
ನಾಯಕನಹಟ್ಟಿ: ಪಟ್ಟಣ ಪಂಚಾಯಿತಿ ೧ನೇ ವಾರ್ಡ್ನಲ್ಲಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ನ.೨೩ ರಂದು ಉಪಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ಟಿ.ಮAಜುನಾಥ ಜಯಗಳಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಹರಿಪ್ರಸಾದ್ ಘೋಷಿಸಿದರು.
ಚುನಾವಣ ಕಣದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಚಂದ್ರಮ್ಮ ೧೭೬ ಮತಗಳು, ಬಿಜೆಪಿ ಅಭ್ಯರ್ಥಿ ಹೆಚ್.ಮಲ್ಲೇಶಪ್ಪ ೨೫೯ ಮತಗಳು, ಪಕ್ಷೇತರ ಅಭ್ಯರ್ಥಿ ೩೫೯ ಮತಗಳು, ನೋಟ ಮತಗಳು ೦೭ ಒಟ್ಟು ೮೦೧ ಮತಗಳು ಮತದಾನವಾಗಿದ್ದು, ಇದರಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ಟಿ.ಮAಜುನಾಥ ೧೦೦ ಮತಗಳ ಅಂತರದಿAದ ಜಯಶೀಲರಾಗಿದ್ದಾರೆ.
ನಂತರ ಪಕ್ಷೇತರ ಅಭ್ಯರ್ಥಿ ಎಂ.ಟಿ.ಮAಜುನಾಥ ಮಾತನಾಡಿ ಸಮಸ್ತ ೧ನೇ ವಾರ್ಡ್ನ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಮತದಾನ ಮಾಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಗ್ರಾಮದ ಮುಖಂಡರುಗಳ ಜೊತೆ ಚರ್ಚಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ವಾರ್ಡ್ನಲ್ಲಿರುವ ಮೂಲಭೂತ ಸೌಲಭ್ಯಗಳನ್ನು ದೊರಕಿಸುವಂತೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಚಳ್ಳಕೆರೆ ತಹಶೀಲ್ದಾರ್ ರೆಹನ್ ಪಾಷ, ಉಪಚುನಾವಣ ಅಧಿಕಾರಿ ಡಿ.ಎಸ್.ಪಾಲಯ್ಯ, ಕೆ.ಟಿ.ಪ್ರಹ್ಲಾದ್ ಇನ್ನೂ ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.