July 21, 2025
totagarike-1.jpg

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಚಿತ್ರದುರ್ಗಮೇ26:
2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಪಡೆಯಲು ಆಸಕ್ತ ರೈತ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 20 ಅರ್ಜಿ ಸಲ್ಲಿಸಲು ಕೊನೆಯ ದಿನ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಡಿ ದಾಳಿಂಬೆ, ಕಂದು ಬಾಳೆ/ಅಂಗಾಂಶ ಬಾಳೆ, ಪಪ್ಪಾಯ, ಡ್ರಾಗನ್ ಪ್ರೂಟ್ ಹಣ್ಣಿನ ಬೆಳೆಗಳು, ಹೈಬ್ರೆಡ್ ತರಕಾರಿ, ಕಟ್ ಪ್ಲವರ್ಸ್ (ಗುಲಾಬಿ, ಜೆರ್ಬೆರಾ, ಕಾರ್ನೇಷನ್) ಸುಗಂಧರಾಜ ಹೂವುಗಳು, ಬಿಡಿ ಹೂವುಗಳ ಮತ್ತು ಕರಿಮೆಣಸು/ಬಹುವಾರ್ಷಿಕ ಸಾಂಬಾರು ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಮತ್ತು ಅಣಬೆ ಉತ್ಪಾದನಾ ಘಟಕ, ಪುನಶ್ಚತನ ಕಾರ್ಯಕ್ರಮ, ಪಾಲಿಥೀನ್ ನರ್ಸರಿ ಘಟಕ, ಪಕ್ಷಿ ನಿರೋದಕ ಬಲೆ, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಪಾಲಿಹೌಸ್, ಪ್ಲಾಸ್ಟಿಕ್ ಮಲ್ಚಿಂಗ್, ಕಳೆ ನಿಯಂತ್ರಕ ಮ್ಯಾಟ್ (ವೀಡ್ ಮ್ಯಾಟ್), ತರಕಾರಿ ಬೆಳೆಗಳಿಗೆ ಆಧಾರ ನೀಡುವ ವ್ಯವಸ್ಥೆ, ಎರೆಹುಳು ಗೊಬ್ಬರ ಘಟಕ, ಜೇನು ಪೆಟ್ಟಿಗೆ, 20 ಹೆಚ್.ಪಿ ವರೆಗಿನ ಟ್ರ್ಯಾಕ್ಟರ್, ಪವರ್ ಟ್ರಿಲ್ಲರ್, ಭೂಮರ್ ಸ್ಪ್ರೆಯರ್, ಶೀಥಲಗೃಹ ಘಟಕ, ಪ್ರಾಥಮಿಕ ಸಂಸ್ಕರಣಾ ಘಟಕ, ಸೋಲಾರ್ ಕ್ರಾಪ್ ಡ್ರೈಯರ್, ಪ್ಯಾಕ್‍ಹೌಸ್ ಹಾಗೂ ಈರುಳ್ಳಿ ಶೇಖರಣ ಘಟಕಗಳಿಗೆ ಸಹಾಯಧನ ಪಡೆಯಲು ಆಸಕ್ತ ರೈತ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿರುತ್ತದೆ.
ಅರ್ಜಿಯನ್ನು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ 2025ರ ಜೂನ್ 20 ರೊಳಗೆ ನಿಯಮಾನುಸಾರ ಸಲ್ಲಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ತಾಲ್ಲೂಕಿನ ಸಂಬಂಧಪಟ್ಟ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading