ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಜಾನಪದ ಶೈಲಿಯ ತಮಟೆ ಉರುಮೆ ನಂದಿಕೋಲು ಕಲಾತಂಡಗಳೊಂದಿಗೆ ಶ್ರೀ ಕೊಲ್ಲಾಪುರದಮ್ಮ ದೇವಿ ರಥೋತ್ಸವ ಜರುಗಿತು.



ಸಮೀಪದ ಮಲ್ಲೂರಹಳ್ಳಿ ಗ್ರಾಮದ ಆರಾಧ್ಯ ದೇವತೆ ಶ್ರೀ ಕೊಲ್ಲಾಪುರದಮ್ಮ ದೇವಿ ರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ 8:00ಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ ಹೂವಿನ ಹಾರಗಳಿಂದ ರಥವನ್ನು ಶೃಂಗಾರ ಮಾಡಲಾಯಿತು. 10. ಗಂಟೆಗೆ ಶ್ರೀ ಕೊಲ್ಲಾಪುರದಮ್ಮ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಸಕಲ ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಲಾಯಿತು ಇನ್ನು ಶ್ರೀ ಕೊಲ್ಲಾಪುರದಮ್ಮ ದೇವಿ ರಥೋತ್ಸವಕ್ಕೆ ಗ್ರಾಮದ ತಾತರೆಡ್ಡಿ ರಾಜೇಶ್ ರವರು ಮನೆಯಿಂದ ಬಲಿ ಅನ್ನ ತರಲಾಯಿತು ಕಾಸು ಮೀಸಲು ಮೊಸರು ತುಂಬಾ ಜಿನಿಗಿ ಹಾಲು ತಂದು ಶ್ರೀ ಕೊಲ್ಲಾಪುರದಮ್ಮ ದೇವಿ ರಥದ ಗಾಲಿಗಳಿಗೆ ಎಡೆ ಹಾಕಲಾಯಿತು.
ನಂತರ ಮಹಾಮಂಗಳಾರತಿ ನೆರವೇರಿಸಿ ಗ್ರಾಮಸ್ಥರು ರಥಕ್ಕೆ ಚಾಲನೆ ನೀಡಿದರು
ಇನ್ನೂ ರಥೋತ್ಸವಕ್ಕೂ ಮುನ್ನ ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆ ನಡೆಯಿತು. ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಹಾಲಿ ಸದಸ್ಯ ಕೆ. ರಾಜ ನಾಯ್ಕ 2 ಲಕ್ಷದ 60.ಸಾವಿರ ರೂ. ಗಳಿಗೆ
ಮುಕ್ತಿ ಬಾವುಟವನ್ನು
ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎಸ್ ಪಿ ಪಾಲಯ್ಯ ಮಾತನಾಡಿದರು ಶ್ರೀ ಕೊಲ್ಲಾಪುರದಮ್ಮ ದೇವಿ ಕಾರ್ತಿಕ ಮಾಸದ ರಥೋತ್ಸವ ಗ್ರಾಮದ ಎಲ್ಲಾ ಸಮುದಾಯದವರು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ ಆದ್ದರಿಂದ ಶ್ರೀ ಕೊಲ್ಲಾಪುರದಮ್ಮ ದೇವಿ ಆಶೀರ್ವಾದ ಗ್ರಾಮದ ಪ್ರತಿಯೊಬ್ಬರ ಮೇಲೆ ಇರಲಿ ಎಂದರು.
ಇದೇ ವೇಳೆ ಗ್ರಾಮದ ಮುಖಂಡ ವಿಜಯಕುಮಾರ್ ಮಾತನಾಡಿದರು.
ಮಲ್ಲೂರಹಳ್ಳಿ ಗ್ರಾಮದಲ್ಲಿ ಪ್ರತಿವರ್ಷದಂತೆ ಶ್ರೀ ಕೊಲ್ಲಾಪುರದಮ್ಮ ದೇವಿ ಜಾತ್ರಾ ಮಹೋತ್ಸವ ಕಾರ್ತಿಕ ಸಂದರ್ಭದಲ್ಲಿ ಸಂಪ್ರದಾಯದಂತೆ ಗ್ರಾಮದಲ್ಲಿ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದಿಂದ ಪಾದಗಟ್ಟೆ ಅವರಿಗೆ ರಥೋತ್ಸವ ನಡೆಯಲಿದೆ ಈ ಬಾರಿ ಉತ್ತಮ ಮಳೆ ಬೆಳೆ ಆದ ಕಾರಣ ಬಹಳ ಉತ್ತಮ ಸಂತೋಷ ಸಡಗರದಿಂದ ಹಬ್ಬವನ್ನು ಆಚರಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಮಲ್ಲೂರಹಳ್ಳಿ ಗ್ರಾಮದ ಗುರು-ಹಿರಿಯರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಮತ್ತು ಸಮಸ್ತ ಮಲ್ಲೂರಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.