ಮೊಳಕಾಲ್ಮೂರು. ಅ25ನಾಟಕಗಳು ಮನರಂಜನೆಗಷ್ಟೇ ಅಲ್ಲದೆ ಸಮಾಜದ ಬದಲಾವಣೆಗೂ ಕೂಡ ಕಾರಣವಾಗುತ್ತವೆ ಎಂದು ನಿವೃತ್ತ ಕೆಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಅವರು ಬಿಜಿಕೆರೆ ಗ್ರಾಮದಲ್ಲಿ ಅಪ್ಪು ಮೆಲೋಡಿ ಸಂಸ್ಥೆಯವರು ಆಯೋಜಿಸಿದಂತ ರೇಣುಕಾ ದೇವಿ ಬಯಲು ನಾಟಕದ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ ನಾಟಕ ಮತ್ತು ಸಿನಿಮಾದ ಕೆಲವೊಂದು ಸಂದರ್ಭಗಳು ಸಮಾಜದ ಬದಲಾವಣೆಗೆ ಕಾರಣವಾಗಿರುವ ನಿದರ್ಶನಗಳಿವೆ ಭಕ್ತಿ ಪ್ರಧಾನವಾದ ನಾಟಕಗಳಿಂದ ನಂಬಿಕೆ ಏಕಾಗ್ರತೆ ಮತ್ತು ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ ಚಿತ್ರದುರ್ಗದ ಈ ನೆಲದಲ್ಲಿ ಇಂತಹ ಕಲೆಗಳು ನೆಲೆಯಾಗಿ ನಿಂತಿವೆ ಚಿತ್ರದುರ್ಗದ ಪಾಳ್ಳೇಗಾರರು ಇಂತಹ ಕಲೆಗಳಿಗೆ ತೇಜನ ಮತ್ತು ಪ್ರೋತ್ಸಾಹ ನೀಡುತ್ತಿದ್ದರು ಅವರ ಪ್ರೇರಣೆಯಿಂದ ಈ ಭಾಗದಲ್ಲಿ ಇಂತಹ ಹೆಚ್ಚು ಹೆಚ್ಚು ನಾಟಕಗಳು ಜೀವಂತವಾಗಿವೆ ಅಲ್ಪಸ್ವಲ್ಪ ಬಡತನವಿದ್ದರೂ ಕೂಡ ಈ ಭಾಗದ ಜನ ನ್ಯಾಯ ನಿಷ್ಠೆ ಮತ್ತು ಧರ್ಮದ ದಾರಿಯಲ್ಲಿ ನಡೆಯುವಂತ ಜನ ಈ ಕಲೆಗಳಿಗೆ ಪ್ರೋತ್ಸಾಹ ನೀಡಿದಷ್ಟೇ ತಮ್ಮ ಮನೆಯಲ್ಲಿರುವ ಮಕ್ಕಳಿಗೂ ಕೂಡ ಉತ್ತಮವಾದ ಶಿಕ್ಷಣ ಒದಗಿಸುವ ಜವಾಬ್ದಾರಿ ನಿಮ್ಮದಾಗಿದೆ ಶಿಕ್ಷಣದ ಮುಖಾಂತರ ಸ್ವಾವಲಂಬನೆಯ ಮತ್ತು ಸ್ವಾಭಿಮಾನದ ಬದುಕು ಸಾಧ್ಯ ಗುಣಮಟ್ಟದ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ತಪ್ಪದೇ ಕಡ್ಡಾಯವಾಗಿದೆ ಮಕ್ಕಳಿಗೆ ನೀಡಿ ಎಂದು ಹೇಳಿದರು



ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸದಸ್ಯ ಶುಕೂರು ಗುರುಸ್ವಾಮಿ ಮತ್ತು ರಾಮಕೃಷ್ಣಪ್ಪ ಮಾತನಾಡಿದರು
About The Author
Discover more from JANADHWANI NEWS
Subscribe to get the latest posts sent to your email.