September 15, 2025
IMG-20241125-WA0143.jpg

ನಾಯಕನಹಟ್ಟಿ:: ನ.25. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯವನ್ನು ಗ್ರಾಮದ ಪ್ರತಿಯೊಬ್ಬರು ಪಡೆದುಕೊಳ್ಳಿ ಎಂದು ಅಧ್ಯಕ್ಷ ಬಿ.ತಿಪ್ಪೇಸ್ವಾಮಿ ಹೇಳಿದರು.

ಅವರು ಸೋಮವಾರ ಹೋಬಳಿಯ ಎನ್ ಮಹದೇವಪುರ ಗ್ರಾ.ಪಂ. ವ್ಯಾಪ್ತಿಯ ಮನುಮೈಯ್ಯನಹಟ್ಟಿ, ಗ್ರಾಮದ ಬಯಲು ರಂಗ ಮಂದಿರದಲ್ಲಿ 2025 -26 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾಯೋಜನೆ ತಯಾರಿಸುವ ಗ್ರಾಮ ಸಭೆಯಲ್ಲಿ ಎನ್ ಮಹದೇವಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ ಮಾತನಾಡಿದರು.

ಸಮುದಾಯ ಕಾಮಗಾರಿಗೆ ಪಟ್ಟಿ ಮಾಡಿ ಸರ್ಕಾರದ ಅನುಮೋದನೆಗೆ ಕಳಿಸಲಾಗುವುದು. ಗ್ರಾಮದ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕುರಿ ಶೆಡ್ಡು, ದನದ ಶೆಡ್ಡು, ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಿಸುವಂತ ಸೌಲಭ್ಯಗಳು ಸರ್ಕಾರದಿಂದ ದೊರೆಯುತ್ತಿದೆ. ಕ್ರಿಯಾಯೋಜನೆಯಲ್ಲಿ ತಮ್ಮ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿ. ಅಗತ್ಯ ದಾಖಲೆಗಳನ್ನು ನೀಡಿದಲ್ಲಿ ಅನುಮೋದನೆಗೆ ಕಳಿಸಲಾಗುವುದು. ಅನುಮೋದನೆ ದೊರೆತನಂತರ ಬರುವ ಏಪ್ರಿಲ್ ನಿಂದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಇನ್ನೂ ಪಿಡಿಒ ರಾಘವೇಂದ್ರ ಮಾತನಾಡಿ ಬದು ನಿರ್ಮಾಣ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ದನ ಕರು ಸಾಕಾಣಿಕೆ ಶೆಡ್ಡುಗಳಿಗೆ ಅವಶ್ಯಕತೆ ಇರುವವರು ನೋಂದಣಿ ಮಾಡಿಸಿಕೊಳ್ಳಿ. ಯಾರಿಗೆ ಅವಶ್ಯಕತೆ ಇದೆ ಅವರ ಹೆಸರನ್ನು ಸೂಚಿಸಿದರೆ ಅಂತಹ ಕಾಮಗಾರಿಗಳನ್ನು ನೀಡಲು, ಕಾಮಗಾರಿ ಪಟ್ಟಿ ತಯಾರಿಸಿ ಮುಂದಿನ ಆರ್ಥಿಕ ವರ್ಷದಿಂದ ಆ ಕಾಮಗಾರಿಗಳನ್ನು ಮಾಡಿಕೊಳ್ಳಲಿಕ್ಕೆ ಅನುಕೂಲವಾಗಲಿದೆ. ಆದ್ದರಿಂದ ಈ ಸಭೆಯಲ್ಲಿ ಭಾಗವಹಿಸಿದ ತಾವೆಲ್ಲರೂ ಕೂಡ ಈ ಮಾಹಿತಿಯನ್ನು ತಿಳಿದುಕೊಂಡು ಇನ್ನು ಯಾರಾದರೂ ಈ ಸಭೆಯಲ್ಲಿ ಭಾಗವಹಿಸ ಇದ್ದರೆ ಅವರಿಗೆ ಮಾಹಿತಿ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ 15 ದಿನಗಳವರೆಗೆ ಕಾಮಗಾರಿ ಪಟ್ಟಿ ಸಲ್ಲಿಸಲು ಅವಕಾಶವಿದೆ. ತಮಗೆ ಬೇಕಾಗಿರುವಂತ ಕಾಮಗಾರಿ ಪಟ್ಟಿ ನೀಡಿದರೆ ಮುಂದಿನ ಆರ್ಥಿಕ ವರ್ಷದಲ್ಲಿ ಈ ಕಾಮಗಾರಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ತಿಪ್ಪೇಸ್ವಾಮಿ, ಸದಸ್ಯರಾದ ಎಚ್ ಶಿವಣ್ಣ, ಜಯಂತಿಬಾಯಿ, ಶಾಂತಮ್ಮ ನಿರಂಜನ್ ಸೇರಿದಂತೆ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಎಸ್ ಯೋಗೇಂದ್ರ, ಗಣಕಯಂತ್ರ ನಿರ್ವಾಹಕ ಜಿ ತಿಪ್ಪೇರುದ್ರಪ್ಪ, ಬಿಎಫ್ಟಿ ಜಿ.ಎಂ. ಚಿದಾನಂದ, ಕಾಯಕ ಮಿತ್ರ ಜಿ.ಟಿ. ಭವ್ಯ ಸೇರಿದಂತೆ ಮನುಮೈನಯ್ಯಹಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading