March 16, 2026
img-20250421-wa01732704587083838435294.jpg

ಚಿತ್ರದುರ್ಗ ಏ.26.

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದು, ಜೈಲು ಸೇರಿದ್ದ ಪುರಸಭೆ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಮೃತರು. ಏ.20ರಂದು ಲಂಚ ಪಡೆಯುತ್ತಿದಾಗ ಲೋಕಾಯುಕ್ತ ಬಲೆಗೆ ಬಿದ್ದು, ಜೈಲು ಸೇರಿದ್ದರುಜೈಲಿನಲ್ಲಿ ತೀವ್ರ ಎದೆನೋವು ಕಾಣಿಸಿಕೊಂದ ಹಿನ್ನೆಲೆಯಲ್ಲಿ ತಿಮ್ಮರಾಜು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಇ-ಖಾತೆ ಮಡಿಕೊಡಲು 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ತಿಮ್ಮರಾಜು, ಪುರಸಭೆ ಸದಸ್ಯ ಎನ್.ಶಾಂತಪ್ಪ ಬಳಿ 25 ಸಾವಿರ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಿದ್ದರು.
ತಿಮ್ಮರಾಜು ಜೈಲು ಸೇರಿದ ನೋವಿನಿಂದ ಅವರು ಅಜ್ಜಿ ಮೃತಪಟ್ಟ ಬೆನ್ನಲ್ಲೇ ಶನಿವಾರ ಹೃದಯಾಘಾತದಿಂದ ತಿಮ್ಮರಾಜು ಸಾವನ್ನಪ್ಪಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading