March 17, 2026
IMG-20250525-WA0155.jpg

ಚಳ್ಳಕೆರೆ: ತಾಲೂಕಿನ ಹೈನುಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾರಾಟಗಾರರು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಮನ್ನಣೆ ನೀಡಬೇಕು ಎಂದು ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಬಿ.ಸಿ ಸಂಜೀವ ಮೂರ್ತಿ ತಿಳಿಸಿದರು.

ನಗರದ ನಂದಿನಿ ಉಪಕಚೇರಿಯಲ್ಲಿ ನಂದಿನಿ ಹಾಲು ಉತ್ಪನ್ನಗಳ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾರಾಟಗಾರರು ಖಾಸಗಿ ಹಾಲಿನ ಬ್ರಾಂಡ್ ಗಳನ್ನು ಪ್ರೋತ್ಸಾಹಿಸದೆ ನಂದಿನಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ತಾಲೂಕು ಬರಪೀಡಿತ ಪ್ರದೇಶವಾಗಿರುವುದರಿಂದ ಹೈನುಗಾರಿಕೆಯನ್ನೇ ನಂಬಿ ಬದುಕುವ ಲಕ್ಷಾಂತರ ಕುಟುಂಬಗಳಿವೆ ಮಾರಾಟಗಾರರು ಉತ್ತಮ ರೀತಿಯಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಿದಾಗ ಮಾತ್ರ ಹೈನುಗಾರರಿಗೆ ನ್ಯಾಯ ಒದಗಿಸಲು ಸಾಧ್ಯ ನಂದಿನಿ ಹಾಲಿಗೆ ಬೇಡಿಕೆ ಹೆಚ್ಚಿಸಿದರೆ ಸ್ಥಳೀಯ ಹೈನುಗಾರರ ಬದುಕಿಗೆ ನೆರವಾದಂತೆ ಆಗುತ್ತದೆ. ಏಜೆಂಟರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಎಸ್ ಎಸ್ ಎಲ್  ಸಿ ಹಾಗೂ ಪಿಯುಸಿ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕ ಗಳಿಸಿದರೆ ಪ್ರೋತ್ಸಾಹ ಧನವನ್ನು ಸಹ ನೀಡಲಾಗುವುದು ಎಂದು ತಿಳಿಸಿದರು.

ಈ ಸಭೆಯಲ್ಲಿ ಭಾಗವಹಿಸಿದ್ದ ನಂದಿನಿ ಉತ್ಪನ್ನಗಳ ಡೀಲರ್ ದಾರರಿಗೆ ಶಿಮುಲ್ ಶಿವಮೊಗ್ಗ ವತಿಯಿಂದ ಕ್ಯಾರಿ ಬ್ಯಾಗ್. ರೈನ್ ಕೋಟ್. ಜರ್ಕಿನ್. ಟಿ-ಶರ್ಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾರ್ಕೆಟಿಂಗ್ ಆಫೀಸರ್ ಇರ್ಫಾನ್, ತನ್ವೀರ್.ಕಚೇರಿ ಸಿಬ್ಬಂದಿ.ಎಸ್. ಅಭಿಷೇಕ್. ಡೀಲರ್ ಗಳಾದ ಗೋವಿಂದರಾಜು. ಯನ್ನಪ್ಪಬಾಬು ದಿವಾಕರ್ ದಯಾನಂದ್ ಗೋವಿಂದರಾಜು. ಸುಶೀಲಾ ಆನಂದ್ ಗೀತಾ ಬೋರಣ್ಣ ಇನ್ನು ಮುಂತಾದವರು ಇದ್ದರು.

ಬೆಂಗಳೂರು ಕೇಂದ್ರೀಯ ಲೋಕಸಭಾ ಸದಸ್ಯರಾದ ಪಿ.ಸಿ. ಮೋಹನ್  ಭೇಟಿ

ಬೆಂಗಳೂರು ಕೇಂದ್ರೀಯ ಲೋಕಸಭಾ ಸದಸ್ಯರಾದ ಪಿ.ಸಿ. ಮೋಹನ್. ರವರು ,,ಶಿಮುಲ್,, ಚಿತ್ರದುರ್ಗಜಿಲ್ಲಾ ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ. ಯವರ ಚಳ್ಳಕೆರೆಯ ನರಹರಿನಗರ ದಲ್ಲಿರುವ ಮನೆಗೆ ಭೇಟಿ ಮಾಡಿ ಬಲಿಜ ಸಮಾಜದ ಅನೇಕ ವಿಚಾರಗಳು ಹಾಗೂ ಸಂಘಟನೆಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಬಿ.ಸಿ ವೆಂಕಟೇಶ್ ಮೂರ್ತಿ. ಬಿ.ಸಿ.ಸತೀಶ್ ಕುಮಾರ್ ಕಾರ್ತಿಕ್ ಎಸ್ ಮೂರ್ತಿ ಬಿ.ವಿ ಚಿದಾನಂದಮೂರ್ತಿ. ನಿರಂಜನ್ ಮೂರ್ತಿ. ಲಕ್ಷ್ಮಣ್ ಸುರೇಶ್ ಬಾಬು. ಹಾಗೂ ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading