March 17, 2026
IMG-20250321-WA0150.jpg

.ವರದಿ ಶಿವಮೂರ್ತಿ ನಾಯಕನಹಟ್ಟಿ

ನಾಯಕನಹಟ್ಟಿ : ಹೋಬಳಿಯ ಕುದಾಪುರ ಲಂಬಾಣಿಹಟ್ಟಿ ಇಂದ ಚಳ್ಳಕೆರೆ–ನಾಯಕನಹಟ್ಟಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಹಾಗೂ ಅಕ್ರಮ ನಡೆಸಲಾಗಿದೆ ಎಂದು ಬಿಜೆಪಿ ಮುಖಂಡ ಪಟೇಲ್ ಕೆ ಬಿ ಕೃಷ್ಣಗೌಡ ಗಂಭೀರ ಆರೋಪ ಮಾಡಿದರು.

ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮತನಾಡಿದ ಅವರು 2023-24ನೇ ಸಾಲಿನ 3054 ಟಾಸ್ಕ್ ಫೋರ್ಸ್ ರಡಿಯಲ್ಲಿ ಅನುಮೋದನೆಯಾದ ಚಳ್ಳಕೆರೆ ತಾಲ್ಲೂಕು, ನಾಯಕನಹಟ್ಟಿ ಹೋಬಳಿಯ ಕುದಾಪುರ ಲಂಬಾಣಿಹಟ್ಟಿಯಿಂದ ಚಳ್ಳಕೆರೆ ನಾಯಕನಹಟ್ಟಿ ಮುಖ್ಯ ರಸ್ತೆ ಅವರಿಗೆ ರಸ್ತೆ ನಿರ್ವಹಣೆ (ಸಿ ಡಿ) ಕಾಮಗಾರಿಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿರುತ್ತದೆ.

ಕಾಮಗಾರಿ ಪೂರ್ಣಗೊಳಿಸದೇ ದಿನಾಂಕ 21.03.2025 ರಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರು ಚಿತ್ರದುರ್ಗ ಇವರು ಬಿಲ್ ಪಾವತಿಸಿರುತ್ತಾರೆ. ಪಂಚಾಯತ್ ರಾಜ್ ಇಲಾಖೆ ಕಾರ್ಯ ಅಭಿಯಂತರರು ಕಳಪೆ ಕಾಮಗಾರಿ ನಿರ್ವಹಿಸಲು ಕುಮ್ಮಕ್ಕು ನೀಡಿರುತ್ತಾರೆ. ಈ ಮೇಲ್ಕಂಡ ಪ್ರಸ್ತುತ ಸಾಲಿನ 3054 ಟಾಸ್ಕ್ ಪೋರ್ಸ್ ರಡಿ ಅನುಮೋದನೆಯಾದ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ ಕಂಡು ಬಂದಿದ್ದು, ಪಂಚಾಯತ್ ರಾಜ್ ಇಂಜಿನಿಯರಿಂಗ್, ಚಳ್ಳಕೆರೆ ಉಪಯುವಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಈ ಕಳಪೆ ಕಾಮಗಾರಿ ಕುರಿತಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯಪಾಲಕ ಅಭಿಯಂತರರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಕರೆಗೆ ಸ್ಪಂದಿಸಿರುವುದಿಲ್ಲ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading