September 15, 2025
IMG-20241125-WA0139.jpg

ಚಳ್ಳಕೆರೆ: ಕನ್ನಡ ನಾಡಿನಲ್ಲಿ ಕನ್ನಡಿಗರ ಅತಿಯಾದ ಆಂಗ್ಲ ವ್ಯಾಮೋಹದಿಂದಾಗಿ ಕನ್ನಡ ಭಾಷೆ ನಾಡು ನುಡಿ ಸಂಸ್ಕೃತಿಗೆ ಅಪಾಯ ಉಂಟಾಗುತ್ತಿದ್ದು ಭಾಷೆಯನ್ನು ರಕ್ಷಿಸಿಕೊಳ್ಳಲು ಕನ್ನಡಪರ ಹೋರಾಟಗಾರರು ಸದಾ ಹೋರಾಟ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಸಾಹಿತಿ ಹಾಗೂ ಪತ್ರಕರ್ತ ಕೊರಲಕುಂಟೆ ತಿಪ್ಪೇಸ್ವಾಮಿ ವಿಷಾದ ವ್ಯಕ್ತಪಡಿಸಿದರು. 

ನಗರದ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಎನ್ ಜಯಣ್ಣ ಬಿಎಡ್ ಮಹಾವಿದ್ಯಾಲಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾತೃಭಾಷೆ ಕನ್ನಡಿಗರ ಬದುಕಿನ ಅಸ್ಮಿತೆ ಆಗಬೇಕಿದೆ ಕನ್ನಡಿಗರಿಗೆ ಮಾತೃಭಾಷೆಯನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಸಾರ್ವಜನಿಕರಿಂದ ಆಯ್ಕೆ ಆದ ಜನಪ್ರತಿನಿಧಿಗಳೇ ಸಭೆ ಸಮಾರಂಭಗಳಲ್ಲಿ ಕನ್ನಡ ಭಾಷೆಯನ್ನು ಬಳಸದೆ ಇತರೆ ಭಾಷೆಗಳ ಮಾರು ಹೋಗುವುದನ್ನು ಕಂಡಿದ್ದೇವೆ ಕನ್ನಡಿಗರಾದ ನಾವು ಭಾಷೆಯ ಬೆಳವಣಿಗೆಯಲ್ಲಿ ಸದಾ ಜಾಗೃತಿಯನ್ನು ವಹಿಸುವುದು ಅನಿವಾರ್ಯತೆಯಾಗಿದೆ ಸರ್ಕಾರ ಕನ್ನಡ ಭಾಷೆಯನ್ನು ಕೇವಲ ಆದೇಶಗಳಲ್ಲಿ ರಕ್ಷಣೆ ಮಾಡುತ್ತಿದ್ದು ಕಾರ್ಯರೂಪಕ್ಕೆ ತರವಲ್ಲಿ ವಿಫಲವಾಗಿದೆ ಇಂತಹ ಸಂದರ್ಭಗಳಲ್ಲಿ ಹೋರಾಟ ಮಾಡಿದ ಕನ್ನಡಪರ ಹೋರಾಟಗಾರರನ್ನು ಬಂಧಿಸುವ ಕೆಲಸವು ಸಹ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಹ ಕನ್ನಡ ಮಾಧ್ಯಮ ಎಂದು ಸರ್ಕಾರದಿಂದ ಅನುಮತಿ ಪಡೆದು ಆಂಗ್ಲ ಭಾಷೆಯಲ್ಲಿ ಬೋಧನೆ ಮಾಡುತ್ತಿರುವ ಶಾಲೆಗಳು ಹೆಚ್ಚಾಗುತ್ತಿದೆ ಇಂತಹ ಶಾಲೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಸಹ ಹಿಂದೇಟು ಹಾಕುತ್ತಿದೆ ಇಂದಿನ ಪೋಷಕರು ತಮ್ಮ ಮಕ್ಕಳು ಕನ್ನಡ ಭಾಷೆಯಲ್ಲಿ ಕಲಿತರೆ ಭವಿಷ್ಯವಿಲ್ಲ ಎಂಬ ಮನಸ್ಥಿತಿ ಹೊಂದಿರುವುದರಿಂದ ಇಂದು ಕನ್ನಡ ಭಾಷೆಗೆ ಆತಂಕ ಎದುರಾಗಿದೆ ಮುಂದಿನ ದಿನಗಳಲ್ಲಿ ಯುವ ಜನತೆ ಕನ್ನಡ ಸಾಹಿತ್ಯಗಳನ್ನು ಓದುವ ಮೂಲಕ ಕನ್ನಡದ ಭಾಷೆಯ ರಕ್ಷಣೆಗೆ ಹೆಗಲಾಗಬೇಕಿದೆ ಎಂದರು.

ಸಾಹಿತಿಗಳಾದ ಶಬ್ರಿನಾ ಮಹಮ್ಮದ್ ಅಲಿ ಮಾತನಾಡಿ ಕನ್ನಡ ನಾಡಿನಲ್ಲಿ ಜನಿಸಿದ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಪ್ರೀತಿಸುವಂತಾಗಬೇಕು ಕನ್ನಡವನ್ನು ವ್ಯವಹಾರಿಕವಾಗಿ ಬಳಸಿದಾಗ ಮಾತ್ರ ಭಾಷೆಯು ಬೆಳವಣಿಗೆ ಹೊಂದಲು ಸಾಧ್ಯ ಕನ್ನಡವು ವಿಶ್ವ ಲಿಪಿಯ ರಾಣಿಯಾಗಿದ್ದು ವಿಜ್ಞಾನ ಭಾಷೆಯಾಗಿ ರೂಪುಗೊಂಡಿದೆ ಕನ್ನಡಿಗರಲ್ಲಿ ಭಾಷೆಯ ಬಗ್ಗೆ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕಿದ್ದು ಕನ್ನಡ ಪರ ಹೋರಾಟಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಡಿಆರ್ ಪ್ರಮೀಳಾ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಹೇಮಂತ್ ರಾಜ್ ಉಪನ್ಯಾಸಕ ರಾಘವೇಂದ್ರ ನಾಯಕ ವಿಶ್ವನಾಥ್ ಎಂ ಎಸ್ ವಾಣಿಶ್ರೀ ಗೀತಾ ನಾಗರಾಜ್ ರಂಗಸ್ವಾಮಿ ಸಾಹಿತಿ ನಾಗೇಂದ್ರಪ್ಪ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading