July 28, 2025
IMG-20250726-WA0161.jpg

ನಾಯಕನಹಟ್ಟಿ : ತುಳುಕು ಮತ್ತು ನಾಯಕನಹಟ್ಟಿ ಬಿಜೆಪಿ ಮಂಡಲ ಹಾಲಿ ಅಧ್ಯಕ್ಷರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸಬೇಕು ಎಂದು ಬಿಜೆಪಿ ಮುಖಂಡ ಎಂ ಎಸ್ ರವಿಕುಮಾರ್ ಮನ್ನೆಕೋಟೆ ಒತ್ತಾಯ ಮಾಡಿದರು.

ತಳಕು ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ನಾನು ತಳಕು ಮತ್ತು ನಾಯಕನಹಟ್ಟಿ ಮಂಡಲ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ನನಗೆ ಅಧ್ಯಕ್ಷನಾಗುವಂತೆ ಒತ್ತಾಯ ಮಾಡಿದ್ದರು. ಆದರೆ ಜಿಲ್ಲಾಧ್ಯಕ್ಷರ ಆದೇಶದಂತೆ ಬೇರೆಯವರಿಗೆ ಮಂಡಲ ಅಧ್ಯಕ್ಷ ಸ್ಥಾನ ನೀಡಲಾಯಿತು. ನನಗೆ ಅವಕಾಶ ಕೈ ತಪ್ಪಿದರೂ ಕೂಡ ಬೇಸರ ಪಡದೇ ಸಂತೋಷಪಟ್ಟೆ. ಮಂಡಲ ಅಧ್ಯಕ್ಷ ಸ್ಥಾನಕ್ಕೆ 21 ಜನರ ಪಟ್ಟಿಯನ್ನು ನೀಡಲಾಗಿತ್ತು, 21 ಜನರಲ್ಲಿ ಯಾರ ಅಭಿಪ್ರಾಯ ಪಡೆಯದೇ ಸ್ವಂತ ನಿರ್ಧಾರ ತೆಗೆದುಕೊಂಡು ಮಂಡಲ ಅಧ್ಯಕ್ಷ ಸ್ಥಾನಕ್ಕೆ ಚನ್ನಗಾನಹಳ್ಳಿ ಮಲ್ಲೇಶ್ ರವರನ್ನು ಆಯ್ಕೆ ಮಾಡಲಾಯಿತು. ಮೊನ್ನೆ ಪದಾಧಿಕಾರಿಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ಸ್ಥಳೀಯ ಕಾರ್ಯಕರ್ತರು, ಮುಖಂಡರು ಹಾಗೂ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿಯವರ ಅಭಿಪ್ರಾಯ ಪಡೆಯದೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾಗರಾಜ್, ಬಂಗಾರಪ್ಪ ಹಾಗೂ ಭೀಮಣ್ಣನವರಿಗೆ ಅವಕಾಶ ಮಾಡಿಕೊಡುತ್ತಾರೆ ಎಂದು ಭಾವಿಸಿದ್ದೆವು. ಈ ವಿಷಯ ಕುರಿತು ಜಿಲ್ಲಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯವರಿಗೆ ಕರೆ ಮಾಡಿ ಪ್ರಸ್ತಾಪಿಸಲಾಗಿತ್ತು. ಆದರೂ ಅದಕ್ಕೂ ಅವಕಾಶ ಕೊಡಲಿಲ್ಲ, ಈ ದಿನ ಮಾಜಿ ಜಿಲ್ಲಾಧ್ಯಕ್ಷರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಹಾಲಿ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಮಲ್ಲೇಶ್ 2018ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಯಾವ ಪಕ್ಷದಲ್ಲಿದ್ದರು? ನಮ್ಮ ಪಕ್ಷದಲ್ಲಿದ್ದರೇ? ಎಲ್ಲಿದ್ದರೂ ಅವರು? ನಮ್ಮ ಪಕ್ಷದ ತತ್ವ ಸಿದ್ದಾಂತದಿಂದ ಕೂಡಿರುವ ಪಕ್ಷ ಎಲ್ಲಿದ್ದರೂ ಮಲ್ಲೇಶ್? 2018 ರ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷದಲ್ಲಿ ಮಲ್ಲೇಶ್ ಇರಲಿಲ್ಲ.ಪಕ್ಷದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಮಲ್ಲೇಶ್ ರವರನ್ನು ಮಂಡಲ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿದೆ. ಇದೇನಾ ಸಾಮಾಜಿಕ ನ್ಯಾಯ! ನಾಯಕನಹಟ್ಟಿ ಮಂಡಲದಲ್ಲಿ ಅಕ್ಕ ಬುಕ್ಕರದ್ದೇ ದರ್ಬಾರ್. ಬೇರೆ ಕಾರ್ಯಕರ್ತರು ಯಾರು ಬೇಕಾಗಿಲ್ಲ, ಬಿಜೆಪಿ ಪಕ್ಷಕ್ಕೆ ಹಗಲು ಇರುಳು ಮಣ್ಣು ಹೊತ್ತಿರುವ ಮುಖಂಡರುಗಳು ಇದ್ದಾರೆ. ಪದಾಧಿಕಾರಿಗಳ ಆಯ್ಕೆಯಲ್ಲಿ ತಳಕು ಹೋಬಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ನಾಯಕನಹಟ್ಟಿ ಮಂಡಲ ಅಧ್ಯಕ್ಷ ಸ್ಥಾನದಿಂದ ಕೂಡಲೇ ಮಲ್ಲೇಶ್ ರವನ್ನು ರಾಜೀನಾಮೆ ವಜಾಗೊಳಿಸಬೇಕು ಎಂದು ಜಿಲ್ಲಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು.

ನಂತರ ತಳಕು ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ ಮಂಡಲ ಅಧ್ಯಕ್ಷರು ಸ್ಥಳೀಯ ಕಾರ್ಯಕರ್ತರ ಹಾಗೂ ಮುಖಂಡರ ಜೊತೆ ಚರ್ಚಿಸಿ, ಸೂಕ್ತ ಕಾರ್ಯಕರ್ತರನ್ನು ಗುರುತಿಸಿ ಪಕ್ಷಕ್ಕಾಗಿ ಯಾರು ದುಡಿದಿದ್ದಾರೆ ಅವರಿಗೆ ಮಂಡಲದಲ್ಲಿ ಪದಾಧಿಕಾರಿಗಳ ಹುದ್ದೆಗಳನ್ನು ನೀಡಬೇಕಿತ್ತು. ಅವರು ಏನು ಉದ್ದೇಶ ಇಟ್ಟುಕೊಂಡು ಮಾಡಿದ್ದಾರೆ ನಮ್ಮ ಗಮನಕ್ಕೆ ಬಂದಿಲ್ಲ. ಮಂಡಲ ಅಧ್ಯಕ್ಷರು ನಾವೆಲ್ಲರೂ ಸೇರಿ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಅವರೊಂದಿಗೆ ಚರ್ಚಿಸಿ ಪದಾಧಿಕಾರಿಗಳ ಆಯ್ಕೆ ಮಾಡಿದ್ದೇವೆ ಎನ್ನುವ ಗಾಸಿಪ್ ಕೇಳಿ ಬರುತ್ತಿದೆ. ನಾವುಗಳು ಮಾಜಿ ಶಾಸಕರನ್ನು ಸಂಪರ್ಕಿಸಿದಾಗ ನಮ್ಮ ಗಮನಕ್ಕೆ ಯಾವುದೇ ರೀತಿಯ ಪದಾಧಿಕಾರಿಗಳ ಆಯ್ಕೆ ವಿಷಯವಾಗಲಿ ಚರ್ಚೆಯಾಗಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಹಾಗಾಗಿ ಸ್ವಯಂ ನಿರ್ಧಾರ ತೆಗೆದುಕೊಳ್ಳುವುದಾದರೆ ನಮ್ಮನ್ನು ಯಾಕೇ ಪಕ್ಷದಲ್ಲಿ ಸಂಘಟನೆ ಮಾಡಲಿಕ್ಕೆ ಕಾರ್ಯಕರ್ತರನ್ನು ಇಟ್ಟುಕೊಂಡಿದ್ದಾರೆ. ಇದನ್ನು ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು, ರಾಜ್ಯಾಧ್ಯಕ್ಷರು ಅವಲೋಕನ ಮಾಡಿಕೊಳ್ಳಬೇಕು..
ಕೆಲವರ ನಿರ್ಧಾರದಿಂದ ಪಕ್ಷಕ್ಕೆ ಎಷ್ಟು ಡ್ಯಾಮೇಜ್ ಆಗುತ್ತದೆ ನಂಬುವುದನ್ನು ಯೋಚಿಸಬೇಕು ಡಿಸೆಂಬರ್ ಅಂತ್ಯದ ಒಳಗೆ ಗ್ರಾಮ ಪಂಚಾಯತಿ ಚುನಾವಣೆಗಳು ಘೋಷಣೆಯಾಗುವ ಸಾಧ್ಯತೆ ಇದೆ. ನಾವುಗಳು ಕಾರ್ಯಕರ್ತರನ್ನು ಒಟ್ಟುಗೂಡಿಸಿಕೊಂಡು ನಮ್ಮ ಭಾಗದಲ್ಲಿ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿ ಅವರ ಪರವಾಗಿ ಮತ ಕೇಳಲು ಹೋದಾಗ ನಮಗೆ ಆಗುವಂತಹ ಅವಮಾನಗಳಿಗೆ ಯಾರು ಹೊಣೆ? ಬಿಚ್ಚುಜ್ಞಾನ ಪ್ರಜ್ವಲಿಸುತ್ತದೆ, ಮುಚ್ಚಿದ ಜ್ಞಾನ ಕೊಳೆತು ಹೋಗುತ್ತದೆ. ಮಾಡಿರುವಂತಹ ದಾನ ದಾರಿ ಉದ್ದಕ್ಕೂ ಕಾಯುತ್ತದೆ ಎನ್ನುವಂತೆ ಈಗ ಆಯ್ಕೆ ಮಾಡಿರುವಂತಹ ಪದಾಧಿಕಾರಿಗಳು ಮನದಟ್ಟು ಮಾಡಿಕೊಳ್ಳಬೇಕು. ಅವರು ಅರಿತುಕೊಳ್ಳಬೇಕು ಗೊತ್ತಿಲ್ಲವೆಂದರೆ ಹಿರಿಯರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶ ತೆಗೆದುಕೊಳ್ಳಬೇಕು. ಏಕರೂಪದ ನಿರ್ಧಾರ ಸರಿ ಕಾಣುವುದಿಲ್ಲ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಇವರೆಲ್ಲರೂ ಸೇರಿ ಡ್ಯಾಮೇಜ್ ಮಾಡುತ್ತಾರೆ ಎಂಬುದೇ ನಮ್ಮ ಅಭಿಪ್ರಾಯ. ಶಂಕರ ಸ್ವಾಮಿ ಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಸುಮಾರು ಒಂದು ವರ್ಷದ ಹಿಂದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಎಸ್ ಸಿ ಮೋರ್ಚ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿದರು.

ನಂತರ ಹಿರೇಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ರಾಧಮ್ಮ ಮಾತನಾಡಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪವಿತ್ರಮ್ಮ ರನ್ನು ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಹಿರೇಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ರಾಧಮ್ಮ ಬೋರಣ್ಣ, ಭೀಮಣ್ಣ ರೇಖಲಗೆರೆ, ಮಲ್ಲಿಕಾರ್ಜುನ ಅಬ್ಬೇನಹಳ್ಳಿ, ರಾಜಣ್ಣ ಚಿಕ್ಕಮ್ಮನಹಳ್ಳಿ, ನಾಗರಾಜ್ ಚಿಕ್ಕಮ್ಮನಹಳ್ಳಿ, ತಿಪ್ಪೇಸ್ವಾಮಿ ಚಿಕ್ಕಮ್ಮನಹಳ್ಳಿ, ಕೆ ಸೂರಯ್ಯ ಚಿಕ್ಕಮ್ಮನಹಳ್ಳಿ, ಬಸವ ರೆಡ್ಡಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ, ಕೆರೆಯಾಗಳಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಜಡೇಜಾ ನಾಯಕ, ಗಜ್ಜಗಾನಹಳ್ಳಿ ಹೊನ್ನೂರಪ್ಪ, ಚಿಕ್ಕಮ್ಮನಹಳ್ಳಿ ಸಾಹುಕಾರ್ ತಿಪ್ಪೇಸ್ವಾಮಿ, ತಳಕು ಮಂಜಣ್ಣ, ತಳಕು ಬಿ ಟಿ ಪಾಲನಾಯಕ, ತಳಕು ನವೀನ್, ಚಿತ್ರನಾಯಕನಹಳ್ಳಿ ತಿಪ್ಪೇಸ್ವಾಮಿ, ಗೆಜ್ಜಪ್ಪ, ರಮೇಶ್ ಅಬ್ಬೇನಹಳ್ಳಿ, ನಾಗೇಶ್ ಅಬ್ಬೆನಹಳ್ಳಿ, ಕೋಳಿ ತಿಪ್ಪೇಸ್ವಾಮಿ, ಕೆರೆಯಾಗಳಹಳ್ಳಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ತಿಪ್ಪೇಸ್ವಾಮಿ ಇನ್ನು ಮುಂತಾದವರು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading