ನಾಯಕನಹಟ್ಟಿ-: ಪ್ರಜಾಪ್ರಭುತ್ವದ ಪವಿತ್ರ ಗ್ರಂಥ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು ಎಂದು ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಜಿ ಪಾಂಡುರಂಗಪ್ಪ ಹೇಳಿದರು.
ಸೋಮವಾರ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ಭಾರತ ದೇಶದಲ್ಲಿ ಹಲವಾರು ಧರ್ಮ ಜಾತಿ, ಮತ ಪಂಥಗಳಿದ್ದರೂ ಎಲ್ಲಾ ಧರ್ಮಗಳ ಗ್ರಂಥಗಳು ಬೇರೆಯಾಗಿದ್ದರು ಭಾರತೀಯರೆಲ್ಲರಿಗೂ ಒಂದೇ ಧರ್ಮ ಗ್ರಂಥ ಅದುವೇ ನಮ್ಮ ಸಂವಿಧಾನ ಸಹಬಾಳ್ವೆ ನಡೆಸುವುದೇ ನಮ್ಮ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿಎಎಸ್ಐ ದಾದಾಪೀರ್, ಆರ್ ಟಿ ತಿಪ್ಪೇಸ್ವಾಮಿ, ಧನಂಜಯ, ಪೊಲೀಸ್ ಸಿಬ್ಬಂದಿಗಳಾದ ಭಾಷಾ, ರಾಘವೇಂದ್ರ, ಅಣ್ಣಪ್ಪ ನಾಯ್ಕ, ಕುಮಾರ್, ಶ್ರೀಹರಿ, ಹಾಲೇಶ್, ರಾಜು, ಸುರೇಶ್, ದೇವರಾಜ್ ಕೋಟೆ, ಲೋಹಿತ್ ರಾಮಾಂಜನಿ, ಶಿವರಾಜ್, ವೀರೇಶ್, ಹನುಮಂತು, ಹಾಗೂ ಮಹಿಳಾ ಪೊಲೀಸ್ ಪೇದೆಗಳಾದ ಲಕ್ಷ್ಮಿ ದೇವಿ, ಸುನಿತಾ, ಚೈತ್ರ, ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.