July 28, 2025
IMG-20250726-WA0156.jpg

ವರದಿ,ಕೆ. ಟಿ ಓಬಳೇಶ್ ನಲಗೇತನಹಟ್ಟಿ.

ನಾಯಕನಹಟ್ಟಿ :: ಪ್ರತಿ ವರ್ಷ ಜುಲೈ 30ರಂದು ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ಮತ್ತು ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಚಳ್ಳಕೆರೆ ಶ್ರೀಮತಿ ಹೇಮಾ ಎಚ್ಆರ್ ಹೇಳಿದರು.
ಶನಿವಾರ ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮದುರ್ಗ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ನ್ಯಾಯಾಂಗ ಇಲಾಖೆ, ಶಿಕ್ಷಣ ಇಲಾಖೆ ಪೋಲಿಸ್ ಇಲಾಖೆ ಚಳ್ಳಕೆರೆ ಇವರ. ಸಂಯುಕ್ತಾಶ್ರಯದಲ್ಲಿ “ಕಾನೂನು ಅರಿವು – ನೆರವು ಕಾರ್ಯಕ್ರಮ” ಮಾನವ ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಕು ಮೂಲಕ ಉದ್ಘಾಟಿಸಿ ಮಾತನಾಡಿದರು ಕಾನೂನಿನ ಮುಂದೆ ನಾವೆಲ್ಲರೂ ಒಂದೇ ಎಂಬ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಬಾಳಬಹುದು ಆದ್ದರಿಂದ ಪ್ರತಿಯೊಬ್ಬರೂ ಕಾನೂನಿನ ಅರಿವು ಪಡೆಯಬೇಕು. ಆದಾಗ ಮಾತ್ರ ಅಪರಾಧಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಈ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣವಾಗಿ ದೇಶದ ಅಭಿವೃದ್ಧಿಗೆ ನಾದಿಯಾಗುತ್ತದೆ ಎಂದು ತಿಳಿಸಿದರು.
ಅಪಾರ ಸಿವಿಲ್ ನ್ಯಾಯಾಧೀಶ ಪುನೀತ್ ಬಿ ಆರ್ ಮಾತನಾಡಿದರು ಇತ್ತೀಚಿನ ದಿನದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ನಡೆಯುತ್ತಿದ್ದು ಹೆಣ್ಣುಗೆ 18 ವರ್ಷ ಗಂಡುಗೆ 21 ವರ್ಷ ತುಂಬಿರಬೇಕು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ವಿವಾಹ ಮಾಡುವುದರಿಂದ ಕಾನೂನು ಕ್ರಮ ಜರುಗಿಸಲಾಗುತ್ತದೆ ಪ್ರತಿಯೊಬ್ಬರು ಮಕ್ಕಳ ರಕ್ಷಣೆ ಸಹಾಯವಾಣಿ ಸಂಖ್ಯೆ 1089 ಕರೆ ಮಾಡುವಂತೆ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಸಲಹೆ ನೀಡಿದರು.
ಇದೆ ವೇಳೆ ನಾಯಕನಹಟ್ಟಿ ಪೊಲೀಸ್ ಠಾಣೆ ಉಪನಿರೀಕ್ಷಿತ ಜಿ. ಪಾಂಡುರಂಗ ಮಾತನಾಡಿದರು 18 ವರ್ಷದೊಳಗಿನ ಮಕ್ಕಳು ಕಳ್ಳ ಸಾಗಾಣಿಕೆ ಆಗುತ್ತಾರೆ ಇದರಲ್ಲಿ 80% ಹೆಣ್ಣು ಮಕ್ಕಳು 20% ಗಂಡು ಮಕ್ಕಳು ಇರ್ತಾರೆ ಕಳ್ಳ ಸಾಗಾಣಿಕೆ ಆಗುವುದು ನಂಬಿಕೆ ದ್ರೋಹದ ಮೇಲೆ
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಶಮೀರ್ ನಂದ್ಯಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುರೇಶ್, ನಲಗೇತನಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾಲಮ್ಮ ಪೂರ್ಣ ಓಬಯ್ಯ, ಸದಸ್ಯರಾದ ಬಂಗಾರಪ್ಪ, ದ್ರಾಕ್ಷಾಯಿಣಿ ಚಿದಾನಂದ, ಕೆ.ಬಿ. ಬೋಸಯ್ಯ ವಕೀಲರ ಸಂಘದ ಉಪಾಧ್ಯಕ್ಷ ಬಿ ಪಾಲಯ್ಯ, ಖಜಾಂಚಿ ಟಿ. ರುದ್ರಯ್ಯ, ನಲಗೇತನಹಟ್ಟಿ ಪಿಡಿಒ ರಾಜಣ್ಣ, ಗ್ರಾಮಸ್ಥರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading