September 15, 2025
IMG-20241125-WA0171.jpg

ನಾಯಕನಹಟ್ಟಿ: ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿ ಆಂಗ್ಲ ಭಾಷೆಯ ಮಮ್ಮಿ ಎನ್ನುವ ಎರಡು ಅಕ್ಷರ ತುಟಿಯಂಚಿನಲ್ಲಿ ಮರೆಯಾಗುತ್ತದೆ. ಆದರೆ ಅಮ್ಮ ಎನ್ನುವ ಕನ್ನಡ ಭಾಷೆಯ ಭಾವನಾತ್ಮಕ ಪದ ಸ್ವರ ಮತ್ತು ವ್ಯಂಜನ ಮಿಶ್ರಿತವಾಗಿ ನಾಭಿಯಲ್ಲಿ ಹುಟ್ಟಿ ತುಟಿಯಲ್ಲಿ ಅಂತ್ಯವಾಗುತ್ತದೆ. ಇಂತಹ ಉತ್ಕೃಷ್ಟವಾದ ಭಾಷೆ ಪ್ರಪಂಚದಲ್ಲಿ ಎಲ್ಲೂ ಇಲ್ಲ, ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಆಯ ಕೆಲವು ಭಾಷೆಗಳು ಅಳಿದು ಹೋಗಿವೆ. ಇನ್ನು ಶತಾ ಶತಮಾನಗಳಿಸಿದರು ಕೂಡ ನಮ್ಮ ಕನ್ನಡ ಭಾಷೆ ಅನನ್ಯವಾಗಿ ಬೆಳೆಯುತ್ತಲೇ ಇರುತ್ತದೆ.

ಕನ್ನಡದ ಕವಿಗಳಾದ ಹುಹಿಲುಗೋಳು ನಾರಾಯಣರಾಯದಿಂದ ಹಿಡಿದು ಅನಂತಮೂರ್ತಿವರೆಗಿನ ಕವಿಗಳ ಕೊಡುಗೆ ಈ ನಾಡಿಗೆ ಸಾಕಷ್ಟಿದೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗ, ರಾಮಾಯಣ ಮತ್ತು ಮಹಾಭಾರತ ಮಹಾ ಕಾವ್ಯಗಳು ನೀಡಿದಂತ ಜೀವನಕ್ಕೆ ಅಮೃತವಾದ ಸಂದೇಶ ನೀಡುತ್ತವೆ. ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಗದುಗಿನ ನಾರಣಪ್ಪನವರ ಕುಮಾರವ್ಯಾಸ ಭಾರತ ಪಂಪ ರನ್ನ ರವರ ತ್ರಿಪದಿ ಮತ್ತು ಷಟ್ಪದಿಗಳನ್ನು ಓದುವುದೇ ಒಂದು ಸಂಭ್ರಮ. ಇಂತಹ ಕಾದಂಬರಿಗಳನ್ನು ಮತ್ತು ಚಿತ್ರದುರ್ಗದ ಸ್ವಾಭಿಮಾನ ಮತ್ತು ಪರಂಪರೆಗೆ ಹೆಸರಾದಂತಹ ಕದಂಬರಿಗಳನ್ನು ಬರೆದಂತ ತಾರಾಸು ಮತ್ತು ಕುವೆಂಪುರವರ ಗುರುಗಳಾದ ವೆಂಕಣ್ಣಯ್ಯ, ಬಿಳಿಗೆರೆ ಕೃಷ್ಣ ಶಾಸ್ತ್ರಿ ಇಂತಹ ಕವಿಗಳು ಈ ನೆಲದಲ್ಲಿ ಹುಟ್ಟಿದ್ದಾರೆ ಇಂಥ ಮಹನೀಯರ ಬರಹಗಳನ್ನು ಮತ್ತು ಕಾದಂಬರಿಗಳನ್ನು ನಾವು ಮನೆಯಲ್ಲಿ ಮಕ್ಕಳಿಗೆ ಓದಿಸಿದರೆ ಕನ್ನಡದ ಈ ನಮ್ಮ ಕವಿಗಳು ಮುಂದಿನ ಸಾವಿರಾರು ವರ್ಷ ಬದುಕುತ್ತಾರೆ ಎಂದು ಹೇಳಿದರು.

ಕರವೇ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರವಿಕುಮಾರ ನಾಯ್ಕ್ ಮಾತನಾಡಿ ನಾವುಗಳು ಹುಟ್ಟಿನಿಂದಲೇ ಕನ್ನಡ ತಾಯಿಯ ಮಕ್ಕಳು. ನಾಡು, ನುಡಿಗಾಗಿ ನಾವೆಲ್ಲರೂ ಸೇರಿ ಶ್ರಮಿಸಬೇಕು. ನಾವುಗಳೇ ಕನ್ನಡವನ್ನು ಮರೆತರೆ ಹೇಗೆ? ನಾವುಗಳು ಎಲ್ಲೇ ಹೋದರು ಕನ್ನಡದಲ್ಲಿ ಮಾತನಾಡೋಣ. ಕರ್ನಾಟಕ ಬಿಟ್ಟು ಬೇರೆ ದೇಶಗಳಲ್ಲಿ ಹೋದರು ಮೊದಲು ಕನ್ನಡದಲ್ಲಿ ಮಾತನಾಡಿ, ಅವರಿಗೆ ನಮ್ಮ ಭಾಷೆ ಬರದಿದ್ದಲ್ಲಿ ನಾವುಗಳು ಅವರಿಗೆ ನಮ್ಮ ಭಾಷೆ ಕಳಿಸೋಣ. ಕನ್ನಡವನ್ನು ಎತ್ತಿ ಹಿಡಿಯುವುದಕ್ಕೆ ಆಗ ತಾನೇ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆಂಗ್ಲ ಭಾಷೆಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಬೆಂಗಳೂರಿನಂತಹ ನಗರಗಳಲ್ಲಿ ಹೋದಂತಹ ಸಂದರ್ಭದಲ್ಲಿ ಕನ್ನಡವನ್ನು ಮಾತನಾಡುತ್ತಿವೆ ಎಂಬುದನ್ನು ಶೇಕಡ 90ರಷ್ಟು ಮರೆತಿದ್ದೇವೆ. ಹಾಗಾಗಿ ನಮ್ಮ ಸಂಘಟನೆಯ ಎಲ್ಲ ಪದಾಧಿಕಾರಿಗಳಿಗೆ ಹೇಳುವುದೇನೆಂದರೆ ಅಂಗಡಿಗಳಾಗು ಕಚೇರಿಗಳಲ್ಲಿ ಕನ್ನಡ ನಾಮ ಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ತಿಳಿಸಿ. ಅಳವಡಿಸದಿದ್ದಲ್ಲಿ ಮಸಿ ಬಳಿಯಿರಿ. ಸರ್ಕಾರವೇ 60ರಷ್ಟು ಕನ್ನಡ ನಾಮಫಲಕ ಕಡ್ಡಾಯ ಎಂಬ ನಿಯಮ ಜಾರಿಗೆ ತಂದಿದೆ. 69ನೇ ಕನ್ನಡ ರಾಜ್ಯೋತ್ಸವವನ್ನು ನಾಯಕನಹಟ್ಟಿ ಪಟ್ಟಣದಲ್ಲಿ ಆಚರಣೆ ಬಹಳ ವಿಜೃಂಭಣೆಯಿಂದ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯತಿ ಸದಸ್ಯ ಓಬಯ್ಯ ದಾಸ್, ಮಹಿಳಾಾ ಜಿಲ್ಲಾ ಘಟಕ ಅಧ್ಯಕ್ಷಷ ರೇಣುಕಾ ರಾಜಣ್ಣ, ಜಿಲ್ಲಾ ಕಾರ್ಯದರ್ಶಿ ಓಬಳೇಶ್, ಆಟೋ ಚಾಲಕ ಸಂಘದ ಅಧ್ಯಕ್ಷ ಓಬಳೇಶ್, ಪಟ್ಟಣ ಪಂಚಾಯತಿ ಸದಸ್ಯ ಸುನಿತಾ ಮುದಿಯಪ್ಪ, ಹೋಬಳಿ ಅಧ್ಯಕ್ಷ ಮುತ್ತಯ್ಯ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಹೋಬಳಿ ಉಪಾಧ್ಯಕ್ಷ ರಾಘವೇಂದ್ರ, ಹೋಳಿ ಸಂಘಟನೆ ಕಾರ್ಯದರ್ಶಿ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜು, ಗೌರವಾಧ್ಯಕ್ಷ ವಿಶ್ವನಾಥ್, ಯುವ ಘಟಕ ಅಧ್ಯಕ್ಷ ಮಧು, ನಗರ ಘಟಕ ಉಪಾಧ್ಯಕ್ಷ ಮಂಜುನಾಥ್, ಯುವ ಕಾರ್ಯದರ್ಶಿ ಪ್ರೇಮ್ ಕುಮಾರ್, ಗೌರವಾಧ್ಯಕ್ಷ ನವೀನ್, ವಿದ್ಯಾರ್ಥಿಗಳ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ಪ್ರಸನ್ನ ಕುಮಾರ್, ವಿದ್ಯಾರ್ಥಿ ಘಟಕ ಉಪಾಧ್ಯಕ್ಷ ಬೋರ್ ಸ್ವಾಮಿ, ಯುವ ಘಟಕ ಉಪಾಧ್ಯಕ್ಷ ಸಣ್ಣ ಮಲ್ಲಪ್ಪ, ಕಾರ್ಮಿಕ ಕಾರ್ಯದರ್ಶಿ ರಾಮಚಂದ್ರ, ಗ್ರಾಮ ಘಟಕ ಅಧ್ಯಕ್ಷ ಶಿವರಾಜ್, ನಗರ ಸಂಚಾಲಕ ಬೋರಯ್ಯ, ನಗರ ಘಟಕ ಕಾರ್ಯದರ್ಶಿ ಡಾ. ನಾಗರಾಜ್ ಮೀಸೆ , ಮಹಿಳಾ ಘಟಕ ಹೋಬಳಿ ಅಧ್ಯಕ್ಷೆ ಬಿ ತಿಪ್ಪಮ್ಮ ಚಿನ್ನಮಲ್ಲಯ್ಯ, ಮಹಿಳಾ ನಗರ ಘಟಕ ಅಧ್ಯಕ್ಷ ಚಂದ್ರಮ್ಮ, ಹೋಬಳಿ ಕಾರ್ಯದರ್ಶಿ ಮಾರಕ್ಕ, ನಗರ ಘಟಕ ಕಾರ್ಯದರ್ಶಿ ಅನಿತಮ್ಮ, ಹೋಬಳಿ ಉಪಾಧ್ಯಕ್ಷ ಅನುಸೂಯಮ್ಮ, ನಗರ ಘಟಕ ಉಪಾಧ್ಯಕ್ಷೆ ಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮಮತಾ, ಗೌರವಾಧ್ಯಕ್ಷ ಶಾಂತಮ್ಮ, ಯುವ ಅಧ್ಯಕ್ಷೆ ತಿಪ್ಪೀರಮ್ಮ, ಗ್ರಾಮ ಘಟಕ ಕಾರ್ಯದರ್ಶಿ ಮಾರಕ್ಕ, ಗ್ರಾಮ ಘಟಕ ಅಧ್ಯಕ್ಷೆ ಯಶೋದಮ್ಮ, ಕಾರ್ಮಿಕ ಘಟಕ ಅಧ್ಯಕ್ಷೆ ನಾಗರತ್ನಮ್ಮ, ಕಾರ್ಮಿಕ ಘಟಕ ಉಪಾಧ್ಯಕ್ಷೆ ಭಾಗ್ಯಮ್ಮ, ಕಾರ್ಮಿಕ ಕಾರ್ಯದರ್ಶಿ ಲಾಯರ್ ಭಾಗ್ಯ,ವಿದ್ಯಾರ್ಥಿ ಘಟಕ ಅಧ್ಯಕ್ಷೆ ಕವಿತಾ, ನಗರ ಸಂಚಾಲಕಿ ತಿಪ್ಪಮ್ಮ ಇನ್ನು ಮುಂತಾದವರು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading