
ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಬೇಡರಡ್ಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ತೆರೆವಾದ ಹಿನ್ನೆಲೆ ಇಂದು ಚಳ್ಳಕೆರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ
ಅರುಣ್ ಕುಮಾರ್ ಕೆ. ಆಯ್ಕೆಯಾದರು
ಅಧ್ಯಕ್ಷ ಸ್ಥಾನಕ್ಕೆ ಅರುಣ್ ಕುಮಾರ್ ಕೆ, ರಾಮರೆಡ್ಡಿ ಟಿ. ಇಬ್ಬರೂ ನಾಮಪತ್ರ ಸಲ್ಲಿಸಿದರು.
ರಾಮರೆಡ್ಡಿ ಟಿ.5 ಮತಗಳನ್ನು ಪಡೆದು ಪರಭವಗೊಂಡರು 9 ಮತಗಳನ್ನು ಪಡೆದು ಅರುಣ್ ಕುಮಾರ್ ಕೆ . ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಶಶಿಧರ್ ತಿಳಿಸಿದರು.
ಇದೇ ವೇಳೆ ಮಾತನಾಡಿದ ಅವರು ಸರ್ವ ಸದಸ್ಯರ ಸಹಕಾರದಿಂದ ಆಯ್ಕೆಯಾಗಿದ್ದು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಬೇಡರಡ್ಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರು ಚರಂಡಿ ಸ್ವಚ್ಛತೆ ರಸ್ತೆ ನಿರ್ಮಾಣ ಬೀದಿ ದೀಪ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು ಅಷ್ಟೇ ಅಲ್ಲದೆ ನೆರೆಗಾ ಕಾಮಗಾರಿ ಸಮರ್ಪಕವಾಗಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ಮಾತನಾಡಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣರವರ ಮಾರ್ಗದರ್ಶನದಂತೆ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಆಯ್ಕೆ ಆಗಿರುವುದು ಸಂತಸ ತಂದಿದೆ ಎಂದರು.
ಇನ್ನೂ ಇನ್ನೂ ಕಾರ್ಯಕರ್ತರು ಅಭಿಮಾನಿಗಳು ಕುಟುಂಬಸ್ಥರು ಸಿಹಿ ಹಂಚಿ ಪಟಾಕಿ ಹಚ್ಚಿ ಸಂಭ್ರಮಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ಕೆಡಿಪಿ ಸದಸ್ಯ ಎಸ್ ಬಿ ವಿಶ್ವನಾಥ್ ರೆಡ್ಡಿ, ಅಶೋಕ್ ರೆಡ್ಡಿ ನರಸಿಂಹರೆಡ್ಡಿ, ನಿಂಗಣ್ಣ ಬೂದಿಹಳ್ಳಿ ಉಮೇಶ್, ಹಿರೇಹಳ್ಳಿ ಕೃಷ್ಣಪ್ಪ, ಬೇಡರಡ್ಡಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಬಿ.ವಿ. ವೇಣುಗೋಪಾಲ ರೆಡ್ಡಿ, ಬಿ. ಒ.ತಿಮ್ಮಯ್ಯ, ಜಿ. ಎಂ. ಸುಧಾ, ಯಲ್ಲಮ್ಮ, ಕೆ.ವಿ. ಶಿವಕುಮಾರ್ ಎನ್. ತ್ರಿವೇಣಿ, ಜಯಲಕ್ಷ್ಮಿ, ಪಿಡಿಒ ಮೋಹನ್ ದಾಸ್, ತಾಲೂಕು ಪಂಚಾಯತಿ ಸಿಬ್ಬಂದಿಗಳಾದ ಡಿ. ಪ್ರವೀಣ್ ಕುಮಾರ್, ದ್ವಿತೀಯ ದರ್ಜೆ ಸಹಾಯಕ ಬಿ. ಬೋಸಯ್ಯ, ಸೇರಿದಂತೆ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.