು ದಾಸ್ತಾನು ಇಲ್ಲದ ಕಾರಣ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.