ನಾಯಕನಹಟ್ಟಿ:-ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮದಲ್ಲಿ ಮಾರ್ಚ್ 28ರಂದು ಸಂಪೂರ್ಣ ರಾಮಾಯಣ ಅರ್ಥಾತ್ ರಾವಣನ ವಧೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ.
ನಾಯಕನಹಟ್ಟಿ ಪಟ್ಟಣದಲ್ಲಿ ಗುರುವಾರದಂದು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ನಾಟಕವನ್ನು ಸತತವಾಗಿ ಒಂದುವರೆ ವರ್ಷಗಳ ಕಾಲ ನಾನೇ ರಚನೆ ಮಾಡಿದ್ದು, ಈಗಿನ ಕಾಲಘಟ್ಟದಲ್ಲಿ ರಾಮನ ಅತ್ಯದ್ಭುತ ಸಾಮಾಜಿಕ ಸಂದೇಶ ಸಾರುವ ನಿಟ್ಟಿನಲ್ಲಿ ಈ ನಾಟಕವನ್ನು ಅನಾವರಣಗೊಳಿಸಲಾಗುವುದು, ಗಾಂಧೀಜಿಯವರ ರಾಮ ರಾಜ್ಯದ ಕಲ್ಪನೆಯ ನಂಟು ಈ ನಾಟಕಕ್ಕೆ ಬೆಸೆದುಕೊಂಡಿದೆ, ಪ್ರಸ್ತುತ ಸಮಾಜದಲ್ಲಿ ಸ್ತ್ರೀಯರಿಗೆ ಗೌರವ ಮತ್ತು ಸಮಾಜದಲ್ಲಿ ಯಾವುದೇ ಅರಾಜುಕತೆ, ಅಪರಾಧಗಳು ನಡೆಯದೇ ಇರಲಿ , ರಾಮರಾಜ್ಯ ಮತ್ತೊಮ್ಮೆ ಸ್ಥಾಪನೆಯಾಗಲಿ ಎನ್ನುವ ಉದ್ದೇಶದಿಂದ ಈ ನಾಟಕವನ್ನು ಅನಾವರಣ ಮಾಡಲಾಗುತ್ತಿದೆ, ಈ ನಾಟಕ ನೋಡಲು ದಾವಣಗೆರೆ, ಚಿತ್ರದುರ್ಗ,ವಿಜಯನಗರ, ಬಳ್ಳಾರಿ ಸೇರಿದಂತೆ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಲಿದ್ದಾರೆ.ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಕಲಾವಿದೆಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬೂದಿ ಪಾಪಯ್ಯ ಬೊಂಬಾಯಿ ತಿಪ್ಪಯ್ಯ ಡ್ರೈವರ್ ಬೋರಯ್ಯ ಟೀ ಚನ್ನಬಸಪ್ಪ ರಾಜಣ್ಣ ಕೃಷ್ಣಮೂರ್ತಿ ಆರ್ ಓ ಬೋರಯ್ಯ ತಿಪ್ಪಣ್ಣ ದುರ್ಗದ ಪಾಲಯ್ಯ ಜಿ ತಿಪ್ಪೇಸ್ವಾಮಿ ರಾಜಣ್ಣ ಬುಡ್ಡಯ್ಯ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.