ನಾಯಕನಹಟ್ಟಿ:: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಾಡಿನ ಮೂಲೆ ಮೂಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಿವೃತ್ತ ತಾಸಿಲ್ದಾರ್ ಎನ್ ರಘುಮೂರ್ತಿ ತಿಳಿಸಿದರು.



ಮಂಗಳವಾರ ಪಟ್ಟಣದ ಕಾಳಕಾದೇವಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಡಾ. ವೀರೇಂದ್ರ ಹೆಗಡೆಯವರ 78ನೇ ವರ್ಷದ ಜನ್ಮದಿನದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧ ಯೋಜನೆ ಗ್ರಾಮ ಸುಭಿಕ್ಷೆಗಾಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರುದ್ರಾಭಿಷೇಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಇಂದು ಧರ್ಮಕ್ಕೆ ವಿಶಿಷ್ಟವಾದ ಸ್ಥಾನಮಾನವಿದೆ ನಂಬಿಕೆ ಮತ್ತು ಭಕ್ತಿ ಎರಡು ಸಹ ಹಿಂದು ಧರ್ಮಕ್ಕೆ ಬೆರೆತುಹೋಗಿವೆ ಡಾಕ್ಟರ್ ವೀರೇಂದ್ರ ಹೆಗ್ಡೆ ರವರು ಭಾರತೀಯ ಸನಾತನ ಸಂಸ್ಕೃತಿ, ಬಡವರ ಕಲ್ಯಾಣಕೆ ಶ್ರಮಿಸಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿದರು. ಡಾ. ವೀರೇಂದ್ರ ಹೆಗ್ಡೆಯವರು ಪಟ್ಟಾಭಿಷೇಕ ಆದ ನಂತರ ಸುಮಾರು 50 ವರ್ಷದಿಂದ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಪೂಜ್ಯರು ಮಾಡುತ್ತಿದ್ದಾರೆ ಹಾರ್ದಿಕವಾಗಿ ಶೈಕ್ಷಣಿಕವಾಗಿ ಬಡವರನ್ನು ಸದೃಢರನ್ನಾಗಿಸಲು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಇಡೀ ರಾಜ್ಯದಾದ್ಯಂತ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಧರಪ್ಪ, ಜಿಲ್ಲಾ ಜನ ಜಾಗೃತಿ ಸದಸ್ಯರಾದ ಎಂ ವೈ ಟಿ ಸ್ವಾಮಿ ,ವಿ. ಧನುಜಯ, ಪಿ. ಶಿವಣ್ಣ, ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಪಿ.ಲೋಕೇಶ್ ಚಾರಿ, ಯೋಜನಾಧಿಕಾರಿ ಜಯಂತ್, ಮೇಲ್ವಿಚಾರಕಿ ಶಶಿಕಲಾ. ಸೇವಾ ಪ್ರತಿನಿಧಿಗಳು ಸಹಾಯ ಸಂಘದ ಸದಸ್ಯರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.