
ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಮೇಲೂರು ಗ್ರಾಮದಲ್ಲಿ ಶ್ರೀ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ಕಾಳಿಕಾ ಪರಮೇಶ್ವರಿ ದೇವಾಲಯದ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ದೇವಾಲಯವನ್ನು ತಳಿರು ತೋರಣ, ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ ಶ್ರೀ ಕಾಳಿಕಾ ಪರಮೇಶ್ವರಿ ಅಮ್ಮನವರ ಮೂರ್ತಿಗೆ ವಿವಿಧ ಅಭಿಷೇಕಗಳೊಂದಿಗೆ ವಿಶೇಷ ಪೂಜಾ ಕಾರ್ಯವನ್ನು ಮಾಡಲಾಯಿತು.







ಗ್ರಾಮದ ಹೊರವಲಯದಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇವಾಲಯದಿಂದ ಮಹಿಳೆಯರು ಪೂರ್ಣ ಕುಂಭ ಕಳಸಗಳನ್ನು ಹೊತ್ತು ಮಂಗಳವಾದ್ಯ, ವೀರಗಾಸೆಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಸಾಗಿ ಶ್ರೀ ಕಾಳಿಕಾ ಪರಮೇಶ್ವರಿ ಅಮ್ಮನವರ ದೇವಾಲಯದ ಬಳಿ ಸಮಾವೇಶಗೊಂಡು ಪೂಜಾ ಕಾರ್ಯಗಳನ್ನು ಮಾಡಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣಾ ಕಾರ್ಯವನ್ನು ಮಾಡಲಾಯಿತು.
ದೇವತಾ ಕಾರ್ಯದಲ್ಲಿ ಶ್ರೀ ಕಾಳಿಕಾ ಪರಮೇಶ್ವರಿ ಶ್ರೀ ಕಮಟೇಶ್ವರ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಹಾದೇವಚಾರ್, ಮಾಜಿ ಅಧ್ಯಕ್ಷ ಸೋಮಾಚಾರ್, ಕಾರ್ಯದರ್ಶಿ ಎಂ.ಆರ್.ನಾಗೇಶ್, ಸದಸ್ಯರುಗಳಾದ ಮೋಹನಚಾರ್, ಅಂಜನಾಚಾರ್, ಮಣಿಆಚಾರ್, ಸಣ್ಣಸ್ವಾಮಿಚಾರ್, ನಾಗಾಚಾರ್, ಪುಟ್ಟಸ್ವಾಮಚಾರ್, ಜಯರಾಮಚಾರ್, ಅಣ್ಣಯ್ಯಚಾರ್, ನಾಗರಾಜಚಾರ್, ಜಯರಾಮಚಾರ್, ರಾಜಚಾರ್, ನಾಗಚಾರ್, ಕಾರ್ಯಕರ್ತರುಗಳಾದ ಮಹೇಶಚಾರ್, ಕಾಂತಾಚಾರ್, ಗೋಪಾಲಕೃಷ್ಣ, ಜಯಕುಮಾರ್, ಮುಕುಂದರಾಜು, ಕಾಂತರಾಜು, ನಾಗರಾಜಚಾರ್, ರವಿಕುಮಾರ್, ಮಹಿಳೆಯರು, ಮಕ್ಕಳು, ಜನಪ್ರತಿನಿಧಿಗಳು, ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.