January 29, 2026
d26-tm1.jpg

ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಶ್ರೀ ಪಾರ್ಶ್ವನಾಥ ಸಹಕಾರ ಸಂಘದ ಅಭಿವೃದ್ಧಿಗಾಗಿ ₹೫ ಲಕ್ಷ ನೀಡಲಾಗುವುದು
ಹೊಸದುರ್ಗ: ಪಟ್ಟಣದ ಪಾರ್ಶ್ವನಾಥ ಸಹಕಾರ ಸಂಘವೂ ಚಿಕ್ಕದಾಗಿದ್ದರೂ, ಚೊಕ್ಕದಾಗಿ ಕೆಲಸ ಮಾಡುತ್ತಿದೆ. ಈ ಸಂಘದ ಅಭಿವೃದ್ಧಿಗಾಗಿ ₹೫ ಲಕ್ಷ ನೀಡಲಾಗುವುದು ಎಂದು ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ಸಚಿವ ಡಿ ಸುಧಾಕರ್ ಭರವಸೆ ನೀಡಿದರು.
ಪಾರ್ಶ್ವನಾಥ ಸಹಕಾರ ಸಂಘ ನಿಯಮಿತದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂಘದ ‘ನೂತನ ಕಟ್ಟಡ ಉದ್ಘಾಟನೆ’ ನೇರವೇರಿಸಿ ಮಾತನಾಡಿದರು.ಪಾರ್ಶ್ವನಾಥ ಸಹಕಾರ ಸಂಘ ಠೇವಣಿದಾರರ ನಂಬಿಕೆ ಮೇಲೆ ಚೆನ್ನಾಗಿ ನಡೆಯಲಿದೆ. ಉತ್ತಮ ಸೇವೆ ಸಲ್ಲಿಸುತ್ತಾ, ಇನ್ನಷ್ಟು ಅಭಿವೃದ್ಧಿಯಾಗಲಿ. ಮರುಪಾವತಿ ಪ್ರಕ್ರಿಯೆಯೂ ಸಹ ಉತ್ತಮವಾಗಿರಬೇಕು ಸಲಹೆ ನೀಡಿದರು.
ಸಂಘದ ಕಛೇರಿ ಮತ್ತು ಕೌಂಟರ್ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಜಿ ಗೋವಿಂದಪ್ಪ ಪಾರ್ಶ್ವನಾಥ ಸಹಕಾರ ಸಂಘ ಅಲ್ಪಾವಧಿಯಲ್ಲೇ ಸ್ವಂತ ನಿವೇಶನ ಮತ್ತು ಕಟ್ಟಡ ಮಾಡಿರುವುದು ಶ್ಲಾಘನೀಯ ಎಂದರು.
ಶ್ರೀ ಪಾರ್ಶ್ವನಾಥ ಸ್ವಾಮಿ ಸಹಕಾರ ಸಂಘ ನಿಯಮಿತ ಸಂಘದ ಅಧ್ಯಕ್ಷ ಇ.ವಿ.ಧನ್ಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಭದ್ರತಾ ಕೋಠಡಿ (ಲಾಕರ್) ಯನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವ್ಯವಸ್ಧಾಪಕ ನಿರ್ಧೆಶಕ ಇಲ್ಯಾಸ್ ಉಲ್ಲಾ಼ ಷರೀಪ್, ಆಡಳಿತ ಮಂಡಳಿಯ ಸಭಾಂಗಣವನ್ನ ಮಾಜಿ ಶಾಸಕ ಇಲ್ಕಲ್‌ವಿಜಯಕುಮಾರ್, ಶಿಲಾ ಫಲಕ ಅನಾವರಣವನ್ನ ಜೈನ ಸಮಜದ ಅಧ್ಯಕ್ಷ ಡಿ.ಆದಿರಾಜಯ್ಯ, ಮುಖ್ಯ ಕಾರ್ಯ ನಿರ್ವಹಕ ಕೊಠಡಿಯನ್ನ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಆರ್.ಎಸ್.ದಿಲೀಪ್‌ಕುಮಾರ್ ಉದ್ಘಾಟಿಸಿದರು.
ಮುಖ್ಯ ಅತಿಧಿಗಳಾಗಿ ಕರ್ನಾಟಕ ಸಹಕಾರ ಮಹಾಮಂಡಳ ನಿರ್ದೇಶಕ ರಾಮರೆಡ್ಡಿ, ಮುಖಂಡ ಹೆಚ್.ಬಿ ಬ್ರಹ್ಮಪಾಲ್, ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ಬಿ.ಮಂಜುನಾಥ್, ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ಧೇಶಕ ಡಾ: ಕೆ.ಅನಂತ್, ಜಿಲ್ಲಾ ಲೆಕ್ಕ ಪರಿಶೋಧಕನಾ ಇಲಾಖೆಯ ಉಪ ನಿರ್ಧೇಶಕ ಪಿ.ಅಂಜನಮೂರ್ತಿ( ಪ್ರಭಾರೆ) ಸಂಘದ ಉಪಾಧ್ಯಕ್ಷ ಎಂ. ಧರಣೇಂದ್ರ, ಸಂಘದ ಮುಖ್ಯ ಕಾರ್ಯನಿರ್ವಾಹಕ ಟಿ.ಜಿ.ಗುರುಸ್ವಾಮಿ ಸಂಘದ ನಿರ್ದೇಶಕ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಸೇರಿದಂತೆ ಜನಪ್ರತಿನಿಧಿಗಳು ಸಂಘದ ಆಡಳಿತ ಮಂಡಳಿಯವರು ಭಾಗವಹಿಸಿದ್ದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದ ಭದ್ರಾ ಮೇಲ್ದಂಡೆ ಯೋಜನೆ, ಶಾಸಕ ಬಿ ಜಿ ಗೋವಿಂದಪ್ಪ ಅವರ ಪರಿಶ್ರಮದಿಂದ ತ್ವರಿತಗತಿಯಲ್ಲಿ ಸಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಭದ್ರೆ ನೀರು ಜಿಲ್ಲೆಯಲ್ಲಿ ಹರಿಯಲಿದೆ
ಡಿ.ಸುಧಾಕರ್
ಜಿಲ್ಲಾ ಉಸ್ತುವಾರಿ ಸಚಿವರುಮಾಜಿ ಶಾಸಕರುಗಳಾದ ಇಲ್ಕಲ್ ವಿಜಯಕುಮಾರ್ ಹಾಗೂ ಟಿ.ಹೆಚ್. ಬಸವರಾಜ್ ಅವರು ರಾಜಕೀಯ ಗುರುಗಳು. ಶ್ರೀ ಹಾಲುರಾಮೇಶ್ವರ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ₹೪ ಕೋಟಿ ಅನುದಾನ ಒದಗಿಸಲಾಗಿದೆ. ಸಚಿವರು ಹೊಸದುರ್ಗದ ಹಿನ್ನೀರಿನ ಜನತೆ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲಿನ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರು ಮೂಲ ಸೌಕರ್ಯ ಒದಗಿಸುವತ್ತ ಸಹಕರಿಸಬೇಕು.
ಬಿ.ಜಿ.ಗೋವಿಂದಪ್ಪ.ಶಾಸಕರು
ಹೊಸದುರ್ಗ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading