January 29, 2026
IMG-20251026-WA0165.jpg

ಅಡುಗೆ ಮನೆ ಸೇರಿಕೊಂಡು ಕೆರೆ ಹಾವು ಆತಂಕಗೊಂಡ ಮನೆಯವರು.

ಚಳ್ಳಕೆರೆ:ಅಡಿಗೆ ಮನೆ ಸೇರಿಕೊಂಡಿದ್ದ ಹಾವನ್ನು ಉರುಗ ತಜ್ಞ ಎಚ್ ಟಿ ಸ್ವಾಮಿ ಸುರಕ್ಷಿತವಾಗಿ ಹಿಡಿದು ಅರಣ್ಯ ಕ್ಕೆ ಬಿಟ್ಟು ಬಂದಿದ್ದಾರೆ.

ಚಳ್ಳಕೆರೆಯ ಶಾಂತಿನಗರ ಶಾದಿಮಹಲ್ ಮುಂಭಾಗ ಹಿಂಬ್ರಾನ್ ಇವರ ಮನೆಗೆ ನುಗ್ಗಿದ ಕೆರೆಹಾವು ಅಡಿಗೆ ಮನೆ ಸೇರಿಕೊಂಡು ಆತಂಕ ಸೃಷ್ಟಿ ಮಾಡಿತ್ತು..ಉರುಗ ತಜ್ಞ ಸ್ವಾಮಿಯವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿಲಾಗಿ ಸ್ಥಳಕ್ಕೆ ಬಂದ ಉರುಗ ತಜ್ಞ ಸ್ವಾಮಿ ಅಡುಗೆ ಮನೆಯಲ್ಲಿ ಸೇರಿಕೊಂಡಿದ್ದ ಕೆರೆ ಹಾವನ್ನು ಸುರಕ್ಷತವಾಗಿ ಹಿಡಿದು ಅರಣ್ಯದೊಳಗೆ ಬಿಟ್ಟು ಬಂದಿದ್ದಾರೆ.

ಹಾವುಗಳು ಕಂಡರೆ ತಕ್ಷಣವೇ ಈ ನಂಬರಿಗೆ ಕರೆ ಮಾಡಿ.9886463535

ಈ ಬಗ್ಗೆ ಮಾತನಾಡಿದ ಉರಗ ತಜ್ಞ ಎಚ್ ಟಿ ಸ್ವಾಮಿ ಅಡುಗೆ ಮನೆಗೆ ಹಾವು ಬಂದರೆ, ತಕ್ಷಣವೇ ಉರಗ ತಜ್ಞರನ್ನು ಸಂಪರ್ಕಿಸಿ. ಅಂಥ ಸಂದರ್ಭದಲ್ಲಿ, ಹಾವು ಕಚ್ಚದಂತೆ ಅಥವಾ ಅಲ್ಲಿಂದ ಪರಾರಿಯಾಗದಂತೆ ನೋಡಿಕೊಳ್ಳಿ ಮತ್ತು ಮನೆಯಲ್ಲಿ ತಕ್ಷಣವೇ ಯಾವುದೇ ಅಪಾಯಕಾರಿ ಕ್ರಮಗಳನ್ನು ಕೈಗೊಳ್ಳಬೇಡಿ ಎಂದು ಉರುಗ ತಜ್ಞ ಸ್ವಾಮಿ ಹೇಳಿದರು.ಹಾವು ಎಂದರೆ ಎಂತವರಿಗೂ ಸಹ ಭಯವಾಗುತ್ತದೆ. ಎಲ್ಲಾ ಹಾವುಗಳು ಸಹ ವಿಷದ ಹಾವುಗಳಾಗಿರುವುದಿಲ್ಲ ಆದರೂ ಹಾವು ಕಡ ತಕ್ಷಣವೇ ಗಾಬರಿಗೊಳ್ಳಬೇಡಿ,

ಹಾವು ಬರದಂತೆ ತಡೆಯಲು, ಮನೆಯಲ್ಲಿ ಕತ್ತಲು ಮತ್ತು ಒದ್ದೆಯಾದ ಸ್ಥಳಗಳನ್ನು ಮುಚ್ಚಿ, ಬಿರುಕುಗಳನ್ನು ಸರಿಪಡಿಸಿ ಮತ್ತು ಮನೆಯ ಸುತ್ತಮುತ್ತ ಗಿಡ-ಗಂಟೆಗಳು ಬೆಳೆಯದಂತೆ ನೋಡಿಕೊಳ್ಳಿ.ಸುರಕ್ಷತ ಕ್ರಮಗಳಿಲ್ಲದೆ ಹಾವುಗಳನ್ನು ಹಿಡಿಯವುದಾಗಿಲಿ ,ಹೊಡೆಯುವುದಾಗಲಿ ಮಾಡಬಾರದು.ನಾವು ಈಗಾಗಲೆ ಸುಮಾರು 1000 ಹೆಚ್ಚು ಹಾವುಗಳನ್ನ ರಕ್ಷಣೆ ಮಾಡಲಾಗಿದ್ದು ಇಂದು ಹಿಡಿದ ಈ ಹಾವನ್ನು ಅರಣ್ಯದೊಳಗೆ ಬಿಡಲಾಗುವುದು ಎಂದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading