ಹಿರಿಯೂರು:
ಕರ್ನಾಟಕ ಇತಿಹಾಸ ಅಕಾಡೆಮಿ ನೀಡುವ ಇತಿಹಾಸ ಸಂಶೋಧನಾ ಪುಸ್ತಕ ಶ್ರೀಹುಲ್ಲೂರು ಶ್ರೀನಿವಾಸ ಜೋಯಿಸ್ ಸ್ಮಾರಕ ಅತ್ಯುತ್ತಮ ಗ್ರಂಥ ಪ್ರಶಸ್ತಿಗೆ ಹಿರಿಯೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾದ (ಬಿ.ಇ.ಒ) ಸಿ.ಎಂ.ತಿಪ್ಪೇಸ್ವಾಮಿ ರಚಿಸಿರುವ “ರಕ್ಕಸತಂಗಡಿ” ಕೃತಿ ಆಯ್ಕೆಯಾಗಿದೆ.
ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾದ (ಬಿ.ಇ.ಒ) ಸಿ.ಎಂ.ತಿಪ್ಪೇಸ್ವಾಮಿರವರು ಶಿಕ್ಷಣ ಇಲಾಖೆಯ ಅಧಿಕಾರಿಯಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ “ರಕ್ಕಸತಂಗಡಿ” ಕೃತಿ ರಚನೆ ಮಾಡುವ ಮೂಲಕ ಸಾಹಿತಿಯಾಗಿಯೂ ಸಹ ಗುರುತಿಸಿಕೊಂಡು ಇದೀಗ ಪ್ರಶಸ್ತಿಗೂ ಭಾಜನರಾಗಿರುವುದು ನಿಜಕ್ಕೂ ನಮ್ಮ ತಾಲ್ಲೂಕಿಗೆ ಹೆಮ್ಮೆಯ ವಿಚಾರವಾಗಿದ್ದು, ಇವರಿಗೆ ನಮ್ಮ“ಹಿರಿಯೂರುನ್ಯೂಸ್” ತಂಡದ ಪರವಾಗಿ ಅಭಿನಂದನೆಗಳು ಎಂಬುದಾಗಿ “ಹಿರಿಯೂರುನ್ಯೂಸ್ ತಂಡದ ಮುಖ್ಯಸ್ಥರಾದ ಆಲೂರು ಹನುಮಂತರಾಯಪ್ಪ ಶುಭಹಾರೈಸಿದರು.
ಸಿ.ಎಂ.ತಿಪ್ಪೇಸ್ವಾಮಿರವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನು ಹೆಚ್ಚು ಹೆಚ್ಚು ಪುಸ್ತಕಗಳನ್ನು ರಚಿಸುವ ಮೂಲಕ ಪ್ರಶಸ್ತಿ ಪುರಸ್ಕಾರಗಳನ್ನು ಸ್ವೀಕರಿಸುವಂತಾಗಲಿ ಎಂಬುದಾಗಿ “ಹಿರಿಯೂರು ನ್ಯೂಸ್” ತಂಡದ ವತಿಯಿಂದ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಆಲೂರು ಹನುಮಂತರಾಯಪ್ಪ, ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್ ಹಾಗೂ ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್, ಉಮೇಶ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ ಇವರುಗಳು ಶುಭಕೋರಿದ್ದಾರೆ.