January 29, 2026
IMG-20260126-WA0205.jpg

ನಾಯಕನಹಟ್ಟಿ-.ಜ.26: ನಾವೆಲ್ಲರೂ ಸ್ವತಂತ್ರರಾಗಿ ಜೀವಿಸಲು, ಶಿಕ್ಷಣ ಪಡೆಯಲು ಅವಕಾಶ ನೀಡಿರುವ ಇಂತಹ ಸಂವಿಧಾನವನ್ನು ದೇಶದಲ್ಲಿ ಜಾರಿಗೆ ತರಲು ಶ್ರಮಿಸಿದ ಮಹಾನ್ ವ್ಯಕ್ತಿಗಳಿಗೆ ನಾವೆಲ್ಲರೂ ತಲೆ ಭಾಗಿ ನಮಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ನಲಗೇತನಹಟ್ಟಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್. ಮುತ್ತಯ್ಯ
ತಿಳಿಸಿದರು.ಸೋಮುವಾರ ನಲಗೇತನಹಟ್ಟಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮ ಪಂಚಾಯಿತಿ ಮತ್ತು ಸರ್ಕಾರಿ ಪ್ರೌಢಶಾಲಾ ವತಿಯಿಂದ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ.
ಗಣರಾಜ್ಯೋತ್ಸವ ದಿನಚರಣೆಯ ಕುರಿತು ಮಾತನಾಡಿದರು, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ಇವು ಸ್ವಾತಂತ್ರ್ಯ ಭಾರತ ಸಂವಿಧಾನದಲ್ಲಿರುವ ” ಐದು ಪ್ರಮುಖ ಮೌಲ್ಯಗಳಾಗಿವೆ.ಆಗಸ್ಟ್ 15,1947 ರಲ್ಲಿ ಬ್ರಿಟಿಷರಿಂದ ತಾತ್ವಿಕವಾಗಿ ಸ್ವಾತಂತ್ರ್ಯವನ್ನು ಪಡೆದುಕೊಂಡ ದಿನವಾದರೆ, ಜನವರಿ 26,1950 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನವಾಗಿದೆ. ರಾಜ ಪ್ರಭುತ್ವವನ್ನು
ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ತಿತ್ವವನ್ನು ಸ್ಥಾಪಿಸಿದ ದಿನವಾಗಿದೆ.ಈ ಕಾರಣಕ್ಕಾಗಿ ಗಣರಾಜ್ಯೋತ್ಸವ ಭರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ ಭಾರತ ತನ್ನದೇ ಆದ ಸಂವಿಧಾನವನ್ನು ಜಾರಿಗೆ ತರುತ್ತಿದ್ದಂತಯೇ ಪ್ರಜಾಪ್ರಭುತ್ವ ಗಣರಾಜ್ಯವಾಗಿ ಬದಲಾಯಿತು. ಹಸ್ತಾಕ್ಷರದಲ್ಲಿ ರಚನೆ ಮಾಡಲಾದ ವಿಶ್ವದ ಮೊದಲ ಸಂವಿಧಾನ ನಮ್ಮ ದೇಶದ್ದಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಂವಿಧಾನವನ್ನು ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲಾಗುತ್ತದೆ ಅದರಿಂದ ಪ್ರತಿಯೊಬ್ಬರೂ ಗ್ರಾಮದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.ಇನ್ನೂ ಇದೆ ವೇಳೆಯಲ್ಲಿ ಸರ್ಕಾರಿ ಪ್ರೌಢಶಾಲಾ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತುಈ ವೇಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಈಗಲೂ ಬೋರಯ್ಯ, ಸದಸ್ಯರಾದ ಪಿ.ಎಂ. ಮುತ್ತಯ್ಯ, ಗೌಡ್ರು ಬೋರಯ್ಯ, ಪಿಡಿಒ ರಾಜಣ್ಣ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ. ವಿಶ್ವನಾಥ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆರ್ ಮಂಜುನಾಥ್,
ಗ್ರಾಮದ ಮುಖಂಡರಾದ ಎಸ್ ಜಿ ಸಣ್ಣ ಬೋರಯ್ಯ, ನಿಂಗರಾಜ್, ಎಂ ಬಿ ಸಣ್ಣ ಬೋರಯ್ಯ, ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾದ ಎನ್ ತಿಪ್ಪೇಸ್ವಾಮಿ, ಆರ್ ಟಿ ಸತೀಶ್ ಬಾಬು, ಆರ್ ಅಬ್ದುಲ್ ಮುಜೀಬ್, ಪ್ರಥಮ ದರ್ಜೆ ಸಹಾಯಕ ಎ.ಎನ್. ಹರೀಶ್, ಶಿಕ್ಷಕಿರಾದ ಸಂಜೀವಿನಿ,
ಜಯಚಿತ್ರ, ಅತಿಥಿ ಶಿಕ್ಷಕಿ ಅನಿತಾ, ಡಿ ಗ್ರೂಪ್ ನೌಕರ ನಿಂಗರಾಜ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹನುಮಂತಪ್ಪ, ಶಿಕ್ಷಕಿರಾದ ಛಾಯ, ವಿಜಯಲಕ್ಷ್ಮಿ, ಶೈಲಜಾ, ಅತಿಥಿ ಶಿಕ್ಷಕಿ ಕೆ.ಎಂ. ರುದ್ರಮ್ಮ, ಸಮಸ್ತ ನಲಗೇತನಹಟ್ಟಿ
ಗ್ರಾಮದಸ್ಥರು ಹಾಗೂ ಅಂಗನವಾಡಿ ಶಿಕ್ಷಕಿಯರಾದ ಈ.ಎಸ್. ರಮ್ಯಾ, ವಿಮಲಾಕ್ಷಿ, ಮತ್ತು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading