September 15, 2025
IMG-20241126-WA0245.jpg

ಚಳ್ಳಕೆರೆ ನ.26

ಪೆನ್ನು ಹಾಳೆ ತೆಗೆದುಕೊಂಡು ಎಕರೆ ವಾರು ರೈತರ ಶೇಂಗಾ ಇಳುವರಿ ಲೆಕ್ಕ ಹಾಕಿದ ಶಾಸಕ ಟಿ.ರಘುಮೂರ್ತಿ .
ಹೌದು ಇದು ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆಯುವಾ ಮತನಾಡಿದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ಸಭೆಗೆ ಮಾಹಿತಿ ನೀಡುವಾಗ ಹೋಬಳಿ ವಾರು ವಾಡಿಕೆ ಮಳೆ ಮಳೆಯಿಂದಾಗಿ 537 ರೈತರ ಶೇಂಗಾ ಬೆಳೆ ಮಳೆಗೆ ಸಿಲುಕಿ 982 ಹೆಕ್ಟೇರ್ ಬೆಳೆ ನಷ್ಟವಾಗಿ. ಬೆಳೆ ಸಮೀಕ್ಷೆ ವರದಿಯನ್ನು ಆನ್ ಲೈನ್ ಮೂಲಕ ಮಾಡಲಾಗಿದೆ ಎಂದು ಮಾಹಿತಿ ನೀಡಿದಾಗ.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಮಳೆ ಬಂದು ಒಂದು ಕಡೆ ಸಂತೋಷವಾದರೆ ಮಳೆ ಬಾರದೆ ಹಾಗೂ ಮಳೆಗೆ ಸಿಲುಕಿ ಬೆಳೆ ನಷ್ಟವಾಗಿದೆ ಪ್ರತಿ ವರ್ಷವೂ ಸಹ ಮೊಳಲಾಲ್ಮೂರು .ಚಳ್ಳಕೆರೆ ಅತಿ ವೃಷ್ಠಿ ಅನಾವೃಷ್ಠಿಗೆ ಸಿಲುಕಿ ಬರ ಪರಿಸ್ಥಿಯಿಂದ ಶೇಂಗಾ ಬೆಳೆ ಇಳುವರಿ ಕುಂಠಿತ ಜತೆಗೆ ಬೆಳೆ ಮಳೆಗೆ ಸಿಲುಕಿ ಶೇಂಗಾ ಬಳಿ ಹಾಳಾಗಿ ಜಾನುವಾರುಗಳಿಗೆ ಮೇವಿನ‌ಕೊರತೆ ಎದುರಾಗುವ ಸಾಧ್ಯತೆ ಇದೆ.
ಬೆಳೆ ನಷ್ಟದ ನಿಖರವಾದ ಮಾಹಿತಿಯನ್ನು ಸರಕಾರಕ್ಕೆ ಅಂಕಿ‌ಅಂಶಗಳ ಸಮೇತ ನೀಡ ಬೇಕು.
2022 ರಲ್ಲಿ ತಾಲೂಕಿನಲ್ಲ.11.5 ಕೋಟಿ ರೂ ವಂಚನೆ ಮಾಡಿರುವ ಅಧಿಕಾರಿ ಹಾಗು ಸಿಬ್ಬಂದಿಗಳಿಗೆ ಶಿಕ್ಷೆಯಾಗ ಬೇಕು ಮತ್ತೆ ರೈತರ ಬೆಳೆ ವಂಚನೆ ಪ್ರಕರಣ ಮರುಕಳಿಸಂತೆ ನೋಡಿಕೊಳ್ಳಬೇಕು ಎಂದರು.
ಕುಡಿಯುವ ನೀರು ಎಇಇ ದಯಾನಂದ್ ಕ್ಷೇತ್ರದಲ್ಲಿ 39 ಶುದ್ದಕುಡಿಯುವ ನೀರಿನ ಘಟಕಗಳು ಕೆಟ್ಟಿವೆ ಸಂಬಂಧಪಟ್ಟ ಗುತ್ತಿಗೆ ದಾರರ ಅವಧಿ ಮುಗಿದಿದೆ ಅವರು ದುರಸ್ಥಿ ಮಾಡಿಸಿಕೊಟ್ಟರೆ ಗ್ರಾಮಪಂಚಾಯಿತಿಗಳ ನಿರ್ವಹಣೆ ನೀಡಲಾಗುವುದು ವಿದ್ಯುತ್ ಬಿಲ್ ಸಹ ಕಟ್ಟಿಲ್ಲ ಎಂದು ಮಾಹಿತಿ ನೀಡಿದರು.
ಶಾಸಕ ಟಿ.ರಘುಮೂರ್ತಿ ಜಿಪಂ‌ಸಿಇಒ ಸೋಮಶೇಖರ್ ದೂರವಾಣಿ ಕರೆ ಮಾಡಿ ಕೆಟ್ಟು ನಿಂತ ಕುಡಿಯುವ ನೀರಿನ‌ಘಟಕಗಳ ದುರಸ್ಥಿಗೆ ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದು ಸೂಚಿಸಿದಾಗ.
ಸಿಇಒ ಸೋಮಶೇಖರ್ಅತನಾಡಿ ಗುತ್ತಿಗೆ ದಾರರ ಠೇವಣಿ ಹಣ ಇದೆ ನಿಮ್ಮ ಅನು ಮತಿ ನೀದರೆ ಅದರಲ್ಲಿ‌ದುರಸ್ಥಿ ಪಡಿಸಿ ಗ್ರಾಮಪಂಚಾಯಿಗಳಿಗೆ ವಹಿಸಲಾಗುವುದು ಎಂದು ತಿಳಿಸಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಕೂಡಲೆ ದುರಸ್ಥಿ ಪಡಿಸಿ ಅಂತಹ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದರು.
ಬಿಇಒ‌ಸುರೇಶ್ ಸಭೆಗೆ ಮಾಹಿತಿ ನೀಡುವಾಗ ಸರಕಾರಿ ಶಾಲೆಗಳ ಶಿಥಿಲವಾದ ಹಾಗೂ ಬೀಳುವಂತಹ ಕಟ್ಟಡಗಳನ್ನು ನೆಲಸ ಮಾಡಬೇಕು ಈಗಾಲೆ ಕಟ್ಟಡಗಳ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನದ ಕಟ್ಟಡಗಳನ್ನು ಸಕಾಲಕ್ಕೆ ನಿರ್ಮಿಸಿ ಶಿಥಿಲವಾದ ಕಟ್ಟಡಗಳಿಂದ ಮಕ್ಕಳ ಪ್ರಾಣ ಹಾನಿ ತಪ್ಪಿಸುವಂತೆ ಹಾಗೆ ಶಿಥಿಲವಾದ ಅಂಗನವಾಡಿ ಕಟ್ಟಡಗಳನ್ನು ತೆತವುಗೊಳಿಸಿ ಕಟ್ಟಡಗಳ ಮಾಹಿತಿ ನೀಡಿದರೆ ಮಂಜುರಾತಿ ಮಾಡಿಸಲಾಗುವುದಯ ಎಂದು ತಿಳಿಸಿದರೆ.
ಕುಡಿಯುವ ನೀರು.ರಸ್ತೆ ಚರಂಡಿ.ವಸತಿ.ಸ್ಮಶಾನಗಳ ಅಭಿವೃದ್ಧಿಗೆ ಮುಂದಾಗ ಬೇಕು.
ಕೃಷಿ .ತೋಟಗಾರಿಕೆ ಹಾಗೂ ರೇಷ್ಮೆಇಲಾಖೆಯ ವಿವಿಧ ಬೆಳೆಗಾರರ ಮೊಬೈಲ್ ನಂಬರ್ ಸಂಗ್ರಹಿಸಿ ವಾಟ್ಸ್ ಆಪ್ ಗ್ರೂಫ್ ಮಾಡಿ ಇಲಾಖೆಗಳಲ್ಲಿನ‌ ಯೋಜನೆ ಸೌಲಭ್ಯ ಹಾಗೂ ಬೆಳೆಗಳ ರೋಗ ಬಾದೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು .
ಎಲ್ಲಾ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕೂತು ಕೆಲಸ ಮಾಡದೆ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದಾಗಾತ್ರ ಮಾಹಿತಿ ತಿಳಿಯುತ್ತದೆ ದಾಖಲೆ ನೋಡಿ ಹೇಳುವುದರ ಮನಸ್ಸಲ್ಲಿ ಉಳಿಯುತ್ತದೆ ಸಭೆಗೆ ಬರುವಾಗ ಮಾಹಿತಿ ಹಾಗೂ ದಾಖಲೆ ಸಮೇತ ಬರುವಂತೆ ತಾಕೀತು ಮಾಡಿದರು.
ಸಭೆಯಲ್ಲಿ ಜಿಪಂ ಉಪಕಾರ್ಯ ದರ್ಶಿ ತಿಮ್ಮಪ್ಪ. ಉಪವಿಭಾಗಾಧಿಕಾರಿ ಕಾರ್ತೀಕ್. ಜಂಟಿ ಕೃಷಿ ನಿರ್ದೇಶಕ ಹಾಗೂ ತಾಪಂ ಆಡಾಳಿತ ಅಧಿಕಾರಿ ಡಾ.ಮಂಜುನಾಥ್ ತಹಶೀಲ್ದಾರ್ ರೇಹಾನ್ ಪಾಷ.ತಾಪಂ ಇಒ ಶಶಿಧರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಿಡಿಒ ಗಳು ಸಭೆಗೆ ಮಾಹಿತಿ ನೀಡಿದರು.
ಸಭೆಗೂ ಮುನ್ನ ಸಂವಿಧಾನ ದಿನಾಚರಣೆ ಅಂಗವಾಗಿ ಡಾ.ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಸ್ಪನಮನ ಸಲ್ಲಿ‌ ಸಂವಿಧಾ ಪ್ರಮಾಣ ವಷನ ಸ್ವೀಕರಿಸರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading