ಹಿರಿಯೂರು :
ತಾಲ್ಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಗಳಿಕಟ್ಟೆ ಗ್ರಾಮದಲ್ಲಿ ನೆಲಸಿರುವ ಶ್ರೀ ಭೂತೇಶ್ವರ ಸ್ವಾಮಿಯ ದೇವಾಲಯದ ಗೋಪುರದ ಕಳಸ ಪ್ರತಿಷ್ಠಾಪನಾ ಸಮಾರಂಭವು ದಿನಾಂಕ .28.04.2025 ರ ಸೋಮವಾರದಂದು ಬೆಳಗ್ಗೆ 9-00 ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ ನಡೆಯಲಿದೆ ಎಂಬುದಾಗಿ ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಆರಂಭದಲ್ಲಿ ಶ್ರೀ ದಶರಥರಾಮೇಶ್ವರ ವಜ್ರದಲ್ಲಿ ಗಂಗಾ ಪೂಜೆ ನಂತರ ಯಲ್ಲದಕೆರೆ 101 ಲಿಂಗೇಶ್ವರ ದೇವಸ್ಥಾನದಿಂದ ಚಿಗಳಿಕಟ್ಟೆವರೆಗೂ 108 ಸುಮಂಗಲಿಯರಿಂದ ಪೂರ್ಣಕುಂಭ ಸ್ವಾಗತದ 5 ಕಿ.ಮೀ ಮೆರವಣಿಗೆ ಹಾಗೂ ಜನಪದ ಕಲಾ ತಂಡಗಳಿಂದ ಮೆರವಣಿಗೆ ಉತ್ಸವ ನಡೆಯಲಿದ್ದು, ಹಾಗೂ 29ನೇ ಗುರುವಾರದಂದು ಸಕಲ ದೇವರುಗಳ ಆಗಮನವಾಗಲಿದೆ,
ಈ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಹೋಮ ಹವನ ಮತ್ತು ವಿಶೇಷ ಪೂಜಾ ಕಾರ್ಯಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ಶ್ರೀಜೋಡಿ ರಂಗನಾಥ ಸ್ವಾಮಿ. ಅಮ್ಮನಹಟ್ಟಿ, ಶ್ರೀಆಂಜನೇಯ ಸ್ವಾಮಿ, ಹೊಸಹಳ್ಳಿ, ಶ್ರೀ ಕಣಿವೆ ಮಾರಮ್ಮ ದೇವಿ, ಶ್ರೀ ಕಾಳಮ್ಮ ದೇವಿ, ಶ್ರೀ ಕಣಿವೆ ಮಾರಕ್ಕ ಚಿಗಳಿಕಟ್ಟೆ ದೇವರುಗಳ ಸಮಾಗಮ ನಡೆಯಲಿದೆ ಎಂದಿದ್ದಾರಲ್ಲದೆ,
ದಿನಾಂಕ 30 -04 -2025 ನೇ ಬುಧವಾರ ಬೆಳಗ್ಗೆ 6:30 ರಿಂದ ವಿವಿಧ ರೀತಿಯ ಹೋಮ ಹವನ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಿದ್ದು, ಕಳಸ ಪ್ರತಿಷ್ಠಾಪನೆ ಮಾಡಲಾಗುವುದು ಎಂಬುದಾಗಿ ಚಿಗಳಿ ಕಟ್ಟೆ ಶ್ರೀ ಭೂತೇಶ್ವರ ಸ್ವಾಮಿದೇವಸ್ಥಾನದ ಆಡಳಿತ ಮಂಡಳಿಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಕೊರಟಗೆರೆ ಕುಂಚಿಟಿಗ ಮಠದ ಶ್ರೀಹನುಮಂತನಾಥ ಸ್ವಾಮೀಜಿ ಹಾಗೂ ಪಟ್ಟನಾಯಕನ ಹಳ್ಳಿಯ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಹಾಗೂ ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀಶಾಂತವೀರ ಸ್ವಾಮೀಜಿಗಳು ವಹಿಸಲಿದ್ದಾರೆ.
ವಿಶೇಷ ಸೂಚನೆ :ದಿನಾಂಕ 27.04.2025 ಭಾನುವಾರದಿಂದ 01.05.2025 ಗುರುವಾರ ವರೆಗೂ ಐದು ದಿನಗಳ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತಾಧಿಗಳು ಈ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ಸಿಗೊಳಿಸುವ ಮೂಲಕ ಶ್ರೀ ಭೂತೇಶ್ವರಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಭೂತೇಶ್ವರಸ್ವಾಮಿಯ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಚಿಗಳಿಕಟ್ಟೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.




About The Author
Discover more from JANADHWANI NEWS
Subscribe to get the latest posts sent to your email.