ನಾಯಕನಹಟ್ಟಿ:: 26 ವರ್ಷಗಳ ಬಳಿಕ ಚಿಕ್ಕಕೆರೆ ಕೋಡಿ ಬಿದ್ದಿರುವುದು ಸಂತಸದ ವಿಷಯ ಮಾನ್ಯ ಜಿಲ್ಲಾಧಿಕಾರಿಗಳು ಚಿಕ್ಕಕೆರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಚಿಕ್ಕಕೆರೆಯ ಸುತ್ತಮುತ್ತ ಇರುವ ಅಂಗಡಿ ಮುಂಗಟುಗಳನ್ನು ತೆರವುಗೊಳಿಸುವಂತೆ ಅನುಮತಿ ನೀಡಿರುವುದು ಸ್ವಾಗತಿಸುತ್ತೇವೆ. ಎಂದು ಪಟ್ಟಣದ ಗ್ರಾಮಸ್ಥ ಬಸವರಾಜ್ ಹೇಳಿದ್ದಾರೆ.
ಅವರು ಶನಿವಾರ ಪಟ್ಟಣದ ಪಾದಗಟ್ಟೆ ಹತ್ತಿರ ಅಂಗಡಿ ಮತ್ತು ಹೋಟೆಲ್ ಮಾಲೀಕರ ಜೊತೆಗೂಡಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಚಿಕ್ಕ ಕೆರೆ 25 ವರ್ಷಗಳ ಬಳಿಕ ಕೋಡಿ ಬಿದ್ದಿರುವುದು ಸಂತಸದ ವಿಷಯ ಚಿಕ್ಕಕೆರೆಯು ಸುತ್ತಮುತ್ತ ಇರುವ ಜನರಿಗೆ ಯಾವುದೇ ಅನಾಹುತ ಆಗಬಾರದು ಎಂಬ ಉದ್ದೇಶದಿಂದ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿರುವುದು ಸ್ವಾಗತಿಸುತ್ತೇವೆ.
ಆದರೆ ಬಡವರ ಅಂಗಡಿ ಹೋಟೆಲ್ ಮಾಲಿಕರಿಗೆ ನೋಟಿಸ್ ಮಾಹಿತಿ ನೀಡದೆ ಏಕಾಏಕಿ ಅಂಗಡಿ ಹೋಟೆಲ್ ಶೆಡ್ಡುಗಳನ್ನು ತೆರವುಗೊಳಿಸಿರುವುದು ನೋವಿನ ಸಂಗತಿ ಬಡವರು ಸಾಲಸೂಲ ಮಾಡಿ ಜೀವನ ನಡೆಸಲು ಅಂಗಡಿ ಹೋಟೆಲ್ ಗಳನ್ನ ಹಾಕಿಕೊಂಡಿದ್ದರು ಏಕಾಏಕಿ ಇತರ ತೆರವುಗೊಳಿಸಿರುವುದು ತರವಲ್ಲ ಪಟ್ಟಣದಲ್ಲಿ ಹೊರ ಮಠದ ಮುಖ್ಯ ರಸ್ತೆಯಲ್ಲಿ ಬಸವಣ್ಣನ ಕಟ್ಟೆ ಸುತ್ತಮುತ್ತ ಅಂಗಡಿ ಮುಂಗಟ್ಟು ಮನೆಗಳು ಮತ್ತು ಶ್ರೀ ಗುರು ತಿಪ್ಪೇರುದ್ರಸ್ವಾಮಿ ತೇರಿನ ಸುತ್ತಮುತ್ತ ಅಂಗಡಿ ಹೋಟೆಲ್ ಮನೆಗಳಿವೆ ಜಾತ್ರೆ ಸಂದರ್ಭದಲ್ಲಿ ಬಹಳ ತೊಂದರೆಯಾಗುತ್ತದೆ ಮೊದಲು ಅವುಗಳನ್ನು ತೆರೆವುಗೊಳಿಸಿ.
ಆಮೇಲೆ ನಾವೇ ಸ್ವಯಂ ಪ್ರೇರಿತರಾಗಿ ಸ್ವಂತ ಖರ್ಚಿನಲ್ಲಿ ಅಂಗಡಿ ಹೋಟೆಲ್ ಗಳನ್ನ ತೆರವುಗೊಳಿಸುತ್ತೇವೆ ಇಲ್ಲದಿದ್ದರೆ ಸೋಮವಾರ ಪಟ್ಟಣ ಪಂಚಾಯತಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಗಂಭೀರವಾಗಿ ಗ್ರಾಮಸ್ಥ ಬಸವರಾಜ್ ಆರೋಪಿಸಿದ್ದಾರೆ.


ಹೋಟೆಲ್ ಮಾಲೀಕ ತಿಪ್ಪೇಸ್ವಾಮಿ ಮಾತನಾಡಿದರು.
ಜೀವನ ಮಾಡಲು ನಾವು ಹೋಟೆಲ್ ಅನ್ನ ಹಾಕಿಕೊಂಡಿದ್ವಿ ಚಿಕ್ಕೆಕೆರೆ ತುಂಬಿದ್ದರಿಂದ ನಮ ಹೋಟೆಲ್ ನ್ನು ತೆರೆವುಗೊಳಿಸಿದ್ದಾರೆ ಬಡವರ ಸ್ವಾಮಿ ನಾವು ಎಲ್ಲಿ ಜೀವನ ಮಾಡುವುದು ಹೋಟೆಲ್ ನಂಬಿಕೊಂಡು ಐದಾರು ಲಕ್ಷ ಸಾಲ ಸೂಲಾ ಮಾಡಿದ್ದೇವೆ ನಾವು ಈಗ ಬೀದಿಪಾಲಾಗಿದ್ದೇವೆ ನಮಗೆ ಏನು ತೋಚದಂತಾಗಿದೆ ಎಂದು ಅಳಲು ತೋಡಿಕೊಂಡರು.
ಇದೇ ಸಂದರ್ಭದಲ್ಲಿ ಅಂಗಡಿ ಮಾಲೀಕರಾದ ಈರಮ್ಮ, ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಚಂದ್ರಣ್ಣ, ರಮೇಶ್, ಹೊನ್ನೂರ್ ಸ್ವಾಮಿ, ರವಿ, ಈಶ್ವರ, ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ, ಇದ್ದರು
About The Author
Discover more from JANADHWANI NEWS
Subscribe to get the latest posts sent to your email.