ಚಳ್ಳಕೆರೆ ನ.25 ನಗರಸಭೆ ವ್ಯಾಪ್ತಿಯ ತಮ್ಮ ಆಸ್ತಿಗಳಿಗೆ ಮನೆ ಬಾಗಿಲಿಗೆ ಬಂದು ಇ ಖಾತ ಮಾಡಿಕೊಡಲಾಗುವುದು ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ಪೌರಾಯುಕ್ತ ಜಗರೆಡ್ಡಿ ತಿಳಿಸಿದ್ದಾರೆ.
ಚಳ್ಳಕೆರೆ ನಗರದ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೇ,
ಮಾನ್ಯ ಜಂಟಿ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ರವರು
ಸೂಚಿಸಿರುವಂತೆ ದಿನಾಂಕ:25-11-2024 ರಿಂದ 24-12-2024ರವರೆಗೆ ಚಳ್ಳಕೆರೆ
ನಗರಸಭೆ ವ್ಯಾಪ್ತಿಯಲ್ಲಿ ಇ-ಖಾತಾ ಆಂದೋಲನವನ್ನು ಹಮ್ಮಿಕೊಂಡಿದ್ದು, ಅದರಂತೆ
ನಗರಸಭೆಯಿಂದ ಪ್ರತಿ ವಾರ್ಡ್‌ಗಳಲ್ಲಿ ಸ್ಥಳದಲ್ಲಿಯೇ ಇ-ಖಾತಾ ನೀಡುವ ಸೌಲಭ್ಯವನ್ನು
ಒದಗಿಸುವ ದೃಷ್ಟಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಿಮ್ಮ ನಿಮ್ಮ
ವಾರ್ಡ್‌ಗಳಲ್ಲಿ ಇ-ಖಾತಾ ಪಡೆಯದೇ ಇರುವ ಆಸ್ತಿ ಮಾಲೀಕರುಗಳು ಸಂಬಂಧಿಸಿದ
ದಾಖಲಾತಿಗಳನ್ನು ನೀಡಿ ಇ-ಖಾತಾ ಪಡೆಯಬಹುದಾಗಿರುತ್ತದೆ.
ಹಾಗೂ
ಕೆ.ಎಂ-ಎಫ್-24 ಆಸ್ತಿ ಕಣಜದಲ್ಲಿ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಆನೈನ್
ತಂತ್ರಾಂಶದಲ್ಲಿ ಕಾಲೋಚಿತಗೊಳಿಸಲು ಸಂಬಂಧಿಸಿದ ದಾಖಲಾತಿಗಳನ್ನು ನೀಡಲು
ಹಾಗೂ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕಗಳನ್ನು ತಪ್ಪದೇ
ಪಾವತಿಸಿ ನಗರದ ಅಭಿವೃದ್ಧಿಗೆ ನಗರಸಭೆಯೊಂದಿಗೆ ಸಹಕರಿಸಲು ಕೋರಿದ್ದಾರೆ