
ಚಳ್ಳಕೆರೆ ನ.26
ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಘಟನೆ ಬೆಳಕಿಗೆ ಬಂದಿದೆ.
ಅಬಕಾರಿ ಉಪ ಆಯುಕ್ತರ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಚಳ್ಳಕೆರೆ ತಾಲ್ಲೂಕು ಚಿತ್ರನಾಯಕನಹಳ್ಳಿ ಗ್ರಾಮದಲ್ಲಿ ಗಸ್ತು ನಡೆಸುತ್ತಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಸಮಯ ಮಂಗಳವಾರ ಮದ್ಯಾಹ್ನ 12:20 ಗಂಟೆಯಲ್ಲಿ ಚಳ್ಳಕೆರೆ ತಾಲ್ಲೂಕು ದೊಡ್ಡ ಉಳ್ಳಾರ್ತಿ ಗ್ರಾಮದ ವೆಂಕಟೇಶ್ ನ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಮಂಚದ ಕೇಳಗೆ ಮದ್ಯ ತುಂಬಿದ ಟೆಟ್ರಾ ಪ್ಯಾಕೇಟ್ಗಳಿರುವುದು ಕಂಡುಬಂದಿದ್ದು, ನಂತರ ಅವುಗಳನ್ನು ಸಿಬ್ಬಂದಿ ಸಹಾಯದಿಂದ ಅಲ್ಲೇ ಕೆಳಗೆ ಸುರಿದು ಏಣಿಸಿ ನೋಡಲಾಗಿ 1). ಬ್ಲಾಕ್ ಬೆಲ್ಟ್ ವಿಸ್ಕಿಯ 180 ಮಿಲಿಯ 48 ಮದ್ಯ ತುಂಬಿದ ಟೆಟ್ರಾ ಪ್ಯಾಕೇಟ್ಗಳು. 2). ಬ್ಲಾಕ್ ಬೆಲ್ಟ್ ವಿಸ್ಕಿಯ 90 ಮಿಲಿಯ 96 ಮದ್ಯ ತುಂಬಿದ ಟೆಟ್ರಾ ಪ್ಯಾಕೇಟ್ಗಳಿಂದ ಒಟ್ಟು- 17.280 ಲೀಟರ್ ಮದ್ಯವನ್ನು ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿದ್ದ ಮದ್ಯವನ್ನು ವಶಪಡಿಸಿಕೊಂಡು ಅಬಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ದಾಳಿಯಲ್ಲಿ ವನಿತಾ ಅಬಕಾರಿ ನಿರೀಕ್ಷಕರು, ಜಿಲ್ಲಾ ವಿಚಕ್ಷಣ ದಳ. ಕೆ ರಮೇಶ್ ನಾಯ್ಕ್ ಅಬಕಾರಿ ಮುಖ್ಯ ಪೇದೆ, ಜೆ ಬಸವರಾಜ ಅಬಕಾರಿ ಪೇದೆ ಹಾಗೂ ನಾಗರಾಜ್ ತೊಳಮಟ್ಟಿ ವಾಹನ ಚಾಲಕರವರು ಹಾಜರಿದ್ದರು