ಚಳ್ಳಕೆರೆ: ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಶನಿವಾರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ನಿವಾಸದ ಮುಂದೆ ಮಾದಿಗ ದಂಡೋರ ಸಮಿತಿ ಸೇರಿದಂತೆ ಇತರೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದರು.








ಈ ವೇಳೆ ಮಾತಾಡಿದ ಮಾಜಿ ನಗರಸಭಾ ಸದಸ್ಯ ವಿಜಯಕುಮಾರ್ ಮಾದಿಗ ಸಮುದಾಯವು ಕಳೆದ 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಅವಿರತವಾದ ಹೋರಾಟ ನಡೆಸುತ್ತಾ ಬಂದಿದ್ದರು ಆಳುವ ಸರ್ಕಾರಗಳು ಕೇವಲ ಭರವಸೆಯನ್ನು ನೀಡಿ ಮತ ಪಡೆದುಕೊಂಡು ಅಧಿಕಾರ ನಡೆಸಿವೆ ವಿನಹ ಇದುವರೆಗೂ ಜಾರಿಗೊಳಿಸಲು ಮನಸ್ಸು ಮಾಡುತ್ತಿಲ್ಲ ಇದರಿಂದಾಗಿ ದಲಿತ ವರ್ಗದ ಜನರಿಗೆ ಸಿಗಬೇಕಾದ ಹಕ್ಕುಗಳು ದೊರೆಯದೆ ಅವರ ಜೀವನ ಸಂಕಷ್ಟದಾಯಕವಾಗಿದೆ ಮಾದಿಗ ಸಮುದಾಯವು ಯಾವುದೇ ಜಾತಿಯ ಮೀಸಲಾತಿಯನ್ನು ಕಿತ್ತುಕೊಳ್ಳುತ್ತಿಲ್ಲ ಬದಲಾಗಿ ಮೀಸಲಾತಿಯನ್ನು ವಿಂಗಡಣೆ ಮಾಡಲು ಕೇಳುತ್ತಿದೆ ಆದರೆ ಮೇಲ್ವರ್ಗದ ಜಾತಿಯ ರಾಜಕಾರಣಿಗಳು ಕೆಲಜಾತಿಯನ್ನು ತುಳಿಯವ ಉದ್ದೇಶದಿಂದ ಮೀಸಲಾತಿ ವರ್ಗೀಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಮಾತು ಕೊಟ್ಟಂತೆ ನಡೆದುಕೊಂಡು ಒಳಮಿಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಮಾತನಾಡಿ ಕಳೆದ 30 ವರ್ಷಗಳಿಂದ ಮಾದಿಗ ಸಮುದಾಯವು ಒಳ ಮೀಸಲಾತಿಗಾಗಿ ಹೋರಾಡುತ್ತಾ ಬಂದಿರುವುದು ನಾನು ರಾಜಕೀಯ ಪ್ರವೇಶಕ್ಕೂ ಮುನ್ನವೇ ತಿಳಿದಿರುವ ವಿಷಯ ನಾನು ಸಹ ಇಂತಹ ಹಲವು ಪ್ರತಿಭಟನೆಗಳಲ್ಲಿ ಭಾಗವಹಿಸಿ ಸರ್ಕಾರವನ್ನು ಒತ್ತಾಯಿಸಿದ ಪ್ರಸಂಗಗಳಿವೆ ಈಗ ನಾನು ಸಚಿವನಾಗಿರುವ ಸರ್ಕಾರವೇ ಆಡಳಿತದಲ್ಲಿ ಇರುವುದರಿಂದ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಸರ್ಕಾರ ಮಾದಿಗ ಸಮುದಾಯದೊಂದಿಗೆ ಸದಾ ಜೊತೆಗಿರುತ್ತದೆ ಕಾಂಗ್ರೆಸ್ ಪಕ್ಷ ದಲಿತ ವರ್ಗಗಳ ಪರವಾದ ಧ್ವನಿಯಾಗಿ ನಿಲ್ಲುತ್ತಾ ಬಂದಿದ್ದು ಸರ್ಕಾರ ಯಾವುದೇ ವರ್ಗಕ್ಕೆ ಅನ್ಯಾಯವಾಗದಂತೆ ಒಳ ಮೀಸಲಾತಿಯನ್ನು ಜಾರಿಗೊಳಿಸಿ ದಲಿತರಿಗೆ ನ್ಯಾಯ ದೊರಕಿಸಿಕೊಡಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಕಾಂತರಾಜ್ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೆಚ್ ರವಿಚಂದ್ರ ರಮೇಶ್ ಕರಿಯಪ್ಪ ಮಹಾಂತೇಶ್ ಹನುಮಂತಪ್ಪ ಟಿ ಶ್ರೀನಿವಾಸ್ ರಾಮಾಂಜನೇಯ ಕೆ ಮುರಳಿ ಹೊನ್ನೂರಪ್ಪ ನಾಗರಾಜ್ ತಿಪ್ಪೇಸ್ವಾಮಿ ರಂಗಸ್ವಾಮಿ ಚೌಳೂರು ಪ್ರಕಾಶ್ ಗಿರಿಯಪ್ಪ ರಾಜಣ್ಣ ಗಂಗಾಧರ್ ತಿಪ್ಪೇಸ್ವಾಮಿ ಮಂಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.