January 30, 2026
IMG-20250126-WA0290.jpg

ನಾಯಕನಹಟ್ಟಿ :
ಸಮೀಪ ಓಬಯ್ಯನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು, ಧ್ವಜರೋಹಣವನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎಮ್ ಪರ್ವತಯ್ಯ ನೆರೆವರಿಸಿದರು ನಂತರ ಅವರು ಮಾತನಾಡಿ
ಈ ದಿನ ಭಾರತದ ಸಂವಿಧಾನವು ಅಸ್ತಿತ್ವಕ್ಕೆ ಬಂದಿತು, 1935 ರ ಭಾರತ ಸರ್ಕಾರದ ಕಾಯಿದೆಯನ್ನು ಬದಲಿಸಿ ಭಾರತವನ್ನು ಗಣರಾಜ್ಯ ರಾಷ್ಟ್ರವನ್ನಾಗಿ ಮಾಡಿತು. ಆದ್ದರಿಂದ ಪ್ರತಿ ವರ್ಷ ಈ ದಿನದ ನೆನಪಿಗಾಗಿ ಭಾರತದಾದ್ಯಂತ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ ಎಚ್ ಪರಮೇಶ್ವರಪ್ಪ ಮಾತನಾಡಿ ನಾವು ಭಾರತ ದೇಶದ ಒಬ್ಬ ಪ್ರಜೆಯಾಗಿರುವುದಕ್ಕೆ ಹೆಮ್ಮೆ ಪಡುಬೇಕು . ನಾವಿಂದು ಇಲ್ಲಿ ಸ್ವತಂತ್ರವಾಗಿ, ಶಿಸ್ತಿನಿಂದ ಕೂರಲು ಸಂವಿಧಾನ ಕಾರಣ. ನಾವು ಸಮಾನತೆಯಿಂದ ಶಿಕ್ಷಣ ಕಲಿಯುತ್ತಿರುವುದೇ ಸಂವಿಧಾನ ಜಾರಿಗೆ ಬಂದದ್ದರಿಂದ. ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದಮೇಲೆಯೇ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವತಂತ್ರ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುವುದು. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಂತೆಯೇ, ನಾವುಗಳು ಈ ದೇಶದ ಪ್ರಜೆಗಳಾದ ಮೇಲೆ ನಿರ್ವಹಿಸಬೇಕಾದ ಮೂಲಭೂತ ಕರ್ತವ್ಯಗಳು ಸಹ ಇವೆ. ದೇಶದ ಸಂಪನ್ಮೂಲಗಳನ್ನು ಕಾಪಾಡುವುದು, ರಾಷ್ಟ್ರಗೀತೆ, ರಾಷ್ಟ್ರಧ್ವಜವನ್ನು ಗೌರವಿಸುವುದು, ಸರ್ಕಾರದ ನಿಯಮಗಳು, ಸಂವಿಧಾನದ ಆದರ್ಶಗಳನ್ನು ಪಾಲಿಸಬೇಕು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಿ ಸರ್ಕಾರ ಉಚಿತವಾಗಿ ಶಿಕ್ಷಣ ನೀಡುವುದರ ಮೂಲಕ ಉತ್ತಮವಾದ ಗುಣಮಟ್ಟದ ವಿದ್ಯಾಭ್ಯಾಸ ಮಾಡುತ್ತದೆ ದಯಮಾಡಿ ಖಾಸಗಿ ಶಾಲೆಗಳಗೆ ಮಕ್ಕಳನ್ನು ದಾಖಲೆ ಮಾಡದೆ ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತವು ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ದಿನವನ್ನು ಅದ್ದೂರಿಯಾಗಿ ಆಚರಿಸುತ್ತದೆ. ಈ ವರ್ಷ ಭಾರತವು 76ನೇ ವರ್ಷದ ಗಣರಾಜ್ಯೋತ್ಸವನ್ನು ಭಾರತೀಯರು ನಾವು ಆಗಸ್ಟ್ 15 ಬ್ರಿಟಿಷರಿಂದ ತಾತ್ವಿಕವಾಗಿ ಸ್ವಾತಂತ್ರ್ಯ ಪಡೆದುಕೊಂಡ ದಿನವಾದರೆ, 1950 ಜನವರಿ 26 ರಂದು ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಲಾಗಿದ್ದು, ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವವು ಅಸ್ಥಿತ್ವಕ್ಕೆ ಬಂದ ದಿನವಾಗಿದೆ. ಹೀಗಾಗಿ ಈ ದಿನವು ಸ್ವಾತಂತ್ರ್ಯ ದಿನದಷ್ಟೇ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ಓ ಸೋಮಶೇಖರ ಹೇಳಿದರು.

ಡಾ.ಬಿ.ಆರ್.‌ ಅಂಬೇಡ್ಕರ್‌ ನೇತೃತ್ವದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವನ್ನು ಒಂದು ವರ್ಷದ ಬಳಿಕ ಅಂಗೀಕರಿಸಲಾಯಿತು. ಹೀಗಾಗಿ 26 ಜನವರಿ 1950 ರಂದು ಸಂವಿಧಾನ ಜಾರಿಗೆ ಬಂದಿತು. ಅಂದಿನ ಬಿ ಆರ್ ಅಂಬೇಡ್ಕರ್ ದಲಿತರ ಹಿಂದುಳಿದ ವರ್ಗದ ಎಲ್ಲಾರಿಗೂ ಸಹಕಾರ ಸಹಬಾಳ್ವೆ ಸಮಾನತೆ ಇರಬೇಕು ಎಂದು ಸಂದೇಶ ಸಾರಿದರು ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಉತ್ತಮ ವಿದ್ಯಾಭ್ಯಾಸ ಮಾಡಿ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಎಲ್ ಐ ಸಿ ಓಬಣ್ಣ ಹೇಳಿದರು.

ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಅಧ್ಯಕ್ಷ ನಾಗರಾಜ ಮಾತನಾಡಿ ಈ ದಿನ ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಸ್ವತಂತ್ರ ಮತ್ತು ಪ್ರಜಾಪ್ರಭುತ್ವದ ದೇಶದಲ್ಲಿ ಬದುಕುವ ಹಕ್ಕನ್ನು ನೀಡಿದವರ ಅದಮ್ಯ ಚೇತನಕ್ಕೆ ಗೌರವವಾಗಿದೆ. ಪ್ರಗತಿಪರ ಮತ್ತು ಅಂತರ್ಗತ ಭಾರತವನ್ನು ರೂಪಿಸಿದ ನಮ್ಮ ಸಂವಿಧಾನದ ಶಿಲ್ಪಿಗಳನ್ನು ನೆನಪಿಸಿಕೊಳ್ಳುವ ಮತ್ತು ಗೌರವಿಸುವ ದಿನ, ಶಿಕ್ಷಕರಾಗಿ, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಹಿಷ್ಣುತೆ, ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ನಮ್ಮ ವಿದ್ಯಾರ್ಥಿಗಳಲ್ಲಿ ತುಂಬುವುದು ನಮ್ಮ ಕರ್ತವ್ಯ. ನಮ್ಮ ಪೂರ್ವಜರ ತ್ಯಾಗಗಳು ವ್ಯರ್ಥವಾಗದಂತೆ ನೋಡಿಕೊಳ್ಳಲು, ಈ ಮೌಲ್ಯಗಳನ್ನು ಪಾಲಿಸಲು ಮತ್ತು ರಕ್ಷಿಸಲು ನಾವು ಅವರಿಗೆ ಕಲಿಸಬೇಕಾಗಿದೆ.

ಆತ್ಮೀಯ ವಿದ್ಯಾರ್ಥಿಗಳೇ, ನಮ್ಮ ರಾಷ್ಟ್ರದ ಮಹಾನ್ ನಾಯಕರಿಂದ ಸ್ಫೂರ್ತಿ ಪಡೆಯುವಂತೆ ನಾನು ನಿಮ್ಮಲ್ಲಿ ಪ್ರತಿಯೊಬ್ಬರನ್ನು ಒತ್ತಾಯಿಸುತ್ತೇನೆ. ನೀವು ಬೆಳೆಯುತ್ತಿರುವಾಗ ಅವರ ಧೈರ್ಯ, ಬುದ್ಧಿವಂತಿಕೆ ಮತ್ತು ದೃಷ್ಟಿ ನಿಮಗೆ ಮಾರ್ಗದರ್ಶನ ಆಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಬಾರ ಮುಖ್ಯೋಪಾಧ್ಯಾಯ ಗಂಗಣ್ಣ, ಹಿರಿಯ ಶಿಕ್ಷಕ ಶಿವರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀ ಮಹದೇವಣ್ಣ, ಗೀತಾ ಕುಮಾರ್, ಸಹ ಶಿಕ್ಷಕಿಯರಾದ ಪ್ರಿಯ, ಮಂಜುಳ, ಶೋಭರಾಣಿ, ಯಕ್ಷಗಾನ ಸಾರಥಿ ಪಾಲಯ್ಯ, ಅಂಗನವಾಡಿ ಶಿಕ್ಷಕಿಯರಾದ ಭಾಗ್ಯಮ್ಮ, ಶಿವಮ್ಮ, ಅಥಿತಿ ಶಿಕ್ಷಕರಾದ ಶಿವಕುಮಾರ್, ಅನಂತ ಕುಮಾರ್ ಹಾಗೂ ಊರಿನ ಗ್ರಾಮಸ್ಥರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading