ಚಳ್ಳಕೆರೆ: ನಗರದ ನಗರಸಭೆಗೆ ನೂತನ ಅಧ್ಯಕ್ಷರಾಗಿ 24ನೇ ವಾರ್ಡಿನ ಸದಸ್ಯೆ ಮಂಜುಳ ಪ್ರಸನ್ನಕುಮಾರ್ ಅವಿರೋಧವಾಗಿ ಆಯ್ಕೆಯಾದರು.








ಈ ಹಿಂದೆ 31ನೇ ವಾರ್ಡಿನ ಜೈತುನ್ ಬೀ ಅಧ್ಯಕ್ಷರಾಗಿದ್ದರು ಪಕ್ಷದ ಒಪ್ಪಂದದಂತೆ ರಾಜೀನಾಮೆ ನೀಡಿದ್ದರಿಂದ ತರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಪಡಿಸಲಾಗಿತ್ತು ಚುನಾವಣೆ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಉಪ ವಿಭಾಗಾಧಿಕಾರಿಯಾದ ಮೊಹಮ್ಮದ್ ಜಿಲಾನ್ ರವರಿಗೆ ಮಂಜುಳಾ ಪ್ರಸನ್ನ ಕುಮಾರ್ ನಾಮಪತ್ರ ಸಲ್ಲಿಸಿದ್ದರು ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಮಂಜುಳಾ ಪ್ರಸನ್ನ ಕುಮಾರ್ ಆಯ್ಕೆಯನ್ನು ಘೋಷಣೆ ಮಾಡಿದರು.






ಈ ವೇಳೆ ಶಾಸಕ ಟಿ ರಘುಮೂರ್ತಿ ಮಂಜುಳಾ ಪ್ರಸನ್ನ ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ಪಕ್ಷದ ಸದಸ್ಯರ ಸಹಕಾರದಿಂದಾಗಿ ಮಂಜುಳ ಪ್ರಸನ್ನ ಕುಮಾರ್ ರವರು ಅಧ್ಯಕ್ಷಣೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ನಗರಸಭೆಗೆ ಉತ್ತಮ ಹೆಸರು ತರುವಂತಾಗಲಿ ಎಂದು ಆಶಿಸಿದರು.
ನೂತನ ಅಧ್ಯಕ್ಷೆ ಮಂಜುಳಾ ಮಾತನಾಡಿ ನಗರಸಭೆಯ ಎಲ್ಲಾ ಸದಸ್ಯರು ನನ್ನನ್ನು ಅಧ್ಯಕ್ಷೆಯನ್ನಾಗಿ ಸರ್ವಾನು ಮತದಿಂದ ಆಯ್ಕೆ ಮಾಡಿದ್ದಾರೆ ಅವರ ಆಶಯಗಳಿಗೆ ತಕ್ಕಂತೆ ಕೆಲಸ ನಿರ್ವಹಿಸಲು ಸಿದ್ಧವಿದ್ದು ನಗರದ 31 ವಾರ್ಡ್ಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಲಿದ್ದು ಶಾಸಕರ ಮಾರ್ಗದರ್ಶನದಲ್ಲಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಮತ್ತೊಮ್ಮೆ ಬಿ ಸಿ ಎಂ (ಎ) ಗೆ ಒಲಿದ ಅಧ್ಯಕ್ಷ ಸ್ಥಾನ: ನಗರಸಭೆಗೆ ಮೀಸಲಾತಿಯ ಪ್ರಕಾರ ಬಿಸಿಎಂ (ಬಿ) ಮಹಿಳೆಗೆ ಅಧ್ಯಕ್ಷ ಸ್ಥಾನದ ಅವಕಾಶವಿದ್ದು ಸದರಿ ಚುನಾಯಿತ ಸದಸ್ಯರಲ್ಲಿ ಮಹಿಳಾ ಸದಸ್ಯರು ಯಾರು ಇಲ್ಲದ ಕಾರಣ ಮತ್ತೊಮ್ಮೆ ಬಿ ಸಿ ಎಂ (ಎ) ಮಹಿಳೆಗೆ ಅಧ್ಯಕ್ಷ ಸ್ಥಾನ ಒಲಿದು ಬಂದಂತಾಗಿದೆ.
ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುಳ ಪ್ರಸನ್ನ ಕುಮಾರ್ ರವರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಮೆರವಣಿಗೆ ಮಾಡಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮ ಆಚರಿಸಿದರು.


ಈ ಸಂದರ್ಭದಲ್ಲಿ ತಹಸೀಲ್ದಾರ್ ರೆಹಾನ್ ಪಾಷ ಪೌರಾಯುಕ್ತ ಜಗರೆಡ್ಡಿ ಸೇರಿದಂತೆ ನಗರಸಭೆಯ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.