January 30, 2026
IMG-20250126-WA0152.jpg

 

ಚಳ್ಳಕೆರೆ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆ ಒದಗಿದಲು ಸಾರ್ವಜನಿಕ‌ಆಸ್ಪತ್ರೆಗೆ ಜಿಲ್ಲಾಸ್ಪತ್ರೆಯಂತೆ ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ಬಿ ಎಂ ಜಿ ಎಚ್ ಎಸ್ ಶಾಲಾ ಆವರಣದ ಬಯಲು ರಂಗ ಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನ

ಬ್ರಿಟಿಷರ ದಾಸ್ಯದಿಂದ ದೇಶ ಮುಕ್ತಿಗೊಂಡು ಸ್ವಾತಂತ್ರ್ಯ ಬಂದ ನಂತರ ದೇಶದ ಸುಭದ್ರ ಆಡಳಿತಕ್ಕೆ ಅಡಿಪಾಯ ಹಾಕಲು ಡಾ ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಎರಡು ವರ್ಷ 11 ತಿಂಗಳು 18 ದಿವಸಗಳ ಶ್ರಮದ ಫಲವಾಗಿ ಜನವರಿ 26ರ 1950 ರಂದು ಸಂವಿಧಾನವನ್ನು ಜಾರಿಗೆ ತರಲಾಯಿತು. ಇಂದಿಗೆ 76 ವರ್ಷ ಗತಿಸಿದೆ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ .

ದೇಶದಲ್ಲಿರುವ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಮತ್ತು ಪತ್ರಿಕಾ ರಂಗಗಳು ಸಂವಿಧಾನವನ್ನು ಉಳಿಸುವ ಕೆಲಸ ನಿರ್ವಹಿಸಬೇಕಿದೆ ಸಂವಿಧಾನದ ಆಶಯದಂತೆ ಬುದ್ಧ ಬಸವ ಅಂಬೇಡ್ಕರ್ ಸ್ವಾಮಿ ವಿವೇಕಾನಂದ ಮಹಾತ್ಮ ಗಾಂಧಿ ಮತ್ತು ದೇಶದ ವಿವಿಧ ಧರ್ಮ ಗ್ರಂಥಗಳು ಬೋಧಿಸಿರುವ ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ಅಂಶಗಳುಳ್ಳ ಸಂವಿಧಾನ ಗ್ರಂಥವು ಎಲ್ಲಾ ಭಾರತೀಯರಿಗೆ ಅಮೂಲ್ಯ ಗ್ರಂಥವಾಗಿದೆ ಸಂವಿಧಾನವನ್ನು ಯಾವುದೇ ತಾರತಮ್ಯವಿಲ್ಲದೆ ಜಾತ್ಯತೀತವಾಗಿ ಪಕ್ಷಾತೀತವಾಗಿ ಸಮಾನ ಅವಕಾಶಗಳನ್ನು ನೀಡಿದೆ ಸ್ವಾತಂತ್ರ್ಯ ಪೂರ್ವದಲ್ಲಿ ಭೂ ಮಾಲೀಕರಿಗೆ ತೆರಿಗೆ ಪಾವತಿದಾರರಿಗೆ ಮತ್ತು ಪದವಿದರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು 21 ವರ್ಷ ದಾಟಿದ ಎಲ್ಲಾ ವಯಸ್ಕರರಿಗೆ ಮತದಾನದಲ್ಲಿ ಭಾಗವಹಿಸುವ ಹಕ್ಕನ್ನು ಸಂವಿಧಾನವು ನೀಡಿದೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರವಾಗಲು ಸಂವಿಧಾನವು ನೆರವಾಗಿದೆ ಸಂವಿಧಾನದ ಉದ್ದೇಶವಾಗಿರುವ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಮತ್ತು ಸರ್ವಧರ್ಮ ಸಮನ್ವಯ ಕಾಪಾಡುವ ನಿಟ್ಟಿನಲ್ಲಿ ಇಂದು ಕಾರ್ಯನಿರ್ವಹಿಸಬೇಕಿದೆ ಜನಪ್ರತಿನಿಧಿಗಳಾಗುವರು ಸಂವಿಧಾನಕ್ಕೆ ಬದ್ಧವಾಗಿ ಕೆಲಸ ನಿರ್ವಹಿಸಬೇಕಿದೆ ಆಗ ಮಾತ್ರ ಸಂವಿಧಾನಕ್ಕೆ ಬೆಲೆ ಕೊಟ್ಟಂತಾಗುತ್ತದೆ ತಾಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಚಳ್ಳಕೆರೆ ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಈಗಾಗಲೇ ಮನವಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿದೆ ಇಂದಿನ ವಿದ್ಯಾರ್ಥಿಗಳು ಮುಂದಿನ ಭಾವಿ ಪ್ರಜೆಗಳಾಗಲಿದ್ದು ಅವರ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಭದ್ರ ಬುನಾದಿ ಹಾಕಿ ಸಂವಿಧಾನದ ಆಶಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸೋಣ ಎಂದು ಕರೆ ನೀಡಿದರು.

ತಹಸಿಲ್ದಾರ್ ರೆಹನ್ ಪಾಷಾ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ತಮ್ಮ ಜೀವನದ ಅನುಭವದಿಂದ ಸಂವಿಧಾನ ರಚಿಸಲು ಮೂಲ ಕಾರಣವಾಯಿತು ಅಂಬೇಡ್ಕರ್ ಅವರ ಜೀವನವನ್ನು ಮೊದಲು ಅರ್ಥ ಮಾಡಿಕೊಂಡು ತದನಂತರ ಸಂವಿಧಾನ ಓದಿದಾಗ ಮಾತ್ರ ಅದರಲ್ಲಿನ ಅರ್ಥಗರ್ಭಿತ ಆಶಯಗಳು ಮನಮುಟ್ಟುತ್ತದೆ ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು 

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈತುನ್ ಬೀ ಉಪಾಧ್ಯಕ್ಷೆ ಸುಮಾ ಭರಮಯ್ಯ ಹಾಯ್ ಸುಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗದ್ದಿಗೆ ತಿಪ್ಪೇಸ್ವಾಮಿಜೆಟಿ ವೀರಭದ್ರ ಸ್ವಾಮಿ ಶಿಲ್ಪ ಕವಿತಾ ಸುಜಾತ ಗೋವಿಂದ ರಮೇಶ್ ಗೌಡ ಸಮಕ್ಕ ಎಂ ಜೆ ರಾಘವೇಂದ್ರ ವಿರೂಪಾಕ್ಷಿ ಕೆ ವೀರಭದ್ರಯ್ಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading