September 15, 2025
IMG-20250526-WA0042.jpg

 

ಚಳ್ಳಕೆರೆ: ಕಾಲೇಜು ಹಂತದಲ್ಲಿ ಪದವಿ ಪೂರೈಸುವ ವಿದ್ಯಾರ್ಥಿಗಳು ಕೇವಲ ಸರ್ಕಾರಿ ಉದ್ಯೋಗಕ್ಕೆ ಕಾಯುತ್ತ ಕೂರದೆ ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾವಲಂಬನೆ ಜೀವನವನ್ನು ಕಟ್ಟಿಕೊಳ್ಳುವತ್ತಾ ಗಮನಹರಿಸಬೇಕು ಎಂದು ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಎಸ್ ಮಂಜುನಾಥ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 

ಕಾಲೇಜಿನ ಆವರಣದಲ್ಲಿ ಸ್ನಾತಕೋತ್ತರದ ಎಂಕಾಂ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ

ಸ್ವಾದ ಆಹಾರಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಪದವಿ ನಂತರ ವಿದ್ಯಾರ್ಥಿಗಳು ಸ್ವಯಂ ಉದ್ಯೋಗ ಕೈಗೊಂಡರೆ ಅವರ ವ್ಯಾಪಾರ ವ್ಯವಹಾರ ಜ್ಞಾನವನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಕೈಗೊಂಡಿದ್ದು ಇದರಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ವ್ಯಾಪಾರ ಜ್ಞಾನ ವೃದ್ಧಿಸಲು ಸಹಕಾರಿಯಾಗುತ್ತದೆ ಇಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸುಮಾರು 8 ತಂಡಗಳನ್ನು ರಚಿಸಿಕೊಂಡು ವಿವಿಧ ಆಹಾರಗಳನ್ನು ತಾವೇ ತಯಾರಿಸಿ ಅದನ್ನು ವ್ಯಾಪಾರ ಮಾಡುವ ಮತ್ತು ಕೊಂಡುಕೊಳ್ಳುವ ವಿಧಾನವನ್ನು ಅನುಸರಿಸಿದ್ದು ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಕಾಲೇಜಿನ ಸ್ನಾತಕ ವಿದ್ಯಾರ್ಥಿಗಳು ಕುತೂಹಲದಿಂದ ಗ್ರಾಹಕರಾಗಿ ತಾಜಾ ಆಹಾರಗಳನ್ನು ಖರೀದಿಸಿ ರುಚಿ ನೋಡಿದರು ಮುದ್ದೆ ,ಸಾರು,ಅನ್ನ ಮಸಾಲೆ, ದೋಸೆ ಪುಳಿಯೋಗರೆ, ಮಸಾಲೆ ,ಪೂರಿ, ಗೋಬಿ ಫ್ರೈಡ್ ರೈಸ್, ಹಣ್ಣಿನಿಂದ ತಯಾರಿಸಿದ ತಾಜಾ ಆಹಾರ ವೆಜ್ ರೋಲ್ ಇತ್ಯಾದಿ ಅನೇಕ ಆಹಾರಗಳು ವಿದ್ಯಾರ್ಥಿ ಗ್ರಾಹಕರನ್ನು ಆಕರ್ಷಿಸಿದವು ಈ ಮೂಲಕ ವಿದ್ಯಾರ್ಥಿಗಳು ಆಹಾರ ತಯಾರು ಮಾಡುವುದು ಅವನ್ನು ಪ್ರದರ್ಶನ  ಮಾಡುವುದು ಹಾಗೂ ವ್ಯವಹಾರ ಜ್ಞಾನವನ್ನು ಅರಿತು ಬಂಡವಾಳದ ಹೂಡಿಕೆ ಲಾಭ ನಷ್ಟಗಳನ್ನು ಸರಿದೂಗಿಸಿ ಸಂತಸ ಪಟ್ಟರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಯರ್ರಿಸ್ವಾಮಿ  ಸಿಎಂ ತಿಪ್ಪೇಸ್ವಾಮಿ, ರಣಜಿತ್ ಕುಮಾರ್, ಅಶ್ವಿನಿ ದೇಸಾಯಿ, ಸಂತೋಷ್ ಪಿ.ಕೆ, ತಿಮ್ಮಣ್ಣ ಮಧು, ಬಸವರಾಜ್, ಸಿ ಎ  ಮಹಮ್ಮದ್ ವಲೀ ಉಲ್ಲಾ ಸಂತೋಷ್ ಕುಮಾರ್, ಪ್ರೇಮ,ಮಾರತಿ, ಇತರರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading