March 17, 2026
IMG-20251025-WA0174.jpg

ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.ನಾಯಕನಹಟ್ಟಿ :: ಮಹರ್ಷಿ ವಾಲ್ಮೀಕಿಯವರು ಪವಿತ್ರ ರಾಮಾಯಣ ರಚನೆ ಮೂಲಕ ಜೀವನ ಮೌಲ್ಯಗಳು ಜಗತ್ತಿಗೆ ತಿಳಿಸಿದ್ದಾರೆ ಎಂದು ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಎಸ್.ಒ. ತಿಪ್ಪೇಸ್ವಾಮಿ. ಹೇಳಿದರು.

ಶನಿವಾರ ಸಮೀಪದ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೀಮಗೊಂಡನಹಳ್ಳಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಆಯೋಜಿಸಿದ ಮೂರನೇ ವರ್ಷದ ಮಹಾಋಷಿ ವಾಲ್ಮೀಕಿ ಜಯಂತಿಯಲ್ಲಿ ಮಹಾಋಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ಗ್ರಾಮದ ಪ್ರತಿಯೊಬ್ಬರು ಮಹಾಋಷಿ ವಾಲ್ಮೀಕಿ ರವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ಪ್ರೇರಣೆಯಾಗಬೇಕೆಂದರು.ಗ್ರಾಮದ ಮುಖಂಡ ಜಿಡಿಆರ್ ತಿಪ್ಪೇಸ್ವಾಮಿ ಮಾತನಾಡಿದರು ಮಹರ್ಷಿ ಆದಿಕವಿ ವಾಲ್ಮೀಕಿ ಅವರ ಜಯಂತಿಯನ್ನು ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಆಚರಣೆ ಮಾಡುತ್ತಿದ್ದೇವೆ ಗ್ರಾಮದ ಪ್ರತಿಯೊಬ್ಬರು ಅಣ್ಣತಮ್ಮಂದಿರಂತೆ ಸೌಹಾರ್ದತೆಯಿಂದ ಆಚರಣೆ ಮಾಡುತ್ತೇವೆ ಗ್ರಾಮದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಪುಸ್ತಕ ಕೊಡಿಸಿ ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.ಗೌಡಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಿ.ಒ ಓಬಳೇಶ್ ಮಾತನಾಡಿದರು ಮಹರ್ಷಿ ವಾಲ್ಮೀಕಿ ತತ್ವ ಸಂದೇಶ ಜಗತ್ತಿಗೆ ಆದರ್ಶವಾಗಿದ್ದು ಮಹರ್ಷಿ ವಾಲ್ಮೀಕಿ ಸಮಾಜದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಶಿಕ್ಷಣದ ಮೂಲಕ ಸಮಾಜವು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಮುಖಂಡ ಹನುಮಣ್ಣ, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ಜಿ.ಹೆಚ್. ರಂಗಸ್ವಾಮಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬಿ ಶಿವಮೂರ್ತಿ,ಓ. ನಾಗರಾಜ್ ನಾಯಕ, ಜಿ ಆರ್ ಶಿವಮೂರ್ತಿ, ಗಂಗಣ್ಣ, ಶಿವಣ್ಣ, ಗೋ. ಬಸಯ್ಯ, ಸಣ್ಣ ರಂಗಪ್ಪ ಕೆಇಬಿ ಅಜಯ್, ಗೌತಮ್ ಗೌಡ, ಸೇರಿದಂತೆ ಸಮಸ್ತ ಭೀಮಗೊಂಡನಹಳ್ಳಿ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading