ಚಳ್ಳಕೆರೆ ಅ.26
ವರುಣನ ಆರ್ಭಟಕ್ಕೆ ಕೊಚ್ಚಿಹೋದ ರಸ್ತೆಗಳು ರಸ್ತೆ ಕೊರಕಲು ಬಿದ್ದಿದ್ದು ವಾಹನ ಸವಾರರು ಹರಸಹಾಸ ಪಡುವಂತಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಪಂ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದಿಂದ ರೈತರ ಜಮೀನಿಗೆ ಹಾಗೂ ಹೊಟ್ಟೆಪ್ಪಹಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗದ ರಸ್ತೆ ಮಳೆಯಿಂದ ಕೊರಕಲು ಬಿದ್ದಿದ್ದು, ಗಿಡ ಗೆಂಟೆಗಳು ಸೀಮೆ ಜಾಲಿ ಬೆಳೆದು ರಸ್ತೆಗೆ ಚಾಚಿಕೊಂಡಿರುವುದರಿಂದ ರೈತರ ತಮ್ಮ ಜಮೀನುಗಳಿಗೆ ಓಡಾಡಲು ಹಾಗೂ ಹೊಟ್ಟಪ್ಪನಹಳ್ಳಿ ಗ್ರಾಮಕ್ಕೆ ಹೋಗ ಬೇಕೆಂದರೆ ವಾಹನಗಳಲ್ಲಿ ಓಡಾಡ ಬೇಕಾಗದರೆ ಜೀವ ಕೈಯಲ್ಲಿಡಿದು ಸಂಚರಿಸುವುದು ಅನಿವಾರ್ಯವಾಗಿದೆ.
ಕೇವಲು ಒಂದು ಗ್ರಾಮದ ಕಥೆಯಲ್ಲ ಬಹುತೇಕ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಹೋಗವ ಹಾಗೂ ಗ್ರಾಮಣ ಸಂಪರ್ಕ ರಸ್ತೆಗಳ ಸಮಸ್ಯೆಯಾಗಿದ್ದು. ನರೇಗಾ ಯೋಜನೆಯಡಿಯಲ್ಲಿ “ನಮ್ಮ ಹೊಲ-ನಮ್ಮ ರಸ್ತೆ’, ಹಾಗೂ ಗ್ರಾಮೀಣ ಸಂಪರ್ಕ ರಸ್ರೆಗಳ ಅಭಿವೃದ್ಧಿ ಮಾಡುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗ ಬೇಕಿದೆ.




